ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಬ್ಬೀ ಸಮುದ್ರ ಪ್ರಕ್ಷುಬ್ಧ; ಪೆಣಂಬೂರು ಬೀಚ್‌ನಲ್ಲಿ ತೀವ್ರ ಕಡಲ್ಕೊರೆತ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 10: ವಾಯುಭಾರ ಕುಸಿತ ಹಿನ್ನಲೆಯಲ್ಲಿ ಅರಬ್ಬೀ ಸಮುದ್ರ ಮತ್ತೆ ಪ್ರಕ್ಷುಬ್ಧವಾಗಿದೆ. ಮಂಗಳೂರಿನ ಪೆಣಂಬೂರು, ಸೋಮೇಶ್ವರ, ಉಳ್ಳಾಲ ಭಾಗದಲ್ಲಿ ಸಮುದ್ರದ ಅಬ್ಬರ ಜಾಸ್ತಿಯಾಗಿದ್ದು, ಅಲೆಗಳ ಹೊಡೆತಕ್ಕೆ ಹಲವೆಡೆ ಕಡಲ್ಕೊರೆತವಾಗಿದೆ.

ಪೆಣಂಬೂರು ಬೀಚ್ ಬಳಿ ಭಾರೀ ಕಡಲ್ಕೊರೆತವಾಗಿದ್ದು, ಸಮುದ್ರ ಬದಿಯ ಅಂಗಡಿಗಳಿಗೂ ಭಾರೀ ಹಾನಿಯಾಗಿದೆ. ಪ್ರವಾಸಿಗರು ಮತ್ತು ಮೀನುಗಾರರು ಕಡಲಿಗೆ ಇಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶವಿದ್ದರೂ ಪಣಂಬೂರು ಬೀಚ್‌ಗೆ ಆಗಮಿಸಿರುವ ಪ್ರವಾಸಿಗರು, ಸಮುದ್ರಕ್ಕಿಳಿಯದಂತೆ ಹಾಕಿದ್ದ ತಡೆಬೇಲಿಯನ್ನು ದಾಟಿ ಮೋಜು ಮಾಡಿದ್ದಾರೆ.

Mangaluru: Arabian Sea Is Turbulent; Sea Erosion In Penambur Beach

ಸಮುದ್ರ ಬದಿಗೆ ಹಗ್ಗ ಕಟ್ಟಿ ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ಫಲಕ ಹಾಕಿದ್ದರೂ, ಪ್ರವಾಸಿಗರು ಮಾತ್ರ ಇದನ್ನು ಕ್ಯಾರೇ ಅನ್ನದೇ ಸಮುದ್ರಕ್ಕಿಳಿಯಲು ಯತ್ನಿಸಿದ್ದಾರೆ. ಸ್ಥಳದಲ್ಲಿ ನಿಯೋಜಿಸಿದ ಪೊಲೀಸ್ ಸಿಬ್ಬಂದಿ ನಿಯಮ ಮೀರಿದ ಯುವಕರನ್ನು ಚದುರಿಸಿದ್ದಾರೆ.

ಇನ್ನು ಚಂಡಮಾರುತದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಶುಕ್ರವಾರ ತಡರಾತ್ರಿ ಬಂಟ್ವಾಳದ ವಿದ್ಯಾಗಿರಿಯಲ್ಲಿ ಮನೆ ಕುಸಿತವಾಗಿದೆ.

Mangaluru: Arabian Sea Is Turbulent; Sea Erosion In Penambur Beach

Recommended Video

Rockline Venkatesh ವಜ್ರಮುನಿ ಹೆಸರು ಬಳಸುವ ಅವಶ್ಯಕತೆ ಇಲ್ಲಾ!! : Srikanta Swamy| Oneindia Kannada

ನವೀನ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದಿರುವ ಹಿನ್ನಲೆಯಲ್ಲಿ ಮನೆಯ ಸೊತ್ತುಗಳಿಗೆ ಹಾನಿಯಾಗಿದೆ. ಮನೆ ಕುಸಿದ ಸಂಧರ್ಭದಲ್ಲಿ ಮನೆಯಲ್ಲಿ ನವೀನ್ ಮತ್ತು ಅವರ ಮಗುವಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

English summary
Arabian sea is turbulent in Dakshina Kannada district and also sea erosion in Penambur Beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X