ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನೀಟ್ ಅಕ್ರಮ ದಂಧೆಗೆ ಪಿಎಸ್ಐ ಹಗರಣವೇ ಪ್ರೇರಣೆ

|
Google Oneindia Kannada News

ಬೆಂಗಳೂರು ಜುಲೈ 20: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೀಟ್ ಪರೀಕ್ಷೆ ಪಾಸು ಮಾಡಿಸುವ ಜಾಲ ಸಿಬಿಐ ಬಂಧಿಸಿದ್ದು, ಅದಕ್ಕೆ ಕರ್ನಾಟಕದ ಪಿಎಸ್ಐ ನೇಮಕಾತಿ ಪ್ರಕರಣವೇ ಪ್ರೇರಣೆ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿ ಕಾರಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪತ್ರ (ನೀಟ್) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ಸೀಟುಗಳಿಗೆ ಅಗತ್ಯವಾದ ನೀಟ್ ಪರೀಕ್ಷೆ ಪಾಸು ಮಾಡಿಸುವುದಾಗಿ 20 ಲಕ್ಷ ರೂ. ಪಡೆದ ಅಭ್ಯರ್ಥಿಗಳ ಬದಲಿಗೆ ಬೇರೆಯವರನ್ನು ಪರೀಕ್ಷೆ ಬರೆಸುತ್ತಿದ್ದ ಎಂಟು ಮಂದಿಯನ್ನು ಮಂಗಳವಾರ ಸಿಬಿಐ ಬಂಧಿಸಿದೆ.

ಈ ನೀಟ್ ಪರೀಕ್ಷೆ ಪಾಸು ಕುರಿತ ದಂಧೆ ಕರ್ನಾಟಕದ ಪಿಎಸ್ಐ ನೇಮಕಾತಿ ಪ್ರಕರಣವೇ ಸ್ಪೂರ್ತಿಯಾದಂತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಈ ಮೂಲಕ ಪ್ರತಿಭಾವಂತ ಯುವಜನರ ವೈದ್ಯಕೀಯ ವ್ಯಾಸಂಗದ ಕನಸಿಗೆ ಕೊಳ್ಳಿ ಇಡುವ ಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ನಿರ್ಮಾಣ ಆಗಿದೆ. ಇದಕ್ಕೆ ಭ್ರಷ್ಟ ಸ್ನೇಹಿ ಬಿಜೆಪಿಯ ಅಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

NEET scam inspaird by Karnataka PSI scam: Congress alleged

ಅಭಿವೃದ್ಧಿಗೆ ಹಣವಿಲ್ಲ

ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾಗಳಿಗೆ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹಣ ಇದೆ. ಕಾಮಗಾರಿಗಳಲ್ಲಿ 40% ಕಮಿಷನ್ ದೋಚಲು ಹಣವಿದೆ. ಮೂಲಭೂತ ಅಭಿವೃದ್ಧಿ, ಜನ ಉಪಯೋಗಿ ಕೆಲಸಗಳನ್ನು ಬಗ್ಗೆ ಕೇಳಿದರೆ ಸರ್ಕಾರದ 'ಬೊಕ್ಕಸದಲ್ಲಿ ಹಣವಿಲ್ಲ' ಎಂಬ ಉತ್ತರ ಕೇಳಿ ಬರುತ್ತದೆ. ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸಲೀಸಾದ ಉತ್ತರ ಬಿಜೆಪಿ ಯಾವಾಗಲೂ ಸಿದ್ದವಿಟ್ಟುಕೊಂಡಿರುತ್ತದೆ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.

NEET scam inspaird by Karnataka PSI scam: Congress alleged

ರಾಜ್ಯದಲ್ಲಿ ಮಳೆ, ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಇದುವರೆಗೂ ಪರಿಹಾರದ ಪ್ಯಾಕೇಜ್ ಘೋಷಣೇ ಮಾಡಿಲ್ಲ. ನೆರೆ ಸಂತ್ರಸ್ತರನ್ನು ಸರ್ಕಾರ ನಿರ್ಲಕ್ಷಿದೆ. ಸಂತ್ರಸ್ಥರಿಗೆ ಕೇಂದ್ರ ಸರ್ಕಾರದ ನೆರವು ದೊರೆತಿಲ್ಲ. ಇದು ನೋಡಿ ಡಬಲ್ ಎಂಜಿನ್ ಸರ್ಕಾರಗಳ ಅಭಿವೃದ್ಧಿ, ವಿಕಾಸ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

English summary
Karnataka illegal scam PSI recruitment has inspired may be the crackdown on passing National Eligibility Entrance Test (NEET) required to get a medical seat. Not having development funds in BJP government, Karnataka Congress alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X