High Court: ಪತ್ನಿಗೆ ಅಂಗವೈಕಲ್ಯ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಹೇಳಿದ್ದೇನು..?
ಬೆಂಗಳೂರು, ಏಪ್ರಿಲ್ 13: ಶೇಕಡ 75ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಯಿಂದ ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಪತ್ನಿ ಜೀವನಾಂಶ ಹೆಚ್ಚಳ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ, ಅಷ್ಟೊಂದು ಅಂಗವೈಕಲ್ಯ ಇರುವ ಪತಿಯಿಂದ ಪತ್ನಿ ಹೇಗಾದರೂ ಜೀವನಾಂಶ ಕೇಳುತ್ತಾರೆಂದು ಬೇಸರ ವ್ಯಕ್ತಪಡಿಸಿದೆ.

ವಿಚ್ಚೇದನ ಕುರಿತಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಪತಿ ಸಲ್ಲಿಸಿದ ಹಾಗೂ ಮಾಸಿಕ ಜೀವನಾಂಶ ನಿರ್ವಹಣೆ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿಯೂ ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಪತಿಯೂ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಆತ ಇನ್ನು ಮುಂದೆ ಉದ್ಯೋಗವನ್ನು ಹುಡುಕುಲು ಅಸಹಾಯಕನಾಗಿದ್ದಾನೆ. ಹಾಗಾಗಿ ಆತನಿಗೆ ಜೀವನಾಂಶವನ್ನು ನೀಡುವಂತೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ಹೇಳಿದೆ. ಅಲ್ಲದೇ ಪತ್ನಿಯೂ ಸಂಪಾದನೆಗೆ ಅರ್ಹಳು ಎನ್ನುವ ಅಂಶವನ್ನು ನ್ಯಾಯಪೀಠ ಗಮನಿಸಿತು.
ಬಳಿಕ ಪತಿಗೆ ನೀಡಿದ ಅಂಗವೈಕಲ್ಯ ಪ್ರಮಾಣಪತ್ರವನ್ನು ಉಲ್ಲೇಖಿಸಿ, ಅಂಗವೈಕಲ್ಯದಿಂದಾಗಿ ಪತಿ ಸಂಪಾದಿಸಲು ಅಸಮರ್ಥನಾಗಿದ್ದರೂ ಗಂಡನ ಅಂಗವೈಕಲ್ಯವನ್ನು ಕಣ್ಣಾರೆ ಕಂಡು ಜೀವನಾಂಶವನ್ನು ಪಾವತಿಸಲು ಹೆಂಡತಿ ಏಕೆ ?ಮತ್ತು ಹೇಗೆ ? ಒತ್ತಾಯಿಸುತ್ತಿದ್ದಾಳೆ ಎನ್ನುವುದು ಅರ್ಥವಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದೆ.
ಅನಾರೋಗ್ಯಕ್ಕೆದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ನೂಕಿದಂತಾಗುತ್ತದೆ. ವಿಚ್ಛೇದಿತ ಪತಿಯ ತಂದೆ ಹಲವಾರು ಆಸ್ತಿಗಳನ್ನು ಹೊಂದಿದ್ದು, ಹೆಂಡತಿ ಮತ್ತು ಮಗುವಿನ ಜೀವನಾಂಶವನ್ನು ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಈ ಹಂತದಲ್ಲಿ ಈ ಸಲ್ಲಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದಿದೆ.
75% ಅಂಗವೈಕಲ್ಯವನ್ನು ಹೊಂದಿರುವ ಕಾರಣ ಜೀವನಾಂಶವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಪತಿ ಹೇಳಿದ್ದರು. ಇದೆಲ್ಲದರ ಅನುಸಾರ ನ್ಯಾಯಪೀಠವು ಪತಿಯ ತಂದೆಯ ಅಥವಾ ಅರ್ಜಿದಾರರ ತಂದೆ ಮೊಮ್ಮಗುವಿನ ಶಿಕ್ಷಣ ಮತ್ತು ಆಕೆಯ ವೃತ್ತಿ ಮತ್ತು ಮೊಮ್ಮಗನ ಜೀವನದ ಎಲ್ಲಾ ಹಂತಗಳು ಸೇರಿ ತರ ಅಗತ್ಯತೆಗಳನ್ನು ನೋಡಿಕೊಳ್ಳಬೇಕಾಗಿರುವುದು ಸೂಕ್ತ ಎಂದು ಭಾವಿಸುತ್ತೇನೆ.
ಪ್ರಕರಣದಲ್ಲಿ ಪತ್ನಿಗೆ ಪ್ರತಿವಾದಿಯು ಅರ್ಹರಾಗಿರುವ ಏಕೈಕ ಪರಿಹಾರ ಇದಾಗಿದೆ. ಜೀವನಾಂಶವನ್ನು 70%ಕ್ಕೆ ಹೆಚ್ಚಿಸುವ ಹೆಂಡತಿಯ ಹಕ್ಕು ಮೇಲ್ನೋಟಕ್ಕೆ ಸಮರ್ಥನೀಯವಲ್ಲ ಮತ್ತು ತಿರಸ್ಕರಿಸಲ್ಪಟ್ಟಿದೆ. ಗಂಡನ ಅಂಗವೈಕಲ್ಯದ ದಿನಾಂಕದವರೆಗಿನ ನಿರ್ವಹಣೆಯ ಬಾಕಿಯನ್ನು ಪತಿಯ ತಂದೆ ಪೂರೈಸಬೇಕು ಎಂದು ಅದು ನಿರ್ದೇಶಿಸಿದೆ.
ಪ್ರಕರಣದ ಹಿನ್ನಲೆ ಏನು..?
ಅರ್ಜಿದಾರರು ಮತ್ತು ಪ್ರತಿವಾದಿಯ ವೈವಾಹಿಕ ಸಂಬಂಧದ ಹದಗೆಟ್ಟ ಮೇಲೆ ವಿಚ್ಚೇದನಕ್ಕೆ ಮುಂದಾದರು.ಸದರಿ ಅರ್ಜಿಯಲ್ಲಿ, ಪತ್ನಿಯು ಹಿಂದೂ ವಿವಾಹ ಕಾಯ್ದೆಯ 1955 ರ ಸೆಕ್ಷನ್ 24 ರ ಅಡಿಯಲ್ಲಿ ಮಧ್ಯಂತರ ಜೀವನಾಂಶವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದಳು. ಈ ಕುರಿತು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ಕಕ್ಷಿದಾರರನ್ನು ಆಲಿಸಿದ ನಂತರ, ಪತ್ನಿಗೆ ಪ್ರತಿ ತಿಂಗಳು15,000 ರೂ. ಮಧ್ಯಂತರ ಜೀವನಾಂಶವನ್ನು ನೀಡಿತು.
ಈ ಅರ್ಜಿ ವಿಚಾರಣೆ ಬಾಕಿಯಿರುವಾಗಲೇ ಪತಿಯೂ ಅರ್ಜಿದಾರರು ಪಾರ್ಶ್ವವಾಯುವಿಗೆ ಒಳಗಾದ ಪರಿಣಾಮವಾಗಿ 75% ಅಂಗವೈಕಲ್ಯಕ್ಕೆ ಒಳಗಾಗಿದ್ದರು, ಇದರಿಂದಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಪತಿ ಜೀವನಾಂಶವನ್ನು ಪಾವತಿಸದ ಕಾರಣ, ಜೀವನಾಂಶದ ಬಾಕಿ ವಸೂಲಿ ಮಾಡಲು, ಜೀವನಾಂಶದ ಆದೇಶವನ್ನು ಕಾರ್ಯಗತಗೊಳಿಸುವಂತೆ ಕೋರಿ ಪತ್ನಿ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದರು.












Click it and Unblock the Notifications