ಶಿವಮೊಗ್ಗ ಏರ್‌ಪೋರ್ಟ್: ನೈಟ್ ಲ್ಯಾಂಡಿಂಗ್‌ಗಾಗಿ ಉಪಕರಣ ಅಳವಡಿಕೆಗೆ ಮಣ್ಣು ಪೂರಕ, ಸಮೀಕ್ಷೆ ವರದಿ
ಶಿವಮೊಗ್ಗ: ಜಿಲ್ಲೆಯ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ವಿಮಾನಗಳ ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಬಂದಿದ್ದು, ವರದಿಯಲ್ಲಿ ಸಕರಾತ್ಮಕ ಅಂಶಗಳನ್ನು ತಿಳಿಸಲಾಗಿದೆ. ಅವುಗಳ ವಿವರ ಇಲ್ಲಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, 'ವಿಮಾನ ನಿಲ್ದಾಣದಲ್ಲಿ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್ (DoVR) ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆʼ ಎಂದು ತಿಳಿಸಿದರು. ಅತ್ಯಾಧುನಿಕ ತಾಂತ್ರಿಕ ಉಪಕರಣ ಅಳವಡಿಸಲು ಮೊದಲು ಆ ಪ್ರದೇಶದ ಭೂಮಿಯ ಸ್ಥಿರತೆ ಪರೀಕ್ಷಿಸುವುದು ಕಡ್ಡಾಯವಾಗಿದೆ. ಅದರಂತೆ DoVR ಸ್ಥಾಪಿಸಲು ಉದ್ದೇಶಿಸಲಾದ ಜಾಗದ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗ ಮಣ್ಣಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಉಪಕರಣ ಅಳವಡಿಕೆಗೆ ಮಣ್ಣು ಪೂರಕವಾಗಿದೆ ಎಂದು ದೃಢಪಟ್ಟಿದೆ.

ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, DoVR ಕೆಲಸ ಪ್ರಾರಂಭವಾಗಿದೆ ಎಂದು ನಂಜಯ್ಯನಮಠ ಅವರು ತಿಳಿಸಿದ್ದಾರೆ. ಈ ತಾಂತ್ರಿಕ ಸೌಲಭ್ಯವು ಕಾರ್ಯಗತಗೊಂಡರೆ, ವಿಮಾನಗಳು ರಾತ್ರಿ ವೇಳೆ ಹಾಗೂ ಮಂದ ವಾತಾವರಣ ಇರುವ ಸಂದರ್ಭದಲ್ಲೂ ಸುರಕ್ಷಿತವಾಗಿ ವಿಮಾನ ಇಳಿಯಲು ಸಹಕಾರಿಯಾಗಲಿದೆ.
ಆಗುಂಬೆ: ಘನ ವಾಹನಗಳ ಸಂಚಾರಕ್ಕೆ ಹಣ ವಸೂಲಿ ಆರೋಪ!
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶವಿದ್ದರೂ ಆಗುಂಬೆ ಘಾಟಿಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿರಂತರವಾಗಿ ಸಾಗಿದೆ. ಆದರೆ ಇದು ಸರ್ಕಾರದ ಅನುಮತಿಯಿಂದಲ್ಲ, ಬದಲಾಗಿ ಚೆಕ್ ಪೋಸ್ಟ್‌ನಲ್ಲಿ ನಡೆಯುತ್ತಿರುವ ಹಣದ ದಂಧೆ ಯಿಂದ! ರಾತ್ರಿ ಹತ್ತು ಗಂಟೆ ಕಳೆದರೆ ಸಾಕು, ಆಗುಂಬೆ ಚೆಕ್ ಪೋಸ್ಟ್ ಅಕ್ರಮದ ಅಡ್ಡೆಯಾಗಿ ಬದಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸರಿ ಸುಮಾರು 19 ರಿಂದ 20 ಅಡಿ ಉದ್ದದ ಗಾಡಿಗಳನ್ನು ರಾತ್ರಿಯ ವೇಳೆ ಹಣ ಪಡೆದುಕೊಂಡು ಆಗುಂಬೆ ಘಾಟಿಯಲ್ಲಿ ಬಿಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದವರನ್ನು ವಿಚಾರಿಸಿದರೆ ನಮಗೇನು ಗೊತ್ತಿಲ್ಲ ದಿನ ಹೋಗುತ್ತಿವೆ ಎಂಬ ಸಬೂಬು ನೀಡುತ್ತಿದ್ದಾರೆ. ಸಿಸಿಟಿವಿ ಹಾಳಾಗಿದೆ, ಅರಣ್ಯಾಧಿಕಾರಿಗಳು ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು 19 ಅಡಿ ಉದ್ದದ ಟ್ರಕ್/ಲಾರಿಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬುದು ತಿಳಿಯಬೇಕಿದೆ.
ಘಾಟಿಯಲ್ಲಿ ಪಾಸಾದ 19 ಅಡಿ ಟ್ರಕ್ ಗಾಡಿಗಳು ಎರಡು ಮೂರನೇ ಕಿರಿದಾದ ತಿರುವುಗಳಲ್ಲಿ ಗಾಡಿಯು ಸರಿಯಾಗಿ ತಿರುಗದೆ ಗಾಡಿಯ ಡ್ರೈವರ್ ಗಾಡಿಯನ್ನು ಹಿಂದೆ ಮುಂದೆ ತೆಗೆದು ಹರಸಾಹಸಪಟ್ಟು ಗಾಡಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಇನ್ನೂ ಕೆಲವು ಗಾಡಿಯವರು ರಾತ್ರಿಯ ಸಮಯವಾದ್ದರಿಂದ ಹಿಂದೆ ಮುಂದೆ ಗಾಡಿ ತೆಗೆಯಲು ಗೊತ್ತಾಗದೆ ರೋಡ್ ದಂಡೆಗೆ ಲಾರಿಗುದ್ದಿ ಘಾಟಿದಂಡೆ ಪುಡಿ ಪುಡಿ ಮಾಡಿ ಹಿಂದೆ ಮುಂದೆ ಲಾರಿತೆಗೆದು ಹೋಗುತ್ತಿದ್ದಾರೆ. ಈ ರೀತಿ ಇತ್ತೀಚೆಗೆ ರಾತ್ರಿ 10 ಗಂಟೆ ನಂತರ ಸಮಯದಲ್ಲಿ ಗಾಡಿಗಳು ಪಾಸಾಗುತ್ತಿವೆ ಎಂಬ ಮಾತು ನಿರಂತರವಾಗಿ ಕೇಳಿ ಬರುತ್ತಿದೆ.
ಹಾಗೆಯೇ ಸಣ್ಣ ವಾಹನಗಳಾದ ಬಾಳೆಕಾಯಿ, ತರಕಾರಿ, ಜಲ್ಲಿ, ಮೀನು, ಕೋಳಿ ಗಾಡಿಗಳಿಗೆ ಸಣ್ಣ ಪುಟ್ಟ ಗೂಡ್ಸ್ ಪಿಕಪ್ ಗಳಿಗೆ 50 ರಿಂದ ನೂರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ವಾಹನಗಳಲ್ಲಿ ಏನಿದೆ ಎಂಬುದನ್ನು ಪರಿಶೀಲಿಸದೆ ಹಣ ನೀಡಿದರೆ ಸಾಕು ಬಿಟ್ಟು ಬಿಡುತ್ತಿದ್ದಾರೆ. ತೆಗೆದುಕೊಂಡು ವಾಹನ ಬಿಡುತ್ತಿದ್ದಾರೆ ಎಂಬ ದೂರು ವಾಹನ ಚಾಲಕರಿಂದಲೇ ಕೇಳಿ ಬಂದಿದೆ. ಜಿಲ್ಲಾಧಿಕಾರಿಗಳ ಆದೇಶ ಇದ್ದರು ಸಹ ಹಣ ವಸೂಲಿ ಮಾಡಿ ಘನ ( ಅತೀ ದೊಡ್ಡ) ವಾಹನ ಓಡಾಟಕ್ಕೆ ಅನುಮತಿ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications