Get Updates
Get notified of breaking news, exclusive insights, and must-see stories!

ಪೈಲಟ್‌ಗಳ ಅಲಭ್ಯತೆ: ದೆಹಲಿಯಿಂದ ಕೋಲ್ಕತ್ತಾ-ಬೌಂಡ್ ಏರ್ ಇಂಡಿಯಾ ವಿಮಾನ ವಿಳಂಬ

ನವದೆಹಲಿ ಜುಲೈ 6: ಮುಂಗಾರು ದೇಶದೆಲ್ಲೆಡೆ ಚುರುಕುಗೊಂಡಿದೆ. ದೆಹಲಿಯಲ್ಲೂ ಮೋಡಕವಿದ ವಾತಾವರಣವಿದ್ದು, ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರಿಂದ ಗೋಚರತೆಯ ಸಮಸ್ಯೆ ಎದುರಾಗಿದ್ದು ದೆಹಲಿಯಿಂದ ಕೋಲ್ಕತ್ತಾಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ವಿಳಂಬವಾಗಿದೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಸುಮಾರು 182 ಪ್ರಯಾಣಿಕರು ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಏರ್ ಇಂಡಿಯಾ ವಿಮಾನ ಕೊಟ್ಟ ಕಾರಣವಷ್ಟೇ ನಿಜವಾದ ಸಮಸ್ಯೆ ಪೈಲಟ್‌ಗಳ ಅಲಭ್ಯತೆಯಿಂದಾಗಿ ವಿಮಾನ ತಡವಾಗಿ ಹಾರಾಟ ಮಾಡಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

Non-availability of pilots: Delhi-Kolkata-bound Air India flight delayed

ಏರ್ ಇಂಡಿಯಾ ವಿಮಾನ AI 762 ಬುಧವಾರ ರಾತ್ರಿ 9 ಗಂಟೆಗೆ ದೆಹಲಿಯಿಂದ ಕೋಲ್ಕತ್ತಾಗೆ ಟೇಕ್ ಆಫ್ ಆಗಬೇಕಿತ್ತು. ಪ್ರಯಾಣಿಕರು ಸಂಜೆ 6:04 ಕ್ಕೆ SMS ಮತ್ತು ಇಮೇಲ್‌ನಲ್ಲಿ 'ವಿಮಾನ ಎರಡು ಗಂಟೆಗಳಷ್ಟು ವಿಳಂಬವಾಗುತ್ತದೆ' ಎಂದು ಅಧಿಸೂಚನೆಯನ್ನು ಸ್ವೀಕರಿಸಿದರು. ಆದರೆ ವಿಮಾನ ರಾತ್ರಿ 11 ಗಂಟೆಗೆ ಪ್ರಯಾಣಿಕರಿಗೆ ಲಭ್ಯವಾಗಿದೆ.

"ನಮಸ್ಕಾರ ಅತಿಥಿ, ನಮ್ಮೊಂದಿಗೆ ನಿಮ್ಮ ಏರ್ ಇಂಡಿಯಾ ಬುಕಿಂಗ್ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ದಯವಿಟ್ಟು ಇತರ ಸಂಭಾವ್ಯ ಆಯ್ಕೆಗಳನ್ನು ವೀಕ್ಷಿಸಲು https://bit.ly/44IY84q ಕ್ಲಿಕ್ ಮಾಡಿ. ವಿಮಾನದಲ್ಲಿ ನಿಮ್ಮನ್ನು ಸ್ವಾಗತಿಸಲು ಏರ್ ಇಂಡಿಯಾ ಎದುರು ನೋಡುತ್ತಿದೆ!-ಏರ್ ಇಂಡಿಯಾ" ಎಂದು ಏರ್ ಇಂಡಿಯಾ ಸಂದೇಶದಲ್ಲಿ ತಿಳಿಸಿದೆ.

11 ಗಂಟೆಗೆ ಪ್ರಯಾಣಿಕರು ವಿಮಾನವನ್ನು ಹತ್ತಿದರು. ಎಲ್ಲರೂ ಕ್ಯಾಪ್ಟನ್ ಪ್ರಯಾಣದ ಘೋಷಣೆಯನ್ನು ಹೇಳಿದರು. ಕ್ಯಾಬಿನ್ ಸಿಬ್ಬಂದಿ ತಮ್ಮ ಎಂದಿನ ಡ್ರಿಲ್ ಕೂಡ ಮಾಡಿದರು. ಆದರೆ ಎಲ್ಲಾ ಆದ ಬಳಿಕ ವಿಮಾನ ಮುಂದಕ್ಕೆ ಹೋಗಲೇ ಇಲ್ಲ. ಏನಾಯಿತು ಎಂದು ತಿಳಿಯಲು ಪ್ರಯಾಣಿಕರು ಕಾಕ್‌ಪಿಟ್‌ನ ಮುಂದೆ ಹೋದರು. ಆದರೆ ಇಬ್ಬರು ಪೈಲಟ್‌ಗಳಲ್ಲಿ ಯಾರೂ ವಿಮಾನವನ್ನು ಹತ್ತಲಿಲ್ಲ ಎಂದು ತಿಳಿದುಬಂದಿದೆ.

ಪೈಲಟ್‌ಗಳು ಎಲ್ಲಿದ್ದಾರೆ ಎಂದು ಕೇಳಿದಾಗ, ಪೈಲಟ್‌ಗಳು ಹೊರಟಿದ್ದಾರೆ ಎಂದು ಕರ್ತವ್ಯದಲ್ಲಿದ್ದ ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಇದು ಮಧ್ಯರಾತ್ರಿ 12 AM ವರೆಗೆ ಮುಂದುವರೆದಿದೆ. ನಂತರ ಪ್ರಯಾಣಿಕರು ಕೋಪಗೊಂಡರು. ಏರ್ ಇಂಡಿಯಾ ಅಧಿಕಾರಿಗಳು ಮತ್ತು ಭದ್ರತೆಯೊಂದಿಗೆ ಮಾತಿಗಿಳಿದರು.

ಏರ್ ಇಂಡಿಯಾ ಅಧಿಕಾರಿಯೊಬ್ಬರು, 'ನಾವು ಇತರ ಪೈಲಟ್‌ಗಳಿಗೆ AI 762 ಅನ್ನು ಹಾರಿಸಲು ಕೇಳಿದ್ದೆವು. ಆದರೆ ಅವರು ಸುದೀರ್ಘ ಮತ್ತೊಂದು ವಿಮಾನ ಹಾರಾಟವನ್ನು ಪೂರ್ಣಗೊಳಿಸಿದ ನಂತರ ಬಂದಿದ್ದಾರೆ. ಮತ್ತೆ ವಿಮಾನ ಹಾರಾಟ ಮಾಡುವ ಸ್ಥಿತಿಯಲ್ಲಿಲ್ಲ. ನಾವು ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಶೀಘ್ರದಲ್ಲೇ ಯಾರನ್ನಾದರೂ ನಿಯೋಜಿಸಲಾಗುವುದು' ಎಂದು ಹೇಳಿ ಪ್ರಯಾಣಿಕರನ್ನು ಸಮಾಧಾನ ಪಡಿಸಿದ್ದಾರೆ.

ಇವೆಲ್ಲವೂ ನಡೆಯುತ್ತಿರುವಾಗ, ಹೆಚ್ಚಿನ ಪ್ರಯಾಣಿಕರು ವಿಮಾನದಿಂದ ಹೊರಬಂದರು. ವಿಮಾನದಲ್ಲಿದ್ದ ಹಲವಾರು ಹಿರಿಯ ನಾಗರಿಕರನ್ನು ಒಳಗೊಂಡಂತೆ ಉಸಿರುಗಟ್ಟಿದ ಅನುಭವ ಅನುಭವಿಸಿದ್ದಾರೆ. ಅವರಲ್ಲಿ ಒಂದು ಮಗು ಕೂಡ ಅಸ್ವಸ್ಥಗೊಂಡಿತು. ಹಲವಾರು ಮನವಿಗಳ ಹೊರತಾಗಿಯೂ ಬೋರ್ಡಿಂಗ್‌ಗೆ ಪ್ರವೇಶ ದ್ವಾರವನ್ನು ತೆರೆಯಲಾಗಿಲ್ಲ ಎಂಬುದು ಸಹ ಗಮನಿಸಬೇಕಾದ ಸಂಗತಿ. ಹೀಗೆ ಸುಮಾರು ಒಂದು ಗಂಟೆಗಳ ನಂತರ ವಿಮಾನ ಹೊರಟಿದೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+