Get Updates
Get notified of breaking news, exclusive insights, and must-see stories!

ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ

Arjun Tendulkar-Saaniya Chandhok Wedding: ಭಾರತೀಯ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇಂದು (ಮಾರ್ಚ್‌ 5) ಮುಂಬೈನಲ್ಲಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು, ಕ್ರೀಡಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಪಾಲ್ಗೊಂಡು ನವದಂಪತಿಗಳಿಗೆ ಶುಭಕೋರಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಮದುವೆಯ ಫೋಟೋಗಳು ಭಾರೀ ವೈರಲ್ ಆಗಿವೆ.

ಈ ಶುಭ ಸಮಾರಂಭಕ್ಕೆ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಗಮನ ಸೆಳೆದರು. ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಕ್ಕೂ ಕೆಲವೇ ಗಂಟೆಗಳ ಮೊದಲು ನಡೆದ ಈ ವಿವಾಹ ಮಹೋತ್ಸವವು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಸಚಿನ್ ಅವರ ಪುತ್ರನ ಮದುವೆಯ ಹಿನ್ನೆಲೆ ಇಡೀ ತೆಂಡೂಲ್ಕರ್ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Arjun Tendulkar Marries Saaniya Chandhok in Mumbai on Fans Cricket Stars wish newlyweds well

ಸಾಂಪ್ರದಾಯಿಕ ಉಡುಪಿನಲ್ಲಿ ಮದುವೆಗೆ ಆಗಮಿಸಿದ ಗಂಭೀರ್

ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಮದುವೆಗೆ ಗೌತಮ್ ಗಂಭೀರ್ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ಭಾರತ ತಂಡದ ಕೆಲವು ಆಟಗಾರರು ಸಹ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡವು ತಂಗಿದ್ದ ಅದೇ ಹೋಟೆಲ್‌ನಲ್ಲಿ ಮದುವೆ ಸಮಾರಂಭ ಆಯೋಜನೆ ಆಗಿದ್ದರಿಂದ, ಆಟಗಾರರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಯಿತು ಎನ್ನಲಾಗಿದೆ.

ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯಕ್ಕಾಗಿ ತಂಗಿದ್ದ ಹೋಟೆಲ್ ಮತ್ತು ವಿವಾಹದ ವೇದಿಕೆ ಒಂದೇ ಆಗಿತ್ತು. ಪಂದ್ಯದ ಒತ್ತಡದ ನಡುವೆಯೂ, ತಂಡದ ಸದಸ್ಯರು ತಮ್ಮ ಹೋಟೆಲ್ ಆವರಣದಲ್ಲೇ ನಡೆದ ಈ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು.

ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ

ಅರ್ಜುನ್ ಮತ್ತು ಸಾನಿಯಾ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಾನಿಯಾ ಚಾಂದೋಕ್ ಅವರು ಅತ್ಯಂತ ಪ್ರಭಾವಿ ಹಾಗೂ ಪ್ರತಿಷ್ಠಿತ ಕುಟುಂಬದಿಂದ ಬಂದವರು. ಇವರು ಗ್ರಾವಿಸ್ ಗ್ರೂಪ್ (Graviss Group) ಅಧ್ಯಕ್ಷ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ಅವರು ಕಳೆದ ಹಲವು ವರ್ಷಗಳಿಂದ ತೆಂಡೂಲ್ಕರ್ ಕುಟುಂಬದೊಂದಿಗೆ ನಿಕಟ ಒಡನಾಟ ಹೊಂದಿದ್ದಾರೆ. ವಿಶೇಷವಾಗಿ ಅರ್ಜುನ್ ಅವರ ಸಹೋದರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಸಾನಿಯಾ ಉತ್ತಮ ಗೆಳೆತನವನ್ನು ಹೊಂದಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಯಾವ ತಂಡದ ಪರ ಆಡುತ್ತಾರೆ?

ಅರ್ಜುನ್ ತೆಂಡೂಲ್ಕರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳನ್ನು ಆಡಿದ್ದು, ಬೌಲಿಂಗ್‌ ಮಾಡಿದ ಅವರು 114 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಒಟ್ಟು 13 ರನ್ ಗಳಿಸಿದ್ದಾರೆ. 2021ರಲ್ಲಿ ಮುಂಬೈ ತಂಡದ ಮೂಲಕ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅರ್ಜುನ್, ಸದ್ಯ ಉತ್ತಮ ಅವಕಾಶಗಳಿಗಾಗಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್-ರೌಂಡರ್ ಆಗಿ ಗುರುತಿಸಿಕೊಂಡಿರುವ ಅರ್ಜುನ್, ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಶ್ರಮಿಸುತ್ತಿದ್ದಾರೆ.

ಐಪಿಎಲ್ 2026ರ ಮಿನಿ ಹರಾಜಿಗಿಂತ ಮೊದಲು, ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅದರಂತೆಯೇ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಅವರು ಲಕ್ನೋ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಆರಂಭದಲ್ಲಿ, 2021ರ ಐಪಿಎಲ್ ಮಿನಿ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 20 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಆದರೆ, ಆ ಸೀಸನ್‌ನಲ್ಲಿ ಅವರಿಗೆ ಪಂದ್ಯ ಆಡಲು ಯಾವುದೇ ಅವಕಾಶ ಸಿಗಲಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+