Rent in Bengaluru: ಬೆಂಗಳೂರಿನ ಈ 10 ಉತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿಳಿಯಿರಿ, ಅಂಕಿಅಂಶ, ಮಾಹಿತಿ
ನೀವು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಐಟಿ ಕಂಪನಿಗಳಿಗೆ ಹತ್ತಿರವಿರುವ, ಜೀವನ ಶೈಲಿಯೂ ಉನ್ನತವಾಗಿರುವ ಈ ಏರಿಯಾಗಳಲ್ಲಿ ಮನೆಗಳ ಬಾಡಿಗೆ ಕಡಿಮೆ ಇದೆ. ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತಹ ನಗರದ 10 ಅತ್ಯುತ್ತಮ ಏರಿಯಾಗಳ ಬಗ್ಗೆ ಮಾಹಿತಿ ಪಡೆಯಿರಿ.
1. ವೈಟ್‌ಫೀಲ್ಡ್
ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಒಂದಾದ ವೈಟ್‌ಫೀಲ್ಡ್ ಐಟಿ ಪಾರ್ಕ್‌ಗಳಿಗೆ ಸಮೀಪವಿರುವ ಐಷಾರಾಮಿ ಮನೆಗಳನ್ನು ಹೊಂದಿದೆ. ಇದು ಬಾಡಿಗೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬೆಡ್‌ರೂಮ್ ಮನೆಗಳಿಗೆ ಬೇಡಿಕೆ ಇದೆ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆಗೆ ಸಾಕಷ್ಟು ಅಪಾರ್ಟ್‌ಮೆಂಟ್‌ಗಳೂ ಇವೆ. ವೈಟ್‌ಫೀಲ್ಡ್‌ನಲ್ಲಿ ಎರಡು ಬೆಡ್‌ರೂಮ್‌ಗಳ ಸರಾಸರಿ ಮಾಸಿಕ ಬಾಡಿಗೆ 23,500 ರೂ.ಗಿಂತ ಹೆಚ್ಚಿದೆ.

2. ಹೊರಮಾವು
ಹೊರಮಾವು ಪ್ರಮುಖ ವಾಣಿಜ್ಯ ಪ್ರದೇಶಗಳಾದ ಕೆಆರ್ ಪುರಂ, ರಾಮಮೂರ್ತಿ ನಗರ, ಬಾಣಸವಾಡಿ, ಹೆಬ್ಬಾಳ ಮತ್ತು ಕಲ್ಯಾಣ ನಗರಗಳಿಂದ ಸುತ್ತುವರೆದಿರುವ ವಸತಿ ಪ್ರದೇಶವಾಗಿದೆ. ಹೊರ ವರ್ತುಲ ರಸ್ತೆ ಮತ್ತು ಎಂಜಿ ರಸ್ತೆಗೆ ಸಮೀಪದಲ್ಲಿರುವ ಕಾರಣ, ಹೊರಮಾವು ಉದ್ಯೋಗಿಗಳಿಗೆ ಅಚ್ಚಮೆಚ್ಚಿನ ತಾಣವಾಗಿದೆ. 1BHK, 2BHK, 3BHK ಮತ್ತು 3+BHK ಸೇರಿದಂತೆ 400 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಈ ಪ್ರದೇಶದಲ್ಲಿ ಲಭ್ಯವಿದೆ. ಬೆಂಗಳೂರಿನ ಹೊರಮಾವುನಲ್ಲಿರುವ ಸರಾಸರಿ ಮಾಸಿಕ ಬಾಡಿಗೆ ( ಎರಡು ಬಿಎಚ್‌ಕೆ ) 11,400 ರೂ. ಆಗಿದೆ.
3. ಮಹದೇವಪುರ
380 ಕ್ಕೂ ಹೆಚ್ಚು ಬಾಡಿಗೆ ಅಪಾರ್ಟ್‌ಮೆಂಟ್‌ಗಳು ಲಭ್ಯವಿದ್ದು, ಮಹದೇವಪುರವು ಬೆಂಗಳೂರಿನ ಹೊಸ ರಿಯಲ್ ಎಸ್ಟೇಟ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಮಹದೇವಪುರವು ಹೊರ ವರ್ತುಲ ರಸ್ತೆ ಮತ್ತು ಮೆಟ್ರೋ ಸಂಪರ್ಕ ಹೊಂದಿದೆ. ಇದು ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಉತ್ತಮ ಸ್ಥಳವಾಗಿದೆ. ಹತ್ತಿರದ ಅನೇಕ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ, ವಿಶೇಷವಾಗಿ ಇಂಟರ್ನ್ಯಾಷನಲ್ ಟೆಕ್ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶದಲ್ಲಿ ಸರಾಸರಿ ಮಾಸಿಕ ಬಾಡಿಗೆ 19,000 ರೂ. ಆಗಿದೆ.

4. ಯಲಹಂಕ
ಯಲಹಂಕದಲ್ಲಿನ ಸರಾಸರಿ ಮಾಸಿಕ ವೆಚ್ಚ 28,500 ರೂ. ಆಗಿದೆ. ಬಾಡಿಗೆಗೆ ಲಭ್ಯವಿರುವ ಹೆಚ್ಚಿನ ಫ್ಲ್ಯಾಟ್‌ಗಳು 2BHK ಅಥವಾ 3BHK ಅಪಾರ್ಟ್ಮೆಂಟ್‌ಗಳಾಗಿವೆ. ಯಲಹಂಕವು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸುತ್ತುವರೆದಿದೆ. ಇಲ್ಲಿ ಪ್ರಶಾಂತ ವಾತಾವರಣವನ್ನು ಕಾಣಬಹುದು.
5. ಬೆಳ್ಳಂದೂರು
ಬೆಳ್ಳಂದೂರು ಐಷಾರಾಮಿ ಬಾಡಿಗೆ ಮಾರುಕಟ್ಟೆಯಾಗಿದೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ITPL ಸೇರಿದಂತೆ ಬೆಂಗಳೂರಿನ ಎಲ್ಲಾ ಜನಪ್ರಿಯ ಪ್ರದೇಶಗಳು ಬೆಳ್ಳಂದೂರಿಗೆ ಹತ್ತಿರದಲ್ಲಿವೆ. ಬೆಳ್ಳಂದೂರು ಶಾಪಿಂಗ್ ಸೆಂಟರ್‌ಗಳಿಂದ ಹಿಡಿದು ಐಟಿ ಪಾರ್ಕ್‌ಗಳು, ಹೋಟೆಲ್‌ಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿದೆ. ಇದರಲ್ಲಿ 100 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಬಾಡಿಗೆಗೆ ಲಭ್ಯವಿದೆ.

6. ರಾಜರಾಜೇಶ್ವರಿ ನಗರ
ಇಲ್ಲಿನ ಸರಾಸರಿ ಮಾಸಿಕ ಬಾಡಿಗೆ ರೂ. 16,600 ಆಗಿದೆ. ನೀವು ರೂ. 6,000 ಕ್ಕಿಂತ ಕಡಿಮೆ ಬಾಡಿಗೆ ಮನೆಯನ್ನು ಇಲ್ಲಿ ಹೊಂದಬಹುದು. 2BHK ಮತ್ತು 3BHK ಮನೆಗಳು ವ್ಯಾಪಕವಾಗಿ ಲಭ್ಯವಿದೆ. ಇಲ್ಲಿ 2 BHK ಪ್ಲಾಟ್ ಅನ್ನು ರೂ 6,500 ರಿಂದ ರೂ 25,000 ವರೆಗೆ ಬಾಡಿಗೆ ನೀಡಬಹುದು. ನೀವು ತಿಂಗಳಿಗೆ 14,000-30,000 ರೂ.ಗೆ 3BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆಯಬಹುದು.
7. ನಾಗರಭಾವಿ
ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಇರುವ ನಾಗರಭಾವಿಯು ಹೆಚ್ಚು ಜನಪ್ರೀಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆಯುವುದು ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಸರಾಸರಿ ಮಾಸಿಕ ಬಾಡಿಗೆ ರೂ. 13,000 ಆಗಿದೆ. 2 BHK ಪ್ಲಾಟ್‌ಗಳು ರೂ 12,000 ಮತ್ತು ರೂ 16,000ಗಳಿಗೆ ಲಭ್ಯವಿದೆ. ಮೂರು ಬೆಡ್‌ರೂಮ್‌ಗಳ ಅಪಾರ್ಟ್ಮೆಂಟ್ 16,000 ರೂ.ಗೆ ಸಿಗತ್ತದೆ.

8. ಎಲೆಕ್ಟ್ರಾನಿಕ್ ಸಿಟಿ ಹಂತ-2
ಇಲ್ಲಿ ಸರಾಸರಿ ಮಾಸಿಕ ಬಾಡಿಗೆ ರೂ 13,400 ಆಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಆಯ್ಕೆಗಳಿವೆ. 1BHK ಅಪಾರ್ಟ್ಮೆಂಟ್ನ ವೆಚ್ಚವು ತಿಂಗಳಿಗೆ 6,500 ರೂ.ಗಳಷ್ಟಿದೆ. 3BHK ಫ್ಲಾಟ್ ತಿಂಗಳಿಗೆ 30,000 ರೂ. ಆಗಿದೆ. ಎರಡು ಮಲಗುವ ಕೋಣೆಗಳ ಫ್ಲಾಟ್ ಅನ್ನು ತಿಂಗಳಿಗೆ 6,000 ರೂ.ಗೆ ಬಾಡಿಗೆಗೆ ಪಡೆಯಬಹುದು.
9- ಮಲ್ಲೇಶ್ವರಂ
ಅತ್ಯಂತ ಹಳೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ ಹೆಸರುವಾಸಿ ಮಲ್ಲೇಶ್ವರಂ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಪ್ರಸಿದ್ಧ ರೆಸ್ಟೋರೆಂಟ್‌ಗಳಿವೆ. ಮಲ್ಲೇಶ್ವರಂ ಉನ್ನತ ಜೀವನಶೈಲಿಯನ್ನು ಹೊಂದಿದೆ. ಇಲ್ಲಿ ಗಮನಾರ್ಹ ಉಳಿತಾಯ ಮಾಡಬಹುದು. ಈ ಪ್ರದೇಶವು ಹೆಚ್ಚಾಗಿ 1 ಮತ್ತು 2 BHK ಗಳನ್ನು ಹೊಂದಿದೆ. ಇಲ್ಲಿನ ಸರಾಸರಿ ಬಾಡಿಗೆ ಕ್ರಮವಾಗಿ 15250 ಮತ್ತು 20400 ರೂ. ಆಗಿದೆ. 3 BHK ಅಪಾರ್ಟ್ಮೆಂಟ್ಗೆ ಸರಾಸರಿ ಬಾಡಿಗೆ 41600 ರೂ. ಆಗಿದೆ.
10. ಬನ್ನೇರುಘಟ್ಟ ರಸ್ತೆ
49 ಕಿಲೋಮೀಟರ್ ಉದ್ದದ ಬನ್ನೇರುಘಟ್ಟ ರಸ್ತೆಯು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಅತ್ಯಂತ ಸಂಪರ್ಕಿತ ಪ್ರದೇಶಗಳಲ್ಲಿ ಒಂದಾಗಿದೆ. IIM-B, HSBC, ಹನಿವೆಲ್ ಮತ್ತು ಆಕ್ಸೆಂಚರ್ ಸೇರಿದಂತೆ ನಗರದ ಕೆಲವು ಪ್ರಸಿದ್ದ ಕಂಪನಿಗಳಿಗೆ ನೆಲೆಯಾಗಿದೆ. ಇಲ್ಲಿ ಸಾಕಷ್ಟು ಹೋಟೆಲ್‌ಗಳು, ವಾಣಿಜ್ಯ ಕೇಂದ್ರಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸರ್ವಿಸ್ಡ್ ಅಪಾರ್ಟ್‌ಮೆಂಟ್‌ಗಳೂ ಸಹ ಇವೆ. ಈ ಪ್ರದೇಶವು ಹೆಚ್ಚಾಗಿ 1, 2 ಮತ್ತು 3 BHK ಫ್ಲಾಟ್‌ಗಳನ್ನು ಹೊಂದಿದೆ. ಮನೆಗಳ ಬಾಡಿಗೆ ಬೆಲೆ 6000 ರಿಂದ 40000 ರೂ. ಇದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications