ರಾಜ್ಯದ ವಂಚನೆ ಪ್ರಕರಣಗಳು: ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು ಏಪ್ರಿಲ್ 16: ಐಎಂಎ ಸೇರಿದಂತೆ ಹಲವು ಕಂಪನಿಗಳಿಂದ ವಂಚನೆ ಪ್ರಕರಣಗಳಲ್ಲಿ ಆಗಿರುವ ಪ್ರಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಸಕ್ಷಮ ಪ್ರಾಧಿಕಾರಗಳು ಎಷ್ಟು ಆಸ್ತಿ ವಶಪಡಿಸಿಕೊಂಡಿವೆ, ಎಷ್ಟು ಹರಾಜು ಮಾಡಲಾಗಿದೆ ಮತ್ತು ಎಷ್ಟು ಮಂದಿಗೆ ಠೇವಣಿ ಹಣ ಹಿಂತಿರುಗಿಸಲಾಗಿದೆ. ಇನ್ನೂ ಎಷ್ಟು ಮಂದಿಗೆ ಪಾವತಿ ಮಾಡಬೇಕಿದೆ ಎಂಬ ಬಗ್ಗೆ ಅಂಕಿ ಅಂಶಗಳುಳ್ಳ ವರದಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಠೇವಣಿದಾರರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಕೋರಿ ನರೇಂದ್ರ ಕುಮಾರ್‌ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ಸಿಜೆ ಎ.ಎಸ್.ಅಂಜಾರಿಯಾ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಪಂಚವಾರ್ಷಿಕ ಯೋಜನೆಯಾಗಬಾರದು
ಕಷ್ಟಪಟ್ಟು ದುಡಿದ ಹಣವನ್ನು ಕಂಪನಿಗಳಲ್ಲಿ ತೊಡಗಿಸಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆದಷ್ಟು ಶೀಘ್ರ ಹಣ ಮರುಪಾವತಿ ಆಗಬೇಕು. ಯಾವುದೇ ಕಾರಣಕ್ಕೂ ಮರು ಪಾವತಿ ವಿಳಂಬವಾಗಬಾರದು ಹಣ ಮರುಪಾವತಿ ಪಂಚ ವಾರ್ಷಿಕ ಯೋಜನೆಯಾಗಬಾರದು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ಕೆಲ ಕಾಲ ಸಕ್ಷಮ ಪ್ರಾಧಿಕಾರದ ವಕೀಲರ ವಾದವನ್ನು ಆಲಿಸಿ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯಿದೆ (ಕೆಪಿಎಡಿ) ಕಾಯಿದೆ ಪ್ರಕಾರ ಸಕ್ಷಮ ಪ್ರಾಧಿಕಾರಗಳ ಮೊದಲ ಆದ್ಯತೆ ಠೇವಣಿದಾರರ ಹಿತರಕ್ಷಿಸುವುದಾಗಿದೆ. ಅದಕ್ಕಾಗಿ ಪ್ರಾಧಿಕಾರಗಳು ಎಲ್ಲಾಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೇಳಿತು.
ಇಂತಹ ಪ್ರಕರಣಗಳಲ್ಲಿ ಪ್ರಾಧಿಕಾರಿಗಳು ನಿಯಮಾನುಸಾರ ಆಸ್ತಿಗಳನ್ನು ವಶಪಡಿಸಿಕೊಂಡು, ಅವುಗಳನ್ನು ಹರಾಜಿಗಿಟ್ಟು ಬಂದ ಹಣವನ್ನು ಠೇವಣಿದಾರರಿಗೆ ವಾಪಸ್ ನೀಡಬೇಕು. ಅದಕ್ಕೆ ಕಾಲಮಿತಿ ಇರಬೇಕಾಗುತ್ತದೆ, ಇಲ್ಲವಾದರೆ ಆ ಪ್ರಕ್ರಿಯೆ ವರ್ಷಾನುಗಟ್ಟಲೆ ಹಿಡಿಯುತ್ತದೆ. ಮರು ಪಾವತಿ ಪ್ರಕ್ರಿಯೆ ಪಂಚವಾರ್ಷಿಕ ಯೋಜನೆ ಆಗಬಾರದು. ಹಾಗಾಗಿ ಸಕ್ಷಮ ಪ್ರಾಧಿಕಾರಗಳು ಈವರೆಗೆ ಆಗಿರುವ ಪ್ರಗತಿ ಬಗ್ಗೆ ಅಂಕಿ ಅಂಶಗಳ ಸಮೇತ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಏ.23ಕ್ಕೆ ಮುಂದೂಡಿತು.
ಸಕ್ಷಮ ಪ್ರಾಧಿಕಾರಗಳ ಪರ ವಾದ ಮಂಡಿಸಿದ ವಕೀಲರು, ಐಎಂಎ ಸೇರಿದಂತೆ 20 ವಂಚನೆ ಪ್ರಕರಣಗಳಲ್ಲಿರಚಿಸಲಾಗಿರುವ ಸಕ್ಷಮ ಪ್ರಾಧಿಕಾರಗಳು, ಆಸ್ತಿ ಮುಟ್ಟುಗೋಲು, ಹರಾಜು, ಠೇವಣಿದಾರರಿಗೆ ಹಣ ಮರುಪಾವತಿ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆದಕ್ಕೆ ನ್ಯಾಯಪೀಠ, ಟ್ಯಾಬುಲರ್ ಕಾಲಂನಲ್ಲಿಪ್ರತಿಯೊಂದು ಪ್ರಕರಣದ ಪ್ರಗತಿ ಏನೇನಾಗಿದೆ ಎಂಬ ವಿವರಗಳನ್ನು ನೀಡಬೇಕೆಂದು ಆ ವಕೀಲರಿಗೆ ಸೂಚನೆ ನೀಡಿತು.
ಅರ್ಜಿದಾರರು, ಐಎಂಎ ಸೇರಿದಂತೆ 20 ಕಂಪನಿಗಳಿಂದ ಸುಮಾರು 1 ಲಕ್ಷ ಠೇವಣಿದಾರರು ಹಣ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಐಎಂಎ ಪ್ರಕರಣದಲ್ಲಿಮಾತ್ರ ಸ್ವಲ್ಪ ಸಂತ್ರಸ್ತರಿಗೆ ಹಣ ಹಿಂತಿರುಗಿಸಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಉಳಿದ ಕಂಪನಿಗಳ ವಿಚಾರದಲ್ಲಿಯಾವುದೇ ಪ್ರಗತಿ ಆಗಿಲ್ಲ, ಆಸ್ತಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ, ಕ್ಲೇಮ್‌ಗಳನ್ನು ಸ್ವೀಕರಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲಎಂದು ದೂರಿದರು.












Click it and Unblock the Notifications