ಇವಿಎಂನಿಂದ ರೇಣುಕಾಚಾರ್ಯ ಸಹೋದರನ ಹೆಸರು ತೆಗೆಸಲು ಒತ್ತಾಯ: ಕೋರ್ಟ್‌ನಲ್ಲಿ ಅರ್ಜಿ ವಜಾ

ಬೆಂಗಳೂರು, ಏಪ್ರಿಲ್‌ 21: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಅವರ ಹೆಸರನ್ನು ಇವಿಎಂನಿಂದ ತೆಗೆಯಲು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಹಾಗಾಗಿ ಅವರು ಸ್ಪರ್ಧಾಕಣದಲ್ಲಿ ಉಳಿಯಲಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ರೇಣುಕಾಚಾರ್ಯ ಲಿಂಗಾಯಿತ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೆ ಅವರ ಸಹೋದರೆ ಹೇಗೆ ಬೇಡ ಜಂಗಮ ಜಾತಿಗೆ ಸೇರಿದರು ಎಂಬ ಪ್ರಶ್ನೆ ಎದುರಾಗಲಿದೆ.

Petition Seeking Removal Of Renukacharya Brother Name Form EVM Dismissed By HC

ಹೊಸದುರ್ಗ ತಾಲೂಕಿನ ಗೂಳಿಹಟ್ಟಿಯ ಆರ್‌.ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು.ಆಗ ಅರ್ಜಿದಾರರು ಮತ್ತು ಚುನಾವಣಾ ಆಯೋಗದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ''ಚುನಾವಣಾ ಪ್ರಕ್ರಿಯೆ ಆರಂಭವಾಗಿರುವಾಗ ಈ ಹಂತದಲ್ಲಿಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ. ಅಲ್ಲದೆ, ಒಮ್ಮೆ ಪ್ರಕ್ರಿಯೆ ಶುರುವಾದ ಮೇಲೆ ಆ ಕುರಿತ ಯಾವುದೇ ಅರ್ಜಿ ಮಾನ್ಯ ಮಾಡಲಾಗದು. ಅರ್ಜಿದಾರರು ಏನೇ ಇದ್ದರೂ ಚುನಾವಣೆ ನಂತರ ತಕರಾರು ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ,' ಎಂದು ಆದೇಶಿಸಿತು.

ಇವಿಎಂನಿಂದ ಹೆಸರು ತೆಗೆಯಿರಿ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು ದಾರಕೇಶ್ವರಯ್ಯಗೆ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿರುವ ಅವರು ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿಚುನಾವಣೆಗೆ ಸ್ಪರ್ಧಿಸಿದ್ದು, ಅವರ ನಾಮಪತ್ರ ಸಿಂಧುವಾಗಿದೆ. ಹಾಗಾಗಿ, ಅವರ ಹೆಸರನ್ನು ಇವಿಎಂನಿಂದ ತೆಗೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಹಸ್ತಕ್ಷೇಪಕ್ಕೆ ನಿರ್ಬಂಧ

ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಶರತ್‌ ದೊಡ್ಡವಾಡ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಅವರ ಜಾತಿ ಪ್ರಮಾಣಪತ್ರದ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಅವರು ಸಲ್ಲಿಸಿದ ಜಾತಿ ಪ್ರಮಾಣಪತ್ರ ಆಧರಿಸಿ ನಾಮಪತ್ರ ಸಿಂಧುವಾಗಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿ ದಿವ್ಯಾಂಗರು ಹಾಗೂ ಹಿರಿಯ ನಾಗರಿಕರು ಮತ ಚಲಾವಣೆ ಮಾಡಿದ್ದಾರೆ.

ಈ ಹಂತದಲ್ಲಿಅವರ ಹೆಸರನ್ನು ಇವಿಎಂನಿಂದ ತೆಗೆಯಲು ಸಾಧ್ಯವಿಲ್ಲ. ಇದನ್ನು ರಿಟ್‌ ಮೂಲಕ ಪ್ರಶ್ನಿಸಲಾಗದು. ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ ಆನಂತರ ನ್ಯಾಯಾಲಯ ಹಸ್ತಕ್ಷೇಪ ಮಾಡದಂತೆ ಸಂವಿಧಾನದ ಕಲಂ 329(ಬಿ) ಅಡಿ ನಿರ್ಬಂಧವಿದೆ,'ಧಿ' ಎಂದರು.

ಆದರೆ, ಎಂ.ಪಿ.ದಾರಕೇಶ್ವರಯ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ಆಕ್ಷೇಪಿಸಿ ದಾಸರಹಳ್ಳಿಯ ಎಂ.ಚಂದ್ರ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಆ ಪ್ರಕರಣದಲ್ಲಿದಾರಕೇಶ್ವರಯ್ಯಗೆ ನ್ಯಾಯಪೀಠ ಬೇಡ ಜಂಗಮ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+