• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಸಂಸದೆ ರೂಪಾ ಗಂಗೂಲಿ ಪುತ್ರ ಆಕಾಶ್ ಬಂಧನ

|

ಕೋಲ್ಕತ್ತಾ, ಆಗಸ್ಟ್ 16: ಬಿಜೆಪಿ ಸಂಸದೆ, ನಟಿ ರೂಪಾ ಗಂಗೂಲಿ ಅವರ ಪುತ್ರ ಆಕಾಶ್ ಮುಖ್ಯೋಪಾಧ್ಯಾಯ್ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. 20 ವರ್ಷ ವಯಸ್ಸಿನ ಆಕಾಶ್ ಕುಡಿದು ವಾಹನ ಚಲಾಯಿಸಿ, ಆತಂಕ ಸೃಷ್ಟಿಸಿದ್ದಲ್ಲದೆ ಗೋಡೆಯೊಂದಕ್ಕೆ ಗುದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಆಕಾಶ್ ಅತ್ಯಂತ ವೇಗವಾಗಿ ಕಾರು ಚಲಾಯಿಸಿ ಆತಂಕ ಉಂಟು ಮಾಡಿದ್ದು, ಅನೇಕ ಮಂದಿ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ, ನಂತರ ಆಕಾಶ್ ಅವರಿದ್ದ ಕಾರು ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಗೋಡೆಗೆ ಗುದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

"ವಾಹನ ಚಲಾವಣೆ ವೇಳೆ ಆಕಾಶ್ ಮದ್ಯ ಸೇವಿಸಿದ್ದರೆ ಇಲ್ಲವೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ರೂಪಾ, "ಇದೆಲ್ಲವೂ ರಾಜಕೀಯ ಕುತಂತ್ರ, ಸಣ್ಣ ಅಪಘಾತವನ್ನು ದೊಡ್ಡ ಸುದ್ದಿ ಮಾಡಿ ಬಣ್ಣ ಕಟ್ಟಲಾಗಿದೆ ತಪ್ಪು ಮಾಡಿದ್ದ್ರೆ, ಕಾನೂನಿನ ಪ್ರಕಾರ ಶಿಕ್ಷೆ ಯಾಗಲಿದೆ" ಎಂದಿದ್ದಾರೆ.

English summary
BJP MP and Bengali actor Roopa Ganguly's son has been arrested for reckless driving after he rammed a wall of an upscale Kolkata club with his car on Thursday. Reports suggest Akash Mukhopadhyay, 20, was drunk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X