ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಶ್ರೀರಾಮುಲು ಬೆಂಬಲ

By Manjunatha
|
Google Oneindia Kannada News

ಬೆಂಗಳೂರು, ಜುಲೈ 11: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಎದ್ದಿರುವ ಕೂಗಿಗೆ ಆ ಭಾಗದ ಪ್ರಭಾವಿ ನಾಯಕ ಶ್ರೀರಾಮುಲು ಬಹಿರಂಗವಾಗಿ ಇಂದು ಬೆಂಬಲ ಘೋಷಿಸಿದ್ದಾರೆ.

ಹೌದು, ಅಖಂಡ ಭಾರತದ ಮಾತಾಡುವ ಬಿಜೆಪಿ ಪಕ್ಷದ ಶ್ರೀರಾಮುಲು ಕರ್ನಾಟಕವನ್ನು ಎರಡು ಭಾಗ ಮಾಡುವ ಪ್ರತ್ಯೇಕ ರಾಜ್ಯ ಬೇಡಿಕೆಗೆ ತಮ್ಮ ಬೆಂಬಲ ಇದೆ ಎಂದು ಅಧಿವೇಶನದಲ್ಲಿಯೇ ಹೇಳಿದ್ದಾರೆ.

ಕುಮಾರಸ್ವಾಮಿ ವಚನ ಭ್ರಷ್ಟ, ಅವರಿಗೆ ಎರಡು ನಾಲಿಗೆ: ಶ್ರೀರಾಮುಲುಕುಮಾರಸ್ವಾಮಿ ವಚನ ಭ್ರಷ್ಟ, ಅವರಿಗೆ ಎರಡು ನಾಲಿಗೆ: ಶ್ರೀರಾಮುಲು

ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುವ ವೇಳೆ ಮಾತನಾಡಿದ ಮೊಳಕಾಲ್ಮೂರು ಶಾಸಕ ಶ್ರೀರಾಮುಲು, 'ಉತ್ತರ ಕರ್ನಾಟಕವನ್ನು ಸರ್ಕಾರ ನಿರ್ಲಕ್ಷಿಸಿದೆ, ಹಾಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನನ್ನ ಬೆಂಬಲವಿದೆ' ಎಂದು ಹೇಳಿದರು.

Sriramulu supports separate state demand for Uttar Karnataka

ಜೆಡಿಎಸ್ ತಾನು ಸೋತ ಕ್ಷೇತ್ರಗಳ ಮೇಲೆ ಅನುದಾನ ನೀಡದೆ ದ್ವೇಷ ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, ಕುಮಾರಸ್ವಾಮಿ ಅವರ ಪಕ್ಷಪಾತ ಧೋರಣೆಯಿಂದ ಬೇಸತ್ತು ತಾವು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದಾಗಿ ಹೇಳಿದರು.

ತೃತೀಯ ರಂಗ ಮಳೆಗಾಲದ ಅಣಬೆ : ಶ್ರೀರಾಮುಲು ಅಣಕ ತೃತೀಯ ರಂಗ ಮಳೆಗಾಲದ ಅಣಬೆ : ಶ್ರೀರಾಮುಲು ಅಣಕ

ಮುಂಚೆ ಬಹಳ ಕ್ಷೀಣವಾಗಿದ್ದ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆ, ಇತ್ತೀಚೆಗೆ ಬಜೆಟ್ ನ ನಂತರ ಅಲ್ಪ ಸ್ವಲ್ಪ ಧನಿ ಬಂದಿದೆ. ಆದರೆ ಈಗ ಶ್ರೀರಾಮುಲು ಅಂತಹಾ ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ಬಹಿರಂಗವಾಗಿಯೇ ಹೊರಾಟಕ್ಕೆ ಬೆಂಬಲ ಸೂಚಿಸಿದ ನಂತರ ಹೋರಾಟ ಬಿರುಸು ಪಡೆದುಕೊಳ್ಳುವ ಸಾಧ್ಯತೆ ಇದೆ.

English summary
BJP MLA Sriramulu today said in assembly that he support separate state demand for Uttar Karnataka people. He said CM Kumaraswamy neglecting Uttar Karnataka so we have to support separate state demand of Uttar Karnataka people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X