ಚಾಮರಾಜನಗರದಲ್ಲೊಂದು ವಿಚಿತ್ರ ಮೇಕೆಮರಿ ಜನನ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 11 : ಇತ್ತೀಚೆಗೆ ಪ್ರಕೃತಿ ವೈಚಿತ್ರ್ಯ ಅಚ್ಚರಿ ಮೂಡಿಸುತ್ತಿದೆ. ಮೇಕೆಗಳು ಮಗುವನ್ನು ಹೋಲುವ ಮರಿ ಸೇರಿದಂತೆ ಚಿತ್ರ ವಿಚಿತ್ರ ಮರಿಗಳಿಗೆ ಜನ್ಮ ನೀಡುತ್ತಿರುವುದು ಮಾಮೂಲಿಯಾಗಿದೆ.

ಆದರೂ ಇಂತಹ ವಿಚಿತ್ರ ಮರಿಗಳು ಜನಿಸಿದಾಗಲೆಲ್ಲಾ ಜನ ಅದರತ್ತ ಅಚ್ಚರಿಯ ನೋಟ ಬೀರುವುದು ಸಾಮಾನ್ಯ. ಇದೀಗ ಚಾಮರಾಜನಗರದ ಕೂಡ್ಲೂರು ಎಂಬ ಗ್ರಾಮದಲ್ಲಿ ರೈತರೊಬ್ಬರು ಸಾಕಿದ ಮೇಕೆ ವಿಚಿತ್ರ ಮರಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.

ಒಂದೇ ತಲೆ, ಒಂದು ದೇಹ, ಎಂಟು ಕಾಲು, ನಾಲ್ಕು ಕಿವಿ ಇರುವ ಮರಿ ಹುಟ್ಟುತ್ತಲೇ ಸಾವನ್ನಪ್ಪಿದೆ. ಈ ಮರಿ ವಿಚಿತ್ರವಾಗಿರುವುದರಿಂದ ಜನ ಇದನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದಾರೆ. [ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!]

Sheep gives birth to strange lamb with 8 legs

ಕೂಡ್ಲೂರು ಗ್ರಾಮದ ನಂಜುಂಡಶೆಟ್ಟಿ ಎಂಬುವರು ಮೇಕೆಯನ್ನು ಸಾಕಿದ್ದು, ಈ ಮೇಕೆ ಇತರ ಮೇಕೆಗಳಂತೆ ಆರೋಗ್ಯವಾಗಿಯೇ ಇದೆ. ಇದನ್ನು ಬೂದಿತಿಟ್ಟು ಗ್ರಾಮದ ಜಮೀನಿನಲ್ಲಿ ಮೇಯಲು ಹೊಡೆದುಕೊಂಡು ಹೋಗಿದ್ದರು. ಆಗ ಅಲ್ಲಿಯೇ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

ನಾಲ್ಕು ಮರಿಗಳ ಪೈಕಿ ಮೂರು ಮರಿಗಳು ಎಲ್ಲ ಮೇಕೆ ಮರಿಗಳಂತಿದ್ದರೆ ಒಂದು ಮಾತ್ರ ವಿಚಿತ್ರವಾಗಿತ್ತು. ಹತ್ತಿರ ಹೋಗಿ ನೋಡಿದ ನಂಜುಂಡಶೆಟ್ಟಿ ಅವರಿಗೆ ಅಚ್ಚರಿ ಕಾದಿತ್ತು. ಮರಿಗೆ ಒಂದೇ ದೇಹ, ತಲೆ ಇತ್ತಾದರೂ ಎಂಟು ಕಾಲು ನಾಲ್ಕು ಕಿವಿ ಕಾಣುತ್ತಿತ್ತು. ಆದರೆ ಮರಿ ಮಾತ್ರ ಅದಾಗಲೇ ಸತ್ತು ಹೋಗಿತ್ತು. [ಪ್ರತಿ ಶವಸಂಸ್ಕಾರಕ್ಕೆ ಹಾಜರಾಗುವ ಮೇಕೆಯ ವಿಶಿಷ್ಟ ಕಥೆ]

ತಾನು ಜನ್ಮ ನೀಡುತ್ತಲೇ ಮರಿ ಸತ್ತು ಹೋಗಿದೆ ಎಂಬ ಅರಿವಿಲ್ಲದ ತಾಯಿಮೇಕೆ ಅದನ್ನು ಮುದ್ದಿಸುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜನ ಅಲ್ಲಿಗೆ ಕುತೂಹಲದಿಂದ ಬರತೊಡಗಿದರು. ಕೆಲವರು ಕಲಿಗಾಲ ಏನು ಬೇಕಾದರೂ ನಡೆಯಬಹುದು ಎಂದು ಮಾತಾಡಿಕೊಂಡರು. ಒಟ್ಟಿನಲ್ಲಿ ಪ್ರಕೃತಿ ವೈಚಿತ್ರ್ಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ವಿಚಿತ್ರ ಮೇಕೆ ಮರಿ ಸಾಕ್ಷಿ ಎಂದರೆ ತಪ್ಪಾಗಲಾರದು.[ಸ್ಟಾರ್ ಬಕರಾ ಮಾಲಿಕರ ಖುಲಾಯಿಸಿದ ಅದೃಷ್ಟ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A sheep has given birth to a strange lamb with 8 legs in Chamarajanagar district Kudlur village. But, the lamb could not survice. People visited the place to see the unusual scene.
Please Wait while comments are loading...