Get Updates
Get notified of breaking news, exclusive insights, and must-see stories!

ರಾಯಚೂರಿನಲ್ಲಿ ಭಿನ್ನಮತ ಸ್ಫೋಟ: ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ..!

ರಾಯಚೂರು ಮಾರ್ಚ್ 28: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗ ಬಿಜೆಪಿ ಪಕ್ಷಕ್ಕೆ ಭಿನ್ನಮತದ ತಲೆ ನೋವು ಎದುರಾಗಿದೆ. ಟಿಕೆಟ್‌ ವಂಚಿತ ಅಭ್ಯರ್ಥಿ ಹಾಗೂ ಬೆಂಬಲಿಗರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಈ ಒಂದು ಅಸಮಾಧಾನ ಇಂದು ಅತಿರಿಕಕ್ಕೆ ಹೋಗಿ ಇಬ್ಬರು ಕಾರ್ಯಕರ್ತರು ಮೈ ಮೇಲೆ ಡೀಸೆಲ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿ ವಿ ನಾಯಕ ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ. ಬಿಜೆಪಿ ಸಹ ಇದಕ್ಕೆ ಹೊರತಾಗಿಲ್ಲ. ಒಂದು ಕಡೆ ಬಂಡಾಯವನ್ನು ಶಮನ ಮಾಡುತ್ತಿದ್ದಂತೆ ಮತ್ತೊಂದು ಕಡೆ ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಈ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕಗೆ ಟಿಕೆಟ್‌ ಕೊಟ್ಟಿರುವುದು ಬಿ.ವಿ‌. ನಾಯಕ ಅವರನ್ನು ಕೆರಳಿಸಿದೆ. ಇದೀಗ ಅವರ ಬಣ ರೌದ್ರಾವತಾರ ತಾಳಿದ್ದು, ಪ್ರತಿಭಟನೆಯನ್ನು ಮಾಡಿವೆ. ಅಭ್ಯರ್ಥಿ ಬದಲಾವಣೆಗೆ ಎರಡು ದಿನಗಳ ಗಡುವನ್ನು ನೀಡಿದೆ. ಇನ್ನು ಪ್ರತಿಭಟನೆ ವೇಳೆ ಬಿ.ವಿ. ನಾಯಕ ಅವರ ಅಭಿಮಾನಿಯೊಬ್ಬ ಮೈಮೇಲೆ ಡಿಸಲ್ ಸುರಿದುಕೊಂಡು ಹೈಡ್ರಾಮಾ ನಡೆಸಿದ್ದಾನೆ.

Dissent erupts in Raichur BV Nayak supporters attempted suicide by pouring diesel

ನಮ್ಮ ಕುಟುಂಬದ ಇತಿಹಾಸದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದೆ. ಲೋಕಸಭಾ ಕ್ಷೇತ್ರದ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿ ಪ್ರಚಾರ ಆರಂಭಸುವಂತೆ ಮುಖಂಡರು ಸೂಚಿಸಿದ್ದರು. ಆದರೆ, ಟಿಕೆಟ್ ನೀಡಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿ ಇತ್ತು. ನಾನು ಅಲ್ಪ ಮತಗಳಿಂದ ಸೋಲು ಅನುಭವಿಸಿದರೂ ಪಕ್ಷದ ಸಂಘಟನೆ ಬಲಗೊಂಡಿತು. ವಾಸ್ತವದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಕಲ್ಪನೆಯನ್ನೂ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ವಿರೋಧ ಪಕ್ಷ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಿಕೆಟ್ ಭರವಸೆ ನೀಡಿದರು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ನಿಮಗೆ ಟಿಕೆಟ್ ನೀಡಲಾಗುವುದು. ವಿಶ್ವಾಸ ಮೂಡಿಸಿದರು' ಎಂದರು.

Dissent erupts in Raichur BV Nayak supporters attempted suicide by pouring diesel

'ಹಾಲಿ ಸಂಸದರು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಮುಖಂಡರು ಪಕ್ಷದ ಕಾರ್ಯಕರ್ತರ ಪರಿಸ್ಥಿತಿಯನ್ನೂ ಅರ್ಥೈಸಿಕೊಳ್ಳಬೇಕು. ಕಾರ್ಯಕರ್ತರನ್ನೇ ಕಡೆಗಣಿಸಿದರೆ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ' ಎಂದು ಹೇಳಿದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮಾತನಾಡಿ,' ಬಿಜೆಪಿ ಟಿಕೆಟ್ ಬದಲಾವಣೆ ಮಾಡಿ ಬಿ.ವಿ ನಾಯಕ ಅವರಿಗೆ ನೀಡಬೇಕು. ಇಲ್ಲದೇ ಇದ್ದರೆ ಕೆಟ್ಟ ಪರಿಣಾಮ ಪಕ್ಷ ಎದುರಿಸುಬೇಕಾಗುತ್ತದೆ ಎಂಬುವುದನ್ನು ಪಕ್ಷದ ರಾಜ್ಯ ನಾಯಕರು ಅರಿತುಕೊಳ್ಳಬೇಕು' ಎಂದು ಎಚ್ಚರಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮಾರೆಡ್ಡಿ ಬೋಗಾವತಿ, ಜಂಬಣ್ಣ, ಅನಿತಾ ಬಸವರಾಜ, ಶರಣಬಸವ ಜೋಳದಡಗಿ,ಅನಿಲ್ ಕುಮಾರ, ಗುರು ಉಪಸ್ಥಿತರಿದ್ದರು. ಸಭೆಯಲ್ಲಿ ಯುವಕರಿಬ್ಬರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಕಾರ್ಯಕರ್ತರು ಅವರನ್ನು ತಡೆದು ಸಮಾಧಾನ ಪಡಿಸಿದರು. ನಂತರ 'ಗೋಬ್ಯಾಕ್ ಅಮರೇಶ್ವರ ನಾಯಕ' ಎಂದು ಘೋಷಣೆ ಕೂಗಿದರು. ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+