• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಮ್ ಸಿಂಡಿಕೇಟ್‌ಗೆ ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದ್ದರೂ ಕೋಕಾ ಅನ್ವಯ: ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ನ.16: ಕ್ರೈಮ್ ಸಿಂಡಿಕೇಟ್‌ಗಾಗಿ ವೈಯಕ್ತಿಕವಾಗಿ ಕಾರ್ಯನಿರ್ವಹಿಸುವ ಆರೋಪಿಯ ವಿರುದ್ಧವೂ ಸಹ ಕರ್ನಾಟಕ ಅಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಭೂಗತ ಪಾತಕಿ ಬನ್ನಂಜೆ ರಾಜನ ಸಹಚರನೊಬ್ಬನಿಗೆ ಜಾಮೀನು ನೀಡಲು ನಿರಾಕರಿಸಿರುವವ ನ್ಯಾಯುಪೀಠ ಈ ಆದೇಶವನ್ನು ನೀಡಿದೆ.

ಉಡುಪಿ ಮೂಲದ ಉದ್ಯಮಿ ಹಾಗೂ ಆತನ ಪುತ್ರನಿಗೆ ಒತ್ತೆ ಹಣ ನೀಡದಿದ್ದರೆ 2019ರಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಹೊತ್ತಿರುವ ಶಾಹಿ ಪೂಜಾರಿ ಅಲಿಯಾಸ್ 'ಶ್ಯಾಡೋ' ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.

ಆರೋಪಿಯು ಅಪರಾಧ ಸಿಂಡಿಕೇಟ್‌ಗಾಗಿ ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದ್ದರೂ ಸಹ, ಕರ್ನಾಟಕ ಸಂಘಟಿತ ಅಪರಾಧಗಳ ಕರ್ನಾಟಕ ನಿಯಂತ್ರಣ ಕಾಯ್ದೆ (ಕೆಸಿಒಸಿಎ), 2000ರ ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾಗಬಹುದು ಎಂದು ದರೋಡೆಕೋರರ ಆಪಾದಿತ ಸಹಚರನಿಗೆ ಜಾಮೀನು ನೀಡಲು ನಿರಾಕರಿಸುವ ವೇಳೆ ಹೇಳಿದೆ.

ಕೋಕಾ ವ್ಯಾಖ್ಯಾನ: ಕೋಕಾ ಕಾಯಿದೆಯಡಿ "ಸಂಘಟಿತ ಅಪರಾಧ ಸಿಂಡಿಕೇಟ್" ಎಂಬುದರ ವ್ಯಾಖ್ಯಾನ ಎಲ್ಲರೂ ಒಗ್ಗೂಡಿ ಅಪರಾಧ ಕೃತ್ಯವನ್ನು ನಡೆಸುವುದು ಮತ್ತು ವೈಯಕ್ತಿಕವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಎರಡೂ ಸೇರಿದೆ. ಆದ್ದರಿಂದ ಅಪರಾಧ ಸಿಂಡಿಕೇಟ್‌ನ ಭಾಗವಾಗಿ ಆರೋಪಿ ಕೆಲವು ಕೃತ್ಯಗಳನ್ನು ಎಸಗಿದ್ದರೂ ಅಥವಾ ಆತ ವೈಯಕ್ತಿಕವಾಗಿ ಕೆಲವು ಆರೋಪಗಳನ್ನು ಎದುರಿಸುತ್ತಿದ್ದರೂ ಎರಡೂ ಒಂದೇ ಆಗಿವೆ. ಎರಡೂ ಕೋಕಾ ಕಾಯಿದೆಯಡಿ ಅನ್ವಯವಾಗಲಿದೆ. ಅದಕ್ಕೆ ವಿಚಾರಣೆ ಎದುರಿಸಲೇಬೇಕು ಎಂದು ಆದೇಶ ನೀಡಿದೆ.

ಅರ್ಜಿದಾರರು ನಾನು ಅಪರಾಧ ಸಿಂಡಿಕೇಟ್‌ನಲ್ಲಿ ಇರಲಿಲ್ಲ ಎಂದು ಹೇಳಿದರೂ ಆತ ವೈಯಕ್ತಿಕವಾಗಿ ಅದೇ ಉದ್ದೇಶಕ್ಕಾಗಿ ಕಾರ್ಯ ನಿರ್ವಹಣೆ ಮಾಡಿರುವುದರಿಂದ ಕೋಕಾ ಕಾಯಿದೆ ವ್ಯಾಪ್ತಿಗೆ ಒಳಪಡಲೇಬೇಕು ಮತ್ತು ಅದಕ್ಕೆ ಆತ ಶಿಕ್ಷೆ ಅನುಭವಿಸಲೇಬೇಕು ಎಂದು ನ್ಯಾಯಾಲಯ ಹೇಳಿದೆ.

KCOCA will apply even acted individually for crime syndicate: Ruled HC

ಆರೋಪಪಟ್ಟಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರ ಸಹೋದರ ಮತ್ತು ಈ ಪ್ರಕರಣದ ಆರೋಪಿಯೂ ಆದ ರವಿಚಂದ್ರ ಪೂಜಾರಿ ಜೈಲಿನಲ್ಲಿದ್ದುಕೊಂಡೇ ಅರ್ಜಿದಾರರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಅರ್ಜಿದಾರರು ಹಲವು ಬಾರಿ ಬನ್ನಂಜೆ ರಾಜನನ್ನು ಭೇಟಿಯಾಗಿದ್ದಾರೆ. ಹಾಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಅರ್ಜಿದಾರರು, ಅನಗತ್ಯವಾಗಿ ತಮ್ಮನ್ನು ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಿಲುಕಿಸಿದ್ದಾರೆ. ಇದರಲ್ಲಿ ನನ್ನ ಕೈವಾಡವೇನೂ ಇಲ್ಲ, ಅಪರಾಧ ನಡೆಸಿದೆ ಎನ್ನಲಾದ ಸಿಂಡಿಕೇಟ್ ನಲ್ಲಿ ನಾನು ಇರಲಿಲ್ಲ. ಹಾಗಾಗಿ ತನ್ನ ವಿರುದ್ಧ ಪ್ರಕರಣ ರದ್ದುಗೊಳಿಸಬೇಕು ಮತ್ತು ಜಾಮೀನು ನೀಡಬೇಕು ಎಂದು ಕೋರಿದ್ದನು.

ಆದರೆ ಪ್ರಾಸಿಕ್ಯೂಷನ್, ಅರ್ಜಿದಾರರೂ ಕೂಡ ಹಲವು ಬೆದರಿಕೆ ಮತ್ತು ಒತ್ತೆಹಣ ಸಂಗ್ರಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕರೆ ದಾಖಲೆಗಳ ಪ್ರಕಾರ ಆತ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜನ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಿತ್ತು.

English summary
The High Court of Karnataka has said that the definitions ‘organised crime syndicate’ and ‘organised crime’ under the Karnataka Control of Organised Crimes Act, 2000 (KCOCA)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X