ಆಗುಂಬೆ–ಶಿವಮೊಗ್ಗ ಮಾರ್ಗದಲ್ಲಿ ಹೆಚ್ಚಿದ ಹಿಟ್ ಅಂಡ್ ರನ್ ಪ್ರಕರಣ: ಸ್ಥಳೀಯರಲ್ಲಿ ಆತಂಕ
ತೀರ್ಥಹಳ್ಳಿ: ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗ ಮುಖ್ಯರಸ್ತೆ ಇದೀಗ ಜನರ ಪಾಲಿಗೆ ಸಾವಿನ ಹೆದ್ದಾರಿಯಾಗಿ ಪರಿಣಮಿಸುತ್ತಿದೆ. ಈ ಮಾರ್ಗದಲ್ಲಿ ಇತ್ತೀಚೆಗೆ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ರಸ್ತೆ ದಾಟುವುದು ಮಾತ್ರವಲ್ಲ, ವಾಕಿಂಗ್ ಮಾಡುವವರಿಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
10ಕ್ಕೂ ಹೆಚ್ಚು ಜನರ ಸಾವು, 50ಕ್ಕೂ ಹೆಚ್ಚು ಅಪಘಾತ
ಕಳೆದ ಮೂರು ತಿಂಗಳಲ್ಲಿ ಈ ರಸ್ತೆಯಲ್ಲಿ ನಡೆದ ಅಪಘಾತಗಳಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ವೇಗವಾಗಿ ಸಾಗುವ ವಾಹನಗಳಿಂದಾಗಿ ನಿರಪರಾಧಿಗಳು ಬಲಿಯಾಗುತ್ತಿರುವುದಕ್ಕೆ ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಲಾರಿ ಚಾಲಕ ನಿದ್ದೆಯ ಮಂಪರಿನಲ್ಲಿ ವ್ಯಕ್ತಿಯೊಬ್ಬರಿಗೆ ಗುದ್ದಿ ಹಿಟ್ ಆ್ಯಂಡ್ ರನ್ ಮಾಡಿದ್ದರಿಂದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ಬಿಳಲುಕೊಪ್ಪದ ಬಳಿ ನಡೆದಿದೆ. 3 ತಿಂಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಈ ರಸ್ತೆಯಲ್ಲಿ ಹಿಟ್ ಅಂಡ್ ರನ್ ಬಲಿ ಆಗಿದ್ದಾರೆ. ಪರಿಣಾಮವಾಗಿ ಅಪಘಾತಕ್ಕೆ ಒಳಗಾದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ನರಸಿಂಹ ಕೆ.ಎಸ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ದೊರೆತ ದಾಖಲೆಯಿಂದ ನರಸಿಂಹ ಕೆ.ಎಸ್ ಅವರು ಗಾರ್ಡರಗದ್ದೆಯವರು ಎಂದು ತಿಳಿದುಬಂದಿದೆ.

ಹೈವೇ ಉದ್ದಕ್ಕೂ ಅಪಘಾತಗಳು
ಆಗುಂಬೆ, ನಾಲೂರು, ಗುಡ್ಡೆಕೇರಿ, ಮೇಗರವಳ್ಳಿ, ಕೈಮರ, ತೀರ್ಥಹಳ್ಳಿ, ಕುಡುಮಲ್ಲಿಗೆ, ತೂದುರು, ಮಂಡಗದ್ದೆ, ಗಾಜನೂರು ಭಾಗದಲ್ಲಿ ರಸ್ತೆ ಚೆನ್ನಾಗಿ ಆಗಿರುವುದರಿಂದ ವಾಹನ ಸವಾರರು ಮಿತಿ ಮೀರಿದ ವೇಗಕ್ಕೆ ಅನೇಕರು ಬಲಿ ಆಗಿದ್ದಾರೆ ಸ್ಥಳೀಯರು ಆರೋಪಿಸಿದ್ದಾರೆ. ತೀರ್ಥಹಳ್ಳಿ ಹಾಗೂ ಆಗುಂಬೆಯ ನಡುವಿನ ಮುಖ್ಯರಸ್ತೆಯಲ್ಲಿ ದಿನಕ್ಕೊಂದರಂತೆ ಅಪಘಾತ ಪ್ರಕರಣಗಳು ನಡೆಯುತ್ತಿದೆ. ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನು ಕಂಡಿದ್ದಾರೆ. ಅಲ್ಲದೆ ಶಿವರಾಜಪುರದಲ್ಲಿ ಕಾರು ತೊಳೆಯುತ್ತಿದ್ದವನ ಮೇಲೆ ಕಾರು ಹರಿದು ಸಾವನ್ನು ಕಂಡಿದ್ದಾನೆ. ಹೀಗೆ ದುರಂತ ದಿನವೂ ಮಾಮೂಲಿ ಆಗಿದೆ.
ಸುರಕ್ಷತಾ ಕ್ರಮಕ್ಕೆ ಜನರ ಒತ್ತಾಯ
ಈ ಮಾರ್ಗದಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬ್ಯಾರಿಕೇಡ್‌ಗಳು, ರಸ್ತೆ ಹಂಪ್‌ಗಳು, ವೇಗ ಮಿತಿ ಫಲಕಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.












Click it and Unblock the Notifications