ಜನವರಿಯಲ್ಲಿ ಬರಲಿದೆ ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 20 : ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಹೇರುವುದರೊಂದಿಗೆ ಬಟ್ಟೆ ಚೀಲಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ. ಅದಕ್ಕೆ ಪೂರಕವೆಂಬಂತೆ ಸಂಪೂರ್ಣ ಪರಿಸರ ಸ್ನೇಹಿಯಾಗಿರುವ ಎನ್ವೀಗ್ರೀನ್ ಬ್ಯಾಗ್‌ ಮಾರುಕಟ್ಟೆಗೆ ಬರುತ್ತಿದೆ.

ಹೌದು, ರೈತರು ಬೆಳೆದ ಬೆಳೆಗಳಿಂದ ಬರುವ ತ್ಯಾಜ್ಯ, ತರಕಾರಿ ತ್ಯಾಜ್ಯಗಳನ್ನೇ ಉಪಯೋಗಿಸಿ ಈ ಬ್ಯಾಗನ್ನು ತಯಾರಿಸಲಾಗಿದ್ದು, ಬ್ಯಾಗ್‌ನಲ್ಲಿ ನೀರಿನಂಶವೂ ಇರುತ್ತದೆ. ತರಕಾರಿಯಿಂದ ತಯಾರು ಮಾಡಿದ ಎಣ್ಣೆಯನ್ನೂ ಇದಕ್ಕೆ ಬಳಸಲಾಗಿದೆ.

ಈ ನಡುವೆ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಲುವಾಗಿ ಜಾಗೃತಿ ನಡೆಯುತ್ತಿರುವಾಗಲೇ ಕತಾರ್ ಮೂಲದ ಎನ್ವೀಗ್ರೀನ್ ಸಂಸ್ಥೆಯು ದೇಶದಲ್ಲೇ ಮೊದಲ ಬಾರಿಗೆ ಈ ತರಕಾರಿ ತ್ಯಾಜ್ಯಗಳಿಂದ ಕ್ಯಾರಿ ಬ್ಯಾಗ್‌ ತಯಾರಿಸಿ ಪರಿಸರ ಸ್ನೇಹಿ ಚೀಲಗಳ ಪ್ರಪಂಚವನ್ನು ತೆರೆಯುತ್ತಿದೆ. ಜನವರಿ ತಿಂಗಳಲ್ಲಿ ಈ ಎನ್ವೀಗ್ರೀನ್ ಕೈ ಚೀಲಗಳು ದೇಶಾದ್ಯಂತ ಬಿಡುಗಡೆಯಾಗಲಿವೆ.

ಸ್ಥಾಪಕ

ಸ್ಥಾಪಕ

ಎನ್ವೀಗ್ರೀನ್ ಸಂಸ್ಥೆಯ ಕಾರ್ಖಾನೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ಸ್ಥಾಪಕ ಅಶ್ವತ್ಥ್ ಹೆಗ್ಡೆ ಮೂಲತಃ ಮಂಗಳೂರಿನವರು. ದೇಶ ವಿದೇಶಗಳಲ್ಲಿರುವ ವಿಜ್ಞಾನಿ ಸ್ನೇಹಿತರ ಸಹಕಾರದೊಂದಿಗೆ ನಾಲ್ಕು ವರ್ಷಗಳ ಸಂಶೋಧನೆಯ ಬಳಿಕ ಈ ಬ್ಯಾಗ್‌ ತಯಾರಿಕೆಗೆ ಮುಂದಡಿಯಿಟ್ಟಿದ್ದಾರೆ. ಜನವರಿ ಬಳಿಕ ಬ್ಯಾಗ್‌ ದೇಶಾದ್ಯಂತ ಎಲ್ಲ ದೊಡ್ಡ ಮಟ್ಟದ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ವಿವಿಧ ಗಾತ್ರ ಮತ್ತು ವಿನ್ಯಾಸಗಳಲ್ಲಿ ಬ್ಯಾಗ್‌ ಸಿದ್ಧ ಪಡಿಸಲಾಗಿದೆ.

ಅಶ್ವತ್ಥ್ ಹೆಗ್ಡೆ

ಅಶ್ವತ್ಥ್ ಹೆಗ್ಡೆ

ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಷೇಧವಿದೆ. ಪರ್ಯಾಯವಾಗಿ ಬಟ್ಟೆ ಕೈಚೀಲ ಬಳಸಲು ಜನರಿಗೆ ಅವಕಾಶವಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಖರೀದಿಗೆ ತೆರಳುವಾಗ ಅದನ್ನು ಮರೆತು ಹೋಗುವುದೇ ಅಧಿಕ. ಈ ನಿಟ್ಟಿನಲ್ಲಿ ಜನತೆಗೆ ಪರ್ಯಾಯ ಒದಗಿಸಿಕೊಡಬೇಕು ಎಂಬುದನ್ನು ಚಿಂತಿಸಿದಾಗ ಮೊಳೆತದ್ದೇ ಎನ್ವೀಗ್ರೀನ್‌ ಚೀಲ ತಯಾರಿ. ಭೂಮಿತಾಯಿ ನಮ್ಮನ್ನು ಪೊರೆಯುತ್ತಾಳೆ. ಅವಳಿಗೂ ನಾವು ಒಂದಷ್ಟು ಕೊಡುಗೆ ನೀಡಬೇಕು. ಪರಿಸರಸ್ನೇಹಿ ವಸ್ತುಗಳನ್ನು ಬಳಸಿದರೆ ಅವಳಿಗೆ ಅದೇ ಕೊಡುಗೆ. ಈ ಕೈಚೀಲ ಶೇ. 100ರಷ್ಟು ನಿಸರ್ಗ ಸ್ನೇಹಿಯಾಗಿದೆ.

ವಿಶೇಷತೆ

ವಿಶೇಷತೆ

ಇತರ ಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಕರಗಲು ಸುಮಾರು 200 ವರ್ಷಗಳೇ ಬೇಕಾಗಬಹುದು. ಎನ್ವೀಗ್ರೀನ್‌ ಬ್ಯಾಗ್‌ ಶೇ. 100ರಷ್ಟು ಮಣ್ಣಿನಲ್ಲಿ ಕರಗುವ ಗುಣವನ್ನು ಹೊಂದಿದ್ದು, ಎರಡೇ ತಿಂಗಳಲ್ಲಿ ಕರಗುತ್ತದೆ. ನೀರಿನಲ್ಲಿ ಅದರಲ್ಲೂ ಬಿಸಿ ನೀರಿನಲ್ಲಿ ಬಹುಬೇಗನೇ ಕರಗುತ್ತದೆ. ಬ್ಯಾಗ್‌ ಮರುಬಳಕೆಯೂ ಸಾಧ್ಯ. ಕರಗುವ ಗುಣ ಹೊಂದಿರುವುದರಿಂದ ಬಿಸಿ ಪದಾರ್ಥಗಳನ್ನು ಹೊರತುಪಡಿಸಿ ಉಳಿದೆಲ್ಲ ವಸ್ತುಗಳನ್ನು ಬ್ಯಾಗ್‌ನಲ್ಲಿ ಹಾಕಬಹುದು ಎನ್ನುತ್ತಾರೆ ಸಂಸ್ಥೆಯ ಪಿಆರ್‌ಒ ಮನೀಶಾ. ಅಕಸ್ಮತ್ತಾಗಿ ದನ ಮತ್ತಿತರ ಪ್ರಾಣಿಗಳು ಈ ಕೈಚೀಲವನ್ನು ತಿಂದು ಬಿಟ್ಟರೂ ಪ್ಲಾಸ್ಟಿಕ್‌ನಂತೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ನಿಯಂತ್ರಣ

ನಿಯಂತ್ರಣ

ಎನ್ವೀಗ್ರೀನ್ ಕ್ಯಾರಿ ಬ್ಯಾಗ್‌ನಲ್ಲಿ ಪ್ಲಾಸ್ಟಿಕ್‌ ಅಂಶಗಳಿಲ್ಲದೇ ಪಕ್ಕಾ ನಿಸರ್ಗಸ್ನೇಹಿಯಾಗಿದೆ. ಅಲ್ಲದೇ ಇದು ಬಳಕೆಗೆ ಯೋಗ್ಯವಾಗಿದೆ ಎಂದು ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗ್ರೀನ್‌ ಸಿಗ್ನಲ್‌ ನೀಡಿದೆ. ಸೆಂಟ್ರಲ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಇನ್‌ಸ್ಟಿಟ್ಯೂಟ್‌ನಿಂದಲೂ ಕೈಚೀಲ ಬಳಕೆಗೆ ಸಹಮತ ದೊರೆತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಏಷ್ಯಾ ಮೂಲದ ಪ್ರಯೋಗಾಲಯದಿಂದಲೂ ಇದು ಶೇ. 100ರಷ್ಟು ಮಣ್ಣಿನಲ್ಲಿ ಕರಗುವ ಬ್ಯಾಗ್‌ ಆಗಿದೆ ಎಂಬುದಾಗಿ ದೃಢಪಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an effort to combat plastic pollution, Indian startup EnviGreen has come up with a combination of natural starch and vegetable oils that looks and feels just like plastic, but is 100 percent organic, biodegradable and eco-friendly.
Please Wait while comments are loading...