ಕೃಷ್ಣ ಜನ್ಮಾಷ್ಟಾಮಿ: ಮಥುರಾದಲ್ಲಿ ಭದ್ರತೆ ಹೆಚ್ಚಳ
ಲಕ್ನೋ, ಆಗಸ್ಟ್ 19: ಶುಕ್ರವಾರ ನಡೆಯಲಿರುವ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಮಥುರಾ ನಗರ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಮತ್ತು ಸುತ್ತಮುತ್ತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಜ್‌ಭೂಮಿಯ ಪ್ರಮುಖ ದೇವಾಲಯಗಳಲ್ಲಿ ಮತ್ತು ಅದರ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿಶೇಷವಾಗಿ ಶ್ರೀಕೃಷ್ಣ ಜನ್ಮಸ್ಥಳದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಅಲ್ಲಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಕೃಷ್ಣ ಜನ್ಮಾಷ್ಟಾಮಿ ವೇಳೆ ಪ್ರಮುಖ ದೇವಸ್ಥಾನಗಳಲ್ಲಿ ಮೊಬೈಲ್ ಹಾಗೂ ನಗದು ಕಳ್ಳತನ, ಚೈನ್ ಕಸಿದುಕೊಂಡು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ತಡೆಯಲು ಮಫ್ತಿ ಉಡುಪಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಥುರಾ ಮತ್ತು ವೃಂದಾವನದ ಪ್ರತಿ ಪ್ರವೇಶ ದ್ವಾರದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ನಗರದೊಳಗೆ ಪ್ರವೇಶಕ್ಕೆ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.

ಏತನ್ಮಧ್ಯೆ, ಶ್ರೀಕೃಷ್ಣನಿಗೆ ಸಂಬಂಧಿಸಿದ ತಮ್ಮ ಪ್ರದರ್ಶನಗಳನ್ನು ಪ್ರಸ್ತುತಪಡಿಸಲು ದೇಶದ ವಿವಿಧ ಭಾಗಗಳಿಂದ ಆಹ್ವಾನಿಸಲಾದ ಕಲಾವಿದರ ನಡಿಗೆಯನ್ನು ಯುಪಿ ಕ್ಯಾಬಿನೆಟ್ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಗುರುವಾರ ಉದ್ಘಾಟಿಸಿದರು. ಯುಪಿ ಬ್ರಿಜ್ ತೀರ್ಥ ವಿಕಾಸ ಪರಿಷತ್ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಗರದಾದ್ಯಂತ ಪ್ರಮುಖ ರಸ್ತೆಗಳನ್ನು ಶೃಂಗಾರದ ಬಟ್ಟೆಗಳು ಮತ್ತು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಮಧ್ಯರಾತ್ರಿ ಅಭಿಷೇಕದ ಸಮಯದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶಕರಿಗೆ ಧಾರ್ಮಿಕ ಆಚರಣೆಯ ನಂತರ ಪ್ರಸಾದ ನೀಡಲಾಗುತ್ತಿತ್ತು. ಆದರೆ ಇದನ್ನು ಕೋವಿಡ್ ನಿರ್ಬಂಧಗಳಿಂದ ನಿಲ್ಲಿಸಲಾಗಿದೆ ಎಂದು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಕಾರ್ಯದರ್ಶಿ ಕಪಿಲ್ ಶರ್ಮಾ ತಿಳಿಸಿದ್ದಾರೆ.
ವೃಂದಾವನದ ರಾಧಾ ರಾಮನ್, ರಾಧಾ ದಾಮೋದರ್ ಮತ್ತು ತೆಧೆ ಖಂಬೆವಾಲಾ ದೇವಾಲಯಗಳಲ್ಲಿಯೂ ಸಹ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಈ ಪುರಾತನ ದೇವಾಲಯಗಳಲ್ಲಿ ಜನ್ಮಾಷ್ಟಮಿಯನ್ನು ಶುಕ್ರವಾರ ರಾತ್ರಿಯ ಬದಲು ಹಗಲಿನಲ್ಲಿ ಆಚರಿಸಲಾಗುತ್ತದೆ. ಶುಕ್ರವಾರ ಮಧ್ಯರಾತ್ರಿಯ ನಂತರ ಗೋಕುಲಕ್ಕೆ ಕೃಷ್ಣನ ಆಗಮನವನ್ನು ಆಚರಿಸಲು ಕೃಷ್ಣನ ಸಾಕು ಪೋಷಕರ ಸ್ಥಳವಾದ ಗೋಕುಲವು ಸಜ್ಜಾಗಿದೆ.

ಮಹಾಬನ್, ಬಲ್ದೇವ್, ಗೋವರ್ಧನ್ ಮತ್ತು ನಂದಗಾಂವ್ ದೇವಾಲಯಗಳಲ್ಲಿ ಜನ್ಮಾಷ್ಟಮಿಯ ಸಿದ್ಧತೆಗಳು ಭರದಿಂದ ಸಾಗಿವೆ. ಗೋಕುಲದ ನಿವಾಸಿಗಳು ಕೃಷ್ಣಾ ಜನ್ಮಾಷ್ಟಮಿಯ ಮರುದಿನ ಗೋಕುಲಕ್ಕೆ ಕೃಷ್ಣನ ಆಗಮನವನ್ನು "ದಧಿಕಾನ ಉತ್ಸವ" ದಲ್ಲಿ ಮೊಸರು ಮತ್ತು ಅರಿಶಿನ ಮಿಶ್ರಣವನ್ನು ಬಳಸಿ ಸಂಭ್ರಮದಿಂದ ಆಚರಿಸುತ್ತಾರೆ ಎಂದು ರಾಜಾ ಠಾಕೂರ್ ದೇವಸ್ಥಾನದ ಅರ್ಚಕ ಭಿಕೂ ಜಿ ಮಹಾರಾಜ್ ಹೇಳಿದ್ದಾರೆ.












Click it and Unblock the Notifications