Breaking; ಪಿಎಸ್‌ಐ ಹಗರಣ; ಗೃಹ ಸಚಿವರಿಗೆ ಕಾಂಗ್ರೆಸ್‌ ಟ್ವೀಟ್‌ ಬಾಣ!

ಬೆಂಗಳೂರು, ಏಪ್ರಿಲ್ 27; ಪಿಎಸ್‌ಐ ನೇಮಕಾತಿ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಸಿಐಡಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ಬುಧವಾರ ಕರ್ನಾಟಕ ಕಾಂಗ್ರೆಸ್ ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ಸರಣಿ ಟ್ವೀಟ್ ಮಾಡಿದೆ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ? ಎಂದು ಕೇಳಿದೆ.

ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ನಾಪತ್ತೆಯಾಗಿ 15 ದಿನಗಳಾಗಿವೆ. ಜಾಮೀನು ಅರ್ಜಿ ಹಾಕುತ್ತಿದ್ದಾರೆ ಎಂದರೆ ಪೊಲೀಸರಿಗೆ ಹುಡುಕಲಾಗದ ಜಾಗದಲ್ಲೇನೂ ಇಲ್ಲ. ಬಿಜೆಪಿ ಪಕ್ಷ ಹಾಗೂ ಸರ್ಕಾರದ ಪ್ರಭಾವಿಗಳೇ ಟೊಂಕಕಟ್ಟಿ ರಕ್ಷಿಸುತ್ತಿರುವುದು ಸ್ಪಷ್ಟ. ಗೃಹಸಚಿವರೇಕೆ ದಿವ್ಯಾ ಹಾಗರಗಿ ಬಗ್ಗೆ ಮಾತಾಡುತ್ತಿಲ್ಲ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದೆ.

PSI Recruitment Scam CID To Issue Notice To Araga Jnanendra Says Congress

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ ಆರಗ ಜ್ಞಾನೇಂದ್ರ ಅವರೇ, ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ? ಎಂದು ಟ್ವೀಟ್ ಬಾಣ ಬಿಟ್ಟಿದೆ.

ನಿಮ್ಮ ಸಮರ್ಥನೆಯನ್ನ ಬಾಲಿಶತನ ಎನ್ನೋಣವೇ?, ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸದನದಲ್ಲಿ ಗೃಹ ಸಚಿವರು ನೀಡಿರುವ ಹೇಳಿಕೆಯನ್ನು ಸಹ ಟ್ವೀಟ್ ಮಾಡಿದೆ.

ಹುಡುಕಾಟ ನಡೆಸುತ್ತಿರುವ ಸಿಐಡಿ; ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಂಗಳವಾರ ಕರ್ನಾಟಕ ಬಿಜೆಪಿ ದಿವ್ಯಾ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಇರುವ ಫೋಟೋಗಳನ್ನು ಟ್ವೀಟ್ ಮಾಡಿತ್ತು. ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಕಾಂಗ್ರೆಸ್‌ ಆಪಾದಿಸಿತ್ತು. ಆದರೆ ಈ ಚಿತ್ರ ಬೇರೆ ಏನನ್ನೋ ಹೇಳುತ್ತಿದೆ ಎಂದು ಹೇಳಿತ್ತು.

ಕಾಂಗ್ರೆಸ್ ಅಧ್ಯಕ್ಷರು ಎಷ್ಟು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ ನೋಡಿ. ಕಾಂಗ್ರೆಸ್ ಪಕ್ಷದ ಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು‌ ಪ್ರಿಯಾಂಕ್‌ ಖರ್ಗೆ ವಿವರಿಸಬಹುದೇ? ಎಂದು ಪ್ರಶ್ನೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+