• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Dr B Yashovarma: ಎಸ್‌ಡಿಎಂ ಕಾಲೇಜು ಮಾಜಿ ಪ್ರಾಂಶುಪಾಲ ಯಶೋವರ್ಮಾ ನಿಧನ

|
Google Oneindia Kannada News

ಮಂಗಳೂರು,ಮೇ 23 : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪತ್ನಿ ಡಾ. ಹೇಮಾವತಿ ಹೆಗ್ಗಡೆಯವರ ಸಹೋದರ ಡಾ. ಬಿ ಯಶೋವರ್ಮಾ (66) ಭಾನುವಾರ ನಿಧನರಾಗಿದ್ದಾರೆ. ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.

ಡಾ. ಬಿ ಯಶೋವರ್ಮ ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದರು. ಯಶೋವರ್ಮ ಅವರು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದ ಹಿನ್ನಲೆಯಲ್ಲಿ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮಧ್ಯರಾತ್ರಿ ನಿಧರಾಗಿದ್ದಾರೆ.

ಡಾ. ಬಿ. ಯಶೋವರ್ಮ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು ಮತ್ತು ಎಸ್‌ಡಿಎಂಸಿ ಉಜಿರೆ ಸೇರಿದಂತೆ ಎಸ್‌ಡಿಎಂಇ ಸೊಸೈಟಿ ಮತ್ತು ಸೊಸೈಟಿಯಿಂದ ನಿರ್ವಹಿಸಲ್ಪಡುವ 56 ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ.

   RCB ಆಟಗಾರರು ಪಯಣ ಈಗ ಕೋಲ್ಕತಾ ಕಡೆಗೆ | #Cricket | Oneindia Kannada

   1986ರಲ್ಲಿ ಸೈಕಾಲಜಿಯಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ಅವರು ಸಸ್ಯಶಾಸ್ತ್ರದ ಬಗ್ಗೆ ತೀವ್ರ ಉತ್ಸಾಹಿಯಾಗಿದ್ದರು. ಅವರ ಹೆಸರಿನಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳೂ ಬಂದಿವೆ. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದರು.

   English summary
   Dharmasthala Veerendra Heggade's brother in-law and SDM collage former principle Dr. Yashovarma (66) passed away on Sunday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X