ಜ.18ರಂದು ಇಬ್ಬರು ಜೆಡಿಎಸ್‌ ಶಾಸಕರ ರಾಜೀನಾಮೆ!

ರಾಯಚೂರು, ಜನವರಿ 17 : ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದೆ. ಗುರುವಾರ ಜೆಡಿಎಸ್‌ನ ಇಬ್ಬರು ಹಾಲಿ ಶಾಸಕರು, ಪಕ್ಷಕ್ಕೆ ರಾಜೀನಾಮಮೆ ನೀಡಿ, ಬಿಜೆಪಿ ಸೇರಲಿದ್ದಾರೆ.

ಲಿಂಗಸಗೂರಿನ ಶಾಸಕ ಮಾನಪ್ಪ ವಜ್ಜಲ್ ಮತ್ತು ರಾಯಚೂರು ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಎಸ್ ಅವರು ಗುರುವಾರ ಜೆಡಿಎಸ್ ಪಕ್ಷ ತೊರೆಯಲಿದ್ದಾರೆ. ರಾಜೀನಾಮೆ ಬಳಿಕ ಬಿಜೆಪಿ ಸೇರಲಿದ್ದಾರೆ.

ಜನವರಿ 8ರಂದು ಇಬ್ಬರು ಶಾಸಕರು ಬಿಜೆಪಿ ಸೇರುವ ಕುರಿತು ಸುದ್ದಿಗಳು ಹಬ್ಬಿದ್ದವು. ಆದರೆ, ಎಂದು ಸೇರ್ಪಡೆಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಈಗ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ.

Two JDS MLAs to join BJP on January 18

2013ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ 31,737 ಮತಗಳನ್ನು ಪಡೆದು ಜಯಗಳಿಸಿದ್ದರು. ಡಾ.ಶಿವರಾಜ್ ಪಾಟೀಲ್‌ ಎಸ್ ಅವರು 45,263 ಮತಗಳನ್ನು ಪಡೆದು ಜಯಗಳಿಸಿದ್ದರು.

ಇಬ್ಬರು ಹಾಲಿ ಶಾಸಕರು ಪಕ್ಷ ತೊರೆಯುತ್ತಿರುವುದರಿಂದ ಜೆಡಿಎಸ್‌ ಪಕ್ಷಕ್ಕೆ ಚುನಾವಣೆಯ ಸಮಯದಲ್ಲಿ ಭಾರೀ ಹಿನ್ನಡೆ ಉಂಟಾಗುತ್ತಿದೆ. ಇಬ್ಬರೂ ಶಾಸಕರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು.

Two JDS MLAs to join BJP on January 18

ರಾಯಚೂರು ಜೆಡಿಎಸ್ ಜಿಲ್ಲಾ ಘಟಕದಲ್ಲಿದ್ದ ಮಾನಪ್ಪ ವಜ್ಜಲ್ ಬೆಂಬಲಿಗರು ಇಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಗುರುವಾರವೂ ಕೆಲವು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+