India's first underwater metro: ಭಾರತದ ಮೊದಲ ನೀರಿರೊಳಗಿನ ಮೆಟ್ರೋ ಮಾರ್ಗಕ್ಕೆ ಚಾಲನೆ, ಇದರ ವಿಶೇಷತೆಗಳೇನು?-ಮಾಹಿತಿ
ಕೋಲ್ಕತ್ತಾ, ಮಾರ್ಚ್, 06: ಕೋಲ್ಕತ್ತಾದಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಲೈನ್ ಸೇರಿದಂತೆ ದೇಶದಾದ್ಯಂತ ಬಹು ಮೆಟ್ರೋ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮಾರ್ಚ್ 06) ಅನಾವರಣಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ಇದು ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ನೀರೊಳಗಿನ ಸೇವೆಯು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ-ಎಸ್‌ಪ್ಲೇನೇಡ್ ವಿಭಾಗದ ಭಾಗವಾಗಿದೆ. ಹೂಗ್ಲಿ ನದಿಯ ಕೆಳಗೆ 16.6 ಕಿಲೋ ಮೀಟರ್ ಇದು ವ್ಯಾಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗವನ್ನು ಉದ್ಘಾಟನೆ ಮಾಡಿದ್ದಾರೆ. ಕೋಲ್ಕತ್ತಾದ ಹೌರಾ ಮೈದಾನ ಮತ್ತು ಎಸ್‌ಪ್ಲೇನೇಡ್ ನಡುವೆ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರುತ್ತಿದ್ದಂತೆ, ಭಾರತದ ನದಿಯ ಅಡಿಯಲ್ಲಿರುವ ಮೊದಲ ಸುರಂಗ ಸಂಚಾರಕ್ಕೆ ಮುಕ್ತ ಆಗಲಿದೆ. ಕೋಲ್ಕತ್ತಾದ ಹೂಗ್ಲಿ ನದಿಯಡಿಯಲ್ಲಿ ನಿರ್ಮಿಸಲಾದ ಈ ಸುರಂಗವು ಹೌರಾ ಮೈದಾನ್ ಮತ್ತು ಎಸ್ಪ್ಲಾನೇಡ್ ನಡುವಿನ ಎರಡು ನಿಲ್ದಾಣಗಳನ್ನು ಸಂಪರ್ಕ ಕಲ್ಪಿಸುತ್ತದೆ.
ನೀರೊಳಗಿನ ಸುರಂಗವು ಅದ್ಭುತ ಸಾಧನೆ ಎಂದೇ ಹೇಳಬಹುದು. ಇದು ಹೂಗ್ಲಿ ನದಿ ಕೆಳಗೆ 16.6 ಕಿಲೋ ಮೀಟರ್‌ನಷ್ಟು ವ್ಯಾಪಿಸಿದೆ. ಈ ಮೆಟ್ರೋ ಹೂಗ್ಲಿ ನದಿಯ ಪಶ್ಚಿಮ ದಂಡೆಯಲ್ಲಿರುವ ಪೂರ್ವ ಕರಾವಳಿಯ ಸಾಲ್ಟ್ ಲೇಕ್ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು 6 ನಿಲ್ದಾಣಗಳನ್ನು ಒಳಗೊಂಡಿದೆ. ಈ ವಿಭಾಗವು 4.8 ಕಿಲೋ ಮೀಟರ್‌ಗಳಷ್ಟು ಉದ್ದ ಆಗಿವೆ. ಕೋಲ್ಕತ್ತಾ ಮೆಟ್ರೋ ಕಾಮಗಾರಿ ಹಲವು ಹಂತಗಳಲ್ಲಿ ನಡೆಯುತ್ತಿವೆ.
ಹೌರಾ ಮೆಟ್ರೋ ನಿಲ್ದಾಣವು ಭಾರತದ ಆಳವಾದ ಮೆಟ್ರೋ ನಿಲ್ದಾಣವಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಇನ್ನು ಕೋಲ್ಕತ್ತಾ ಮೆಟ್ರೋ ಅದನ್ನು ತಯಾರಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಕೇವಲ 45 ಸೆಕೆಂಡುಗಳಲ್ಲಿ 520-ಮೀಟರ್ ದೂರ ಕ್ರಮಿಸಬಲ್ಲದು.












Click it and Unblock the Notifications