Underwater metro tunnel: ದೇಶದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಉದ್ಘಾಟನೆಗೆ ಮುಹೂರ್ತ ನಿಗದಿ, ನಿರ್ಮಾಣದ ವೆಚ್ಚ ಎಷ್ಟು?

ಕೊಲ್ಕತ್ತಾ, ಮಾರ್ಚ್‌, 04: ದೇಶದಲ್ಲಿ ಸಾರಿಗೆ ವಿಭಾಗಗಳಾದ, ಮೆಟ್ರೋ, ರೈಲುಗಳ ವಿಭಾಗಗಳಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಲಿವೆ. ಇನ್ನು ಕೋಲ್ಕತ್ತಾದಲ್ಲಿ ನಿರ್ಮಿಸಿರುವ ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌ 6ರಂದು ಉದ್ಘಾಟನೆ ಮಾಡಲಿದ್ದಾರೆ. ಹಾಗಾದರೆ ಇದಕ್ಕೆ ತಗುಲಿವ ವೆಚ್ಚ ಹಾಗೂ ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.

ಹೋಗ್ಲಿ ನದಿಯಡಿಯಲ್ಲಿ ನಿರ್ಮಿಸಿರುವ ಸುರಂಗವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮೊಟ್ರೋ ಕಾರಿಡಾರ್‌ನ ಭಾಗ ಆಗಿದೆ. ಇದು ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ಗೆ ಸಂಪರ್ಕಿಸುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Underwater metro tunnel Date Fixed for India s first underwater metro tunnel inauguration

ಅದೇ ದಿನ ಕೋಲ್ಕತ್ತಾ ಮೆಟ್ರೋದ ಕವಿ ಸುಭಾಷ್‌-ಹೇಮಂತ ಉಖ್ಯೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್‌ ವಿಭಾಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ವಿಭಾಗಗಳನ್ನು ರಸ್ತೆ ದಟ್ಟಣೆಯನ್ನು ನಿವಾರಿಸಲು ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಹೌರಾ ಮೈದಾನ್‌-ಲಸ್ಪ್ಲಾನೇಡ್‌ ಮೆಟ್ರೋ ಮಾರ್ಗವು ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಆದರೆ ಹೌರಾ ಮೆಟ್ರೋ ನಿಲ್ದಾಣವು ದೇಶದಲ್ಲೇ ಅತ್ಯಂತ ಆಳವಾದದ್ದು (33-ಮೀಟರ್‌ ಮೇಲ್ಮೈ ಕೆಳಗೆ) ಎಂದು ತಿಳಿದುಬಂದಿದ್ದು, ಮೆಟ್ರೋ 45 ಸೆಕೆಂಡುಗಳಲ್ಲಿ ಹೂಗ್ಲಿ ನದಿಯಡಿಯಲ್ಲಿ 520 ಮೀಟರ್‌ ವ್ಯಾಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಜೆರ್ಹತ್‌ ಮೆಟ್ರೋ ನಿಲ್ದಾಣವು ವಿಶಿಷ್ಟವಾಗಿ ಎತ್ತರಿಸಿದ ಮೆಟ್ರೋ ನಿಲ್ದಾಣ ಇದಾಗಿದೆ. ಇದು ಕಾಲುವೆಯನ್ನು ಸಹ ಒಳಗೊಂಡಿರುತ್ತದೆ. ಕೋಲ್ಕತ್ತಾ ಮೆಟ್ರೋ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಸಿಕ್‌ ಮಿತ್ರಾ ಮಾತಮಾಡಿ, "ಪ್ರಧಾನಿ ಮೋದಿ ಅವರು ಕೋಲ್ಕತ್ತಾದ ಜನರಿಗೆ ನೀಡಿದ ಉಡುಗೊರೆ ಇದು. ಈ ಉದ್ಘಾಟನೆಯೊಂದಿಗೆ ಬಹುಕಾಲದ ಕನಸು ನನಸಾಗಲಿದೆ," ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+