ಮಂಗಳೂರಿನ ದೇವಸ್ಥಾನಗಳಲ್ಲೂ ಕ್ಯಾಶ್ ಲೆಸ್ ಕಾಣಿಕೆ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜನವರಿ. 03 : ಮಾಲ್, ಹೋಟೆಲ್, ಅಂಗಡಿ ಸೇರಿದಂತೆ ಹಲವು ಕಡೆ ಪೇಟಿಯಂ ಮೂಲಕ ವ್ಯವಹಾರ ಮಾಡುವುದುನ್ನು ನೀವು ಕೇಳಿದ್ದೀರಿ, ಆದರೆ, ದೇವಸ್ಥಾನಗಳಲ್ಲೂ ಪೇಟಿಎಂ ಮೂಲಕ ಕಾಣಿಕೆ ಹಾಕಬಹುದು ಎಂಬುವುದನ್ನು ಕೇಳಿದ್ದೀರಾ?

ಅರೇ.. ಏನಪ್ಪಾ ಇದು ಪೇಟಿಎಂ ಮೂಲಕ ಕಾಣಿಕೆ ಹಾಕಬಹುದಾ? ಅದು ಹೇಗಂತೀರಾ? ಇಲ್ಲಿದೆ ಈ ಸ್ಟೋರಿ ಓದಿ. ಹೌದು.. ಪ್ರಧಾನಿ ನರೇಂದ್ರ ಮೋದಿ ಕ್ಯಾಶ್ ಲೆಸ್ ಸಮಾಜದ ಪರಿಕಲ್ಪನೆಗೆ ಪೂರಕವಾಗಿ ಮಂಗಳೂರಿನ ದೇವಸ್ಥಾನಗಳಲ್ಲಿ ನಗದುರಹಿತ ದಕ್ಷಿಣೆಯಲ್ಲಿ ಮುಂದಾಗಿವೆ.

ಮಂಗಳೂರಿನ ಕಾತ್ಯಾಯನಿ ದೇವಸ್ಥಾನ ಹಾಗೂ ಶ್ರೀಕೃಷ್ಣ ದೇವಸ್ಥಾನಗಳ ಅಲ್ಲಿನ ಅರ್ಚಕರು ದೇವಸ್ಥಾನಗಳಲ್ಲೂ ಪೇಟಿಎಂ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಭಕ್ತರು ಪೇಟಿಎಂ ಮೂಲಕವೇ ಕಾಣಿಕೆ ಹಾಕುತ್ತಿದ್ದಾರೆ.

Mangalore temples move towards cashless offerings by using Paytm

ಈ ಬಗ್ಗೆ ದೇವಸ್ಥಾನದ ಅರ್ಚಕ ನಮ್ಮ ಒನ್ ಇಂಡಿಯಾ ಜತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ, ಪ್ರಧಾನಿ ಮೋದಿಯವರು ಮಾಡಿರುವುದು ಜನಪರ ಯೋಜನೆಯಾಗಿದೆ.

ಇದರಲ್ಲಿ ನಾವು ಕೂಡ ಭಾಗಿಯಾಗಬೇಕು. ಹೀಗಾಗಿ ನಾವು ದೇವಸ್ಥಾನದಲ್ಲಿ ಪೇಟಿಎಂ ಮೂಲಕ ದಕ್ಷಿಣೆ ಪಡೆಯುತ್ತಿದ್ದೇವೆ.

ಸಾಧ್ಯವಾದಷ್ಟು ಭಕ್ತರು ಪೇಟಿಎಂ ಮೂಲಕ ಕಾಣಿಕೆ ಹಾಕುತ್ತಿದ್ದಾರೆ ಎಂದು ದೇವಸ್ಥಾನದ ಅರ್ಚಕ ಕೃಷ್ಣಾನಂದ ಭಟ್ ಒನ್ ಇಂಡಿಯಾಕ್ಕೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangalore temples move towards cashless offerings by using Paytm. Mangaluru katyayani temple and Shri Krishna temple offer paytm service to its devotees.
Please Wait while comments are loading...