ಆಪರೇಷನ್ ಕಮಲ, 7 ಜೆಡಿಎಸ್‌ ಶಾಸಕರು ಬಿಜೆಪಿಗೆ?

Posted By: Gururaj
Subscribe to Oneindia Kannada
   ಆಪರೇಷನ್ ಕಮಲ | 7 ಜೆಡಿಎಸ್ ಶಾಸಕರು ಬಿಜೆಪಿಗೆ | Oneindia Kannada

   ಬೆಂಗಳೂರು, ನವೆಂಬರ್ 20 : ಚುನಾವಣೆಗಿಂತ ಮೊದಲೇ ಕರ್ನಾಟಕದಲ್ಲಿ ಆಪರೇಷನ್ ಕಮಲ ಆರಂಭವಾಗಿದೆಯೇ?. ಹೌದು, ಇಂತಹ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಏಳು ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ.

   150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ಹಲವಾರು ತಂತ್ರಗಳನ್ನು ಮಾಡುತ್ತಿದೆ. ಸ್ವಂತ ಶಕ್ತಿಯ ಮೇಲೆ ಗೆಲ್ಲಲು ಸಾಧ್ಯವಿಲ್ಲದ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.

   ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು!

   ಕೆಲವು ಜೆಡಿಎಸ್ ಶಾಸಕರ ಜೊತೆ ಬಿಜೆಪಿ ನಾಯಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದೇ ಶಾಸಕರು ಬಿಜೆಪಿಗೆ ಬರುವ ಕುರಿತು ತೀರ್ಮಾನವನ್ನು ಹೇಳಿಲ್ಲ. ಬಿಜೆಪಿ ನಾಯಕರು ಚುನಾವಣೆ ಹತ್ತಿರವಾಗುವಾಗ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.

   ಮಂಡ್ಯ ರಾಜಕಾರಣ : ವಿಧಾನಸಭೆ ಚುನಾವಣೆ ಬಗ್ಗೆ ರಮ್ಯಾ ಸ್ಪಷ್ಟನೆ

   ಬಿಜೆಪಿ ಈಗಾಗಲೇ 'ನವ ಕರ್ನಾಟಕ ಪರಿವರ್ತನಾ ಯಾತ್ರೆ' ಮೂಲಕ ರಾಜ್ಯ ಪ್ರವಾಸ ನಡೆಸುತ್ತಿದೆ. ಜನವರಿಯಲ್ಲಿ ಈ ಯಾತ್ರೆ ಅಂತ್ಯಗೊಳ್ಳಲಿದ್ದು, ನಂತರ ಟಿಕೆಟ್ ಹಂಚಿಕೆಯತ್ತ ಗಮನ ಹರಿಸಲಿದೆ. ಆಪರೇಷನ್ ಕಲಮಕ್ಕೆ ಯಾವ ಶಾಸಕರು?...

   7 ಶಾಸಕರ ಜೊತ ಮಾತುಕತೆ

   7 ಶಾಸಕರ ಜೊತ ಮಾತುಕತೆ

   ಬಿಜೆಪಿ ನಾಯಕರು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ‍್ಯನಾಯ್ಕ, ನೆಲಮಂಗಲ ಶಾಸಕ ಕೆ.ಶ್ರೀನಿವಾಸಮೂರ್ತಿ, ದೇವನಹಳ್ಳಿ ಶಾಸಕ ಪಿಳ್ಳ ಮುನಿಶ್ಯಾಮಪ್ಪ, ರಾಯಚೂರಿನ ಶಾಸಕ ಶಿವರಾಜ ಪಾಟೀಲ, ಶಿಡ್ಲಘಟ್ಟದ ಶಾಸಕ ಎಂ.ರಾಜಣ್ಣ, ಲಿಂಗಸಗೂರಿನ ಮಾನಪ್ಪ ವಜ್ಜಲ್ ಅವರನ್ನು ಪಕ್ಷಕ್ಕೆ ಕರೆತಲು ನಿರ್ಧರಿಸಿದ್ದಾರೆ.

   ಹಳೇ ಮೈಸೂರು ಭಾಗದ ತಂತ್ರ

   ಹಳೇ ಮೈಸೂರು ಭಾಗದ ತಂತ್ರ

   ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು ಬಿಜೆಪಿ ಸೇರಿದ್ದಾರೆ. ಇದೇ ಮಾದರಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ತಂತ್ರ ರೂಪಿಸಿದೆ.

   ಪುನರಾಯ್ಕೆ ಆಗುವ ಶಾಸಕರು

   ಪುನರಾಯ್ಕೆ ಆಗುವ ಶಾಸಕರು

   ಜೆಡಿಎಸ್ ಈ ಶಾಸಕರು ಕ್ಷೇತ್ರದಲ್ಲಿ ಪುನರಾಯ್ಕೆ ಆಗುತ್ತಾರೆ ಎಂದು ಲೆಕ್ಕಾಚಾರ ಹಾಕಿದೆ. ಆ ಶಾಸಕರನ್ನು ಬಿಜೆಪಿಗೆ ಸೆಳೆದು ಪಕ್ಷವನ್ನು ಗಟ್ಟಿಗೊಳಿಸಿ 150 ಸೀಟು ಗೆಲ್ಲುವ ತಂತ್ರ ಬಿಜೆಪಿಯದ್ದು. ಆದರೆ, ಯಾವ ಶಾಸಕರು ಇನ್ನೂ ಬಿಜೆಪಿ ಸೇರ್ಪಡೆಗೆ ಒಪ್ಪಿಗೆ ಕೊಟ್ಟಿಲ್ಲ.

   ಪ್ರಯತ್ನ ಪಡುತ್ತಲೇ ಇದ್ದಾರೆ

   ಪ್ರಯತ್ನ ಪಡುತ್ತಲೇ ಇದ್ದಾರೆ

   'ಪಕ್ಷಕ್ಕೆ ಬರುವಂತೆ ಬಿಜೆಪಿ, ಕಾಂಗ್ರೆಸ್‌ನವರು ಕರೆಯುತ್ತಿದ್ದಾರೆ. ಆದರೆ, ನಾನು ಪಕ್ಷ ಬಿಟ್ಟು ಬರುವುದಿಲ್ಲ' ಎಂದು ಹೇಳಿದ್ದೇನೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

   ಮಾನಪ್ಪ ವಜ್ಜಲ್ ಹೇಳುವುದೇನು?

   ಮಾನಪ್ಪ ವಜ್ಜಲ್ ಹೇಳುವುದೇನು?

   ಲಿಂಗಸಗೂರಿನ ಶಾಸಕ ಮಾಜಪ್ಪ ವಜ್ಜಲ್ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಬಿಜೆಪಿ ಸೇರುವಂತಹ ಚಿಂತನೆ ಇಲ್ಲ. ಕೆಲವರು ಸುಮ್ಮನೆ ಈ ಕುರಿತು ಪ್ರಚಾರ ನಡೆಸುತ್ತಿದ್ದಾರೆ. ನಾನು ಜೆಡಿಎಸ್‌ ಪಕ್ಷದಲ್ಲಿಯೇ ಇದ್ದೇನೆ' ಎಂದು ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Ahead of the assembly election 2018 operation Kamala again in Karnataka?. BJP leaders in touch with 7 JDS MLA's to strengthen the party.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ