Breaking; ದಿವ್ಯಾ ಹಾಗರಗಿ ಪರಿಚಯ ಟ್ವೀಟ್ ಮಾಡಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 28; ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಗ್ಗೆ ಚರ್ಚೆಗಳು ಜೋರಾಗಿವೆ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗುರುವಾರ ಕರ್ನಾಟಕ ಕಾಂಗ್ರೆಸ್ ದಿವ್ಯಾ ಹಾಗರಗಿ ಪರಿಚಯವನ್ನು ಟ್ವೀಟ್ ಮಾಡಿದೆ. #ScamBJP ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿ ಟ್ವೀಟ್ ಮಾಡಲಾಗಿದ್ದು, 'ತನ್ನ ಮನೆಮಗಳನ್ನೇ ಮಗಳಲ್ಲ ಎಂದಿರುವ ಬಿಜೆಪಿಯದ್ದು ಅತೀ ಕಠೋರ ಮನಸಲ್ಲವೇ' ಎಂದು ಕೇಳಿದೆ.

'ತಮ್ಮದೇ ನಾಯಕಿಯ ಸಂಬಂಧ ಕಡಿದುಕೊಳ್ಳುವುದು ಸರಿಯೇ, ಇದೇನಾ ನೀವು ಕಾರ್ಯಕರ್ತರಿಗೆ ಕೊಡುವ ಬೆಲೆ. ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯ ಆಸೆ ಎಂಬಂತೆ ಡಿ. ಕೆ. ಶಿವಕುಮಾರ್ ಅವರೊಂದಿಗೆ ಫೋಟೋ ತೋರಿಸಿ ದಿಕ್ಕು ತಪ್ಪಿಸುವುದು ಅಯೋಗ್ಯತನ' ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ತನ್ನ ಮನೆಮಗಳನ್ನೇ ಮಗಳಲ್ಲ ಎಂದಿರುವ ಬಿಜೆಪಿಯದ್ದು ಅತೀ ಕಠೋರ ಮನಸಲ್ಲವೇ!
— Karnataka Congress (@INCKarnataka) April 28, 2022
ತಮ್ಮದೇ ನಾಯಕಿಯ ಸಂಬಂಧ ಕಡಿದುಕೊಳ್ಳುವುದು ಸರಿಯೇ, ಇದೇನಾ ನೀವು ಕಾರ್ಯಕರ್ತರಿಗೆ ಕೊಡುವ ಬೆಲೆ @BJP4Karnataka?
'ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯ ಆಸೆ' ಎಂಬಂತೆ @DKShivakumar ಅವರೊಂದಿಗೆ ಫೋಟೋ ತೋರಿಸಿ ದಿಕ್ಕು ತಪ್ಪಿಸುವುದು ಅಯೋಗ್ಯತನ.#ScamBJP pic.twitter.com/zAqCr48woZ
ಬಿಜೆಪಿ ದಿವ್ಯಾ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಇರುವ ಫೋಟೋಗಳನ್ನು ಟ್ವೀಟ್ ಮಾಡಿತ್ತು. ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಕಾಂಗ್ರೆಸ್ ಆಪಾದಿಸಿತ್ತು. ಆದರೆ ಈ ಚಿತ್ರ ಬೇರೆ ಏನನ್ನೋ ಹೇಳುತ್ತಿದೆ ಎಂದು ಟ್ವೀಟ್‌ನಲ್ಲಿ ಆರೋಪಿಸಿತ್ತು.
ಕಾಂಗ್ರೆಸ್ ಅಧ್ಯಕ್ಷರು ಎಷ್ಟು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ ನೋಡಿ. ಕಾಂಗ್ರೆಸ್ ಪಕ್ಷದ ಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ಪ್ರಿಯಾಂಕ್ ಖರ್ಗೆ ವಿವರಿಸಬಹುದೇ? ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಅವರು ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರ್ಯಕ್ಕೂ ಈಗ ದಾಖಲೆ ಲಭಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡ ಎಂದು ದೂರಿತ್ತು.












Click it and Unblock the Notifications