Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು?

Saaniya Chandok: ಅರ್ಜುನ್‌ ತೆಂಡ್ಯೂಲ್ಕರ್ ಅವರು ಗುರುವಾರ (ಮಾರ್ಚ್‌ 5) ಮುಂಬೈನಲ್ಲಿ ಸಾನಿಯಾ ಚಾಂದೋಕ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹದ ನಂತರ, ಸಾನಿಯಾ ಅವರು ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸೊಸೆಯಾಗಿರುವುದರ ಹೊರತಾಗಿಯೂ, ಅವರು ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಹಾಗಾದ್ರೆ, ಇವರ ಹಿನ್ನೆಲೆ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಭಾರತೀಯ ಕ್ರಿಕೆಟ್ ಲೋಕದ 'ಲಿಟಲ್ ಮಾಸ್ಟರ್' ಸಚಿನ್ ತೆಂಡೂಲ್ಕರ್ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸದಾ ಮೈದಾನದಲ್ಲಿ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದ ಅರ್ಜುನ್ ತೆಂಡೂಲ್ಕರ್, ಈಗ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ, ಎಲ್ಲರ ಕುತೂಹಲ ಕೆರಳಿಸಿರುವುದು ಅರ್ಜುನ್ ಕೈಹಿಡಿದ ಸಾನಿಯಾ ಚಾಂದೋಕ್ ಯಾರು ಎಂಬುದು.

Who Is Saaniya Chandok The Woman Who Married Arjun Tendulkar Son of Sachin Know Complete details

ಸಾನಿಯಾ ಕೇವಲ ಒಬ್ಬ ಸ್ಟಾರ್ ಕ್ರಿಕೆಟಿಗನ ಪತ್ನಿಯಲ್ಲ, ಬದಲಿಗೆ ಮುಂಬೈನ ಪ್ರತಿಷ್ಠಿತ ಉದ್ಯಮ ಸಾಮ್ರಾಜ್ಯದ ವಾರಸುದಾರೆ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಈಕೆ, ಪ್ರಾಣಿಗಳ ಮೇಲಿನ ಪ್ರೀತಿಯಿಂದ ಸ್ವಂತವಾಗಿ ಉದ್ಯಮವೊಂದನ್ನು ಆರಂಭಿಸಿದರು. ಸಾರಾ ತೆಂಡೂಲ್ಕರ್ ಅವರ ಜೊತೆ ಬಾಲ್ಯದಿಂದಲೂ ಸ್ನೇಹಿತೆಯಾಗಿ ಜೊತೆಗಿದ್ದ ಸಾನಿಯಾ, ಈಗ ಅದೇ ಮನೆಯ ಸೊಸೆಯಾಗಿದ್ದಾರೆ.

ಪ್ರಚಾರದಿಂದ ದೂರ ಉಳಿದಿದ್ದ ಸಾನಿಯಾ

ಶ್ರೀಮಂತ ಉದ್ಯಮಿ ಕುಟುಂಬದಿಂದ ಬಂದಿದ್ದರೂ, ಸಾನಿಯಾ ಈವರೆಗೆ ಪ್ರಚಾರದಿಂದ ದೂರವಿದ್ದು ತಮ್ಮನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಸಾನಿಯಾ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಮುಂಬೈನ ಪ್ರಸಿದ್ಧ 'ರವಿ ಘಾಯ್' ಕುಟುಂಬದ ಕುಡಿಯಾಗಿರುವ ಇವರು, ಹಾಸ್ಪಿಟಾಲಿಟಿ ಮತ್ತು ಆಹಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಗ್ರಾವಿಸ್ ಸಮೂಹ ಸಂಸ್ಥೆಯ ಭಾಗವಾಗಿದ್ದಾರೆ. 'ಮಿಸ್ಟರ್ ಪಾಸ್ ಪೆಟ್ ಸ್ಪಾ ಅಂಡ್ ಸ್ಟೋರ್ ಎಲ್‌ಎಲ್‌ಪಿ' ಸಂಸ್ಥೆಯ ಸ್ಥಾಪಕರು ಮತ್ತು ನಿರ್ದೇಶಕರಾಆಗಿದ್ದಾರೆ. ಇದು ಸಾಕುಪ್ರಾಣಿಗಳ ಆರೈಕೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಇರುವ ಐಷಾರಾಮಿ ಬ್ರಾಂಡ್ ಆಗಿದ್ದು, 2022ರಲ್ಲಿ ಮುಂಬೈನಲ್ಲಿ ಚಾಲನೆ ನೀಡಲಾಯಿತು.

ಇವರು ಲಂಡನ್‌ನ ಪ್ರತಿಷ್ಠಿತ 'ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್'ನ ಹಳೆಯ ವಿದ್ಯಾರ್ಥಿನಿಯಾಗಿದ್ದು, 2020ರಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಕೇವಲ ವ್ಯವಹಾರವಷ್ಟೇ ಅಲ್ಲದೆ, ಅರ್ಹ ಪಶುವೈದ್ಯಕೀಯ ತಾಂತ್ರಿಕ ತಜ್ಞೆಯೂ ಆಗಿದ್ದಾರೆ. 2024ರಲ್ಲಿ ಇವರು 'ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್'ನಿಂದ ವೃತ್ತಿಪರ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಪ್ರತಿಷ್ಠಿತ ಉದ್ಯಮಿ ಮನೆತನಕ್ಕೆ ಸೇರಿದ ಸಾನಿಯಾ

ಸಾನಿಯಾ ದಶಕಗಳಿಂದ ಮುಂಬೈನ ಆರ್ಥಿಕ ಮತ್ತು ಉದ್ಯಮ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ 'ಘಾಯ್' ಕುಟುಂಬದ ಕುಡಿಯಾಗಿದ್ದಾರೆ. ಈ ಕುಟುಂಬವು ಆತಿಥ್ಯ ಹಾಸ್ಪಿಟಲಿಟಿ, ರಿಯಲ್ ಎಸ್ಟೇಟ್ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಲ್ಲಿ ಸಕ್ರಿಯವಾಗಿರುವ ಗ್ರಾವಿಸ್ ಗ್ರೂಪ್ ಅನ್ನು ಮುನ್ನಡೆಸುತ್ತಿದೆ. ಭಾರತದಾದ್ಯಂತ ಜನಪ್ರಿಯವಾಗಿರುವ ಹಲವು ಐಸ್‌ಕ್ರೀಮ್ ಮತ್ತು ಹೋಟೆಲ್ ಬ್ರಾಂಡ್‌ಗಳ ಹಿಂದೆ ಈ ಕುಟುಂಬದ ಶ್ರಮವಿದೆ.

ಸಾನಿಯಾ ಅವರ ಅಜ್ಜ ರವಿ ಘಾಯ್ ಅವರು ಗ್ರಾವಿಸ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಈ ಬೃಹತ್ ಉದ್ಯಮ ಸಂಸ್ಥೆಯು 'ಬಾಸ್ಕಿನ್-ರಾಬಿನ್ಸ್'ನಂತಹ ಜಾಗತಿಕ ಬ್ರಾಂಡ್‌ಗಳನ್ನು ಭಾರತಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅಲ್ಲದೆ, ಮುಂಬೈನ ಮರೈನ್ ಡ್ರೈವ್‌ನಲ್ಲಿರುವ ಐಕಾನಿಕ್ 'ಇಂಟರ್ ಕಾಂಟಿನೆಂಟಲ್ ಹೋಟೆಲ್' ಅನ್ನು ಕೂಡ ನಿರ್ವಹಿಸುತ್ತಿದೆ. ಇನ್ನೂ ಸನ್ನಿ ಚಾಂದೋಕ್ ಮತ್ತು ಗೌರಿಕಾ ಘಾಯ್ ಚಾಂದೋಕ್ ದಂಪತಿಯ ಪುತ್ರಿಯಾಗಿದ್ದು, ಇವರಿಬ್ಬರೂ ಹಾಸ್ಪಿಟಲಿಟಿ ಮತ್ತು ಆಹಾರೋದ್ಯಮದ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಬಾಲ್ಯದ ಗೆಳೆಯರಿಂದ ದಾಂಪತ್ಯದವರೆಗೆ

ಅರ್ಜುನ್ ಮತ್ತು ಸಾನಿಯಾ ಇವರಿಬ್ಬರು ಬಾಲ್ಯದಿಂದಲೇ ಪರಸ್ಪರ ಪರಿಚಿತರು. ಸಾನಿಯಾ ಅವರು ತೆಂಡೂಲ್ಕರ್ ಕುಟುಂಬಕ್ಕೆ ಬಹಳ ಹತ್ತಿರದವರಾಗಿದ್ದು, ವಿಶೇಷವಾಗಿ ಸಾರಾ ತೆಂಡೂಲ್ಕರ್ ಅವರ ಆಪ್ತ ಗೆಳತಿಯಾಗಿದ್ದರು. ದೀರ್ಘಕಾಲದ ಈ ಒಡನಾಟ ಮತ್ತು ಸ್ನೇಹವು ಕಾಲಕ್ರಮೇಣ ಪ್ರೇಮವಾಗಿ ತಿರುಗಿತು. ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದ್ದ ಕಾರಣ, ಇವರ ಸಂಬಂಧಕ್ಕೆ ಪೋಷಕರಿಂದಲೂ ಪೂರ್ಣ ಬೆಂಬಲವಿತ್ತು.

ಸೆಲೆಬ್ರಿಟಿ ಕುಟುಂಬಗಳಿಗೆ ಸೇರಿದ್ದರೂ ಸಹ, ಈ ಜೋಡಿ ತಮ್ಮ ಸಂಬಂಧವನ್ನು ಎಲ್ಲಿಯೂ ಬಹಿರಂಗಪಡಿಸದೆ, ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. 2025ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು, ಈಗ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾಗುವ ಮೂಲಕ ತಮ್ಮ ಸ್ನೇಹವನ್ನು ದಾಂಪತ್ಯ ಜೀವನಕ್ಕೆ ಕೊಂಡೊಯ್ದಿದ್ದಾರೆ. ಜೂನ್ 23, 1998ರಂದು ಜನಿಸಿದ ಸಾನಿಯಾ ಅರ್ಜುನ್ ತೆಂಡೂಲ್ಕರ್ ಅವರಿಗಿಂತ ಸುಮಾರು ಒಂದು ವರ್ಷ ದೊಡ್ಡವರಾಗಿದ್ದಾರೆ. ಈ ಜೋಡಿಯು ಆಗಸ್ಟ್ 13, 2025ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+