Get Updates
Get notified of breaking news, exclusive insights, and must-see stories!

Lok Sabha Election 2024: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪುರುಷರದ್ದೇ ಆಡಳಿತ: ಮಹಿಳೆಯರು ಮತಕ್ಕಾಗಿ ಮಾತ್ರ!

ರಾಯಚೂರು ಏಪ್ರಿಲ್ 16- ರಾಯಚೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು 72 ವರ್ಷಗಳು ಉರುಳಿದರೂ ಯಾವುದೊಂದು ಪಕ್ಷ ಮಹಿಳೆಗೆ ಟಿಕೆಟ್ ನೀಡದೆ ಕೇವಲ ಮತದಾರರನ್ನಾಗಿ ಮಾತ್ರ ಗುರುತಿಸಿರುವುದು ವಿಪ ರ್ಯಾಸ.

ಮಹಿಳೆ ಯರಿಗೆ ಅಧಿಕಾರ, ಮೀಸಲಾತಿ ಬಗ್ಗೆ ಮಾರುದ್ಧ ಭಾಷಣ ಮಾಡುವ ರಾಜಕಾರಣಿಗಳು, ಅಧಿಕಾರದಲ್ಲಿರುವವರು ಮತ್ತು ರಾಜಕೀಯ ಪಕ್ಷಗಳು ಅವರನ್ನು ಸ್ಥಳೀಯ ಮಟ್ಟದಿಂದ ರಾಷ್ಟಮಟ್ಟದವರೆಗೆ ನಡೆಯುವ ಚುನಾವಣೆಯಲ್ಲಿ ಮಾತ್ರ ಪರಿಗಣಿಸದೆ ಇರುವುದು ಈಗಲೂ ಮುಂದುವರಿದಿದೆ. 1952 ರಿಂದ ಇಲ್ಲಿಯವರೆಗೆ ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸ ಗಮನಿಸಿದರೆ ರಾಷ್ಟಿ ಯ , ರಾಜ್ಯ ರಾಜಕೀಯ ಪಕ್ಷಗಳು ಮಾತ್ರ ಮಹಿಳೆ ಯರನ್ನು ಪಕ್ಷದೊಳೆಗೆ ಕಾರ್ಯಕರ್ತರಾಗಿ ಹೊರಗೆ ಮತದಾರರನ್ನಾಗಿ ಮಾತ್ರ ಪರಿಗಣಿಸಿರುವುದು ಸ್ಪಷ್ಟವಾಗಿದೆ.

Women s not for contest only for votes In the Raichur Lok Sabha constituency

ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯನ್ನೊಳಗೊಂಡಿರುವ ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮಹಿಳೆ ಯರಿಗೆ ಯಾವುದೇ ಪಕ್ಷಗಳು ಸ್ಪರ್ಧೆಗೆ ಅವಕಾಶ ನೀಡಿಲ್ಲ. ರಾಯಚೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಇತಿಹಾಸದಲ್ಲಿ ಕೆಲ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಸಚಿವರಾಗಿರುವುದು ನಿದರ್ಶನಗಳಿವೆ. ಆದರೆ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಅದು ಸಾಧ್ಯವಾಗಿಲ್ಲ. ಅದಕ್ಕೆ ಸಮರ್ಥರಿಲ್ಲವೋ , ಪಕ್ಷಗಳ ನಾಯಕರಿಗೆ ಮಹಿಳೆ ಯರಿಗೆ ಟಿಕೆಟ್ ನೀಡುವ ಮನಸ್ಸಿಲ್ಲವೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಅಲ್ಲದೆ ಪ್ರತಿ ಚುನಾವಣೆಯ ಮತದಾನದ ವೇಳೆ ಮಹಿಳೆ ಯರ ಹೆಚ್ಚು ಮತದಾನ ಮಾಡುವುದು, ಮಾಡಿಸುವುದು ಎಂಬ ಮಾತಿದೆ. ಅಲ್ಲದೆ ಬಿಜೆಪಿ ಕಾಂಗ್ರೆಸ್ , ಜೆಡಿಎಸ್ ಮತ್ತಿತರ ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬಂದಾಗ ಘೋಷಣೆ ಮಾಡುವ ಯೋಜನೆಗಳಲ್ಲಿ ಮಾತ್ರ ಮಹಿಳೆ ಯರನ್ನೇ ಗುರಿಯಾಗಿಸಿಕೊಂಡಿರುತ್ತವೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಇವೆ.

೨೦೧೯ ರ ಚುನಾವಣೆಯಲ್ಲಿಯೂ ಮಹಿಳಾ ಮತದಾರರ ಸಂಖ್ಯೆ ಪುರಷರಿಗಿಂತ ಹೆಚ್ಚಾಗಿತ್ತು. ಈ ಬಾರಿಯಂತೂ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರ ಹೊಂದಿದೆ. ಯಾದಗಿರಿ , ರಾಯಚೂರು ಜಿಲ್ಲೆಯಲ್ಲಿ ಎಲ್ಲ ಪಕ್ಷದಲ್ಲೂ ಮಹಿಳೆ ಯ ರು ತಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ತತ್ವ ಸಿದ್ದಾಂತದಡಿ ಸಮರ್ಥ ಕೆಲಸವೂ ಮಾಡಿದರೂ ಪುರುಷರಷ್ಟು ಅಧಿಕಾರ ಗಳಿಸುವಲ್ಲಿ ಸಾಧ್ಯವಾಗಿಲ್ಲ. ಯಾದಗಿರಿ ಹಾಗೂ ರಾಯಚುರು ಜಿಲ್ಲೆಗಳನ್ನೊಳಗೊಂಡಿರುವ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ರಾಯಚೂರು ನಗರ, ಗ್ರಾಮೀಣ , ಮಾನ್ವಿ , ದೇವದುರ್ಗ , ಲಿಂಗಸೂಗೂರು, ಯಾದಗಿರಿ , ಸುರಪುರ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರಗಳನ್ನೊಳಗಗೊಂಡಿದೆ.

Women s not for contest only for votes In the Raichur Lok Sabha constituency

ಮಹಿಳಾ ಮತದಾರರ ಹಿನ್ನೋಟ

2014ರ ಚುನಾವಣೆಯ ಅವಲೋಕನ ಮಾಡುವುದಾದರೆ ಒಟ್ಟು 16,61 , 606 ಮತದಾರರಲ್ಲಿ 9,68,513 ಮತದಾರರು ಮತದಾನ ಮಾತ್ರ ಹಕ್ಕು ಚಲಾಯಿಸಿದರು. ಅದರಲ್ಲಿ 13,334 ಮತಗಳ ತಿರಸ್ಕೃತಗೊಂಡಿದ್ದವು. 5, 01, 122 ಪುರುಷ ಮತದಾರರು , 4, 67, 391 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅದರೆ 4, 67, 391 ಮತದಾರರು ಮತದಾನ ಮಾಡಿರಲಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+