ಉಗ್ರರ ಪರ ಪ್ರಚಾರ : ಕಲಬುರಗಿಯ ಸಿರಾಜುದ್ದೀನ್ ತನಿಖೆ ಎನ್‌ಐಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 02 : ಐಎಸ್ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಕಲಬುರಗಿ ಮೊಹಮದ್ ಸಿರಾಜುದ್ದೀನ್ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೈಗೆತ್ತಿಕೊಂಡಿದೆ. ರಾಜಸ್ಥಾನದಲ್ಲಿ ಸಿರಾಜುದ್ದೀನ್ ಬಂಧಿಸಲಾಗಿತ್ತು.

ಭಾರತೀಯ ತೈಲ ನಿಗಮದ (ಐಒಸಿ)ಯಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಸಿರಾಜುದ್ದೀನ್ ಅವರನ್ನು 2015ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಬಂಧಿಸಲಾಗಿತ್ತು. ರಾಜಸ್ಥಾನ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಸಿರಾಜುದ್ದೀನ್ ಪ್ರಕರಣ ತನಿಖೆ ನಡೆಸುತ್ತಿತ್ತು. [ಸಿರಾಜುದ್ದೀನ್ ಬಳಿ ಇತ್ತು 12 ಸಾವಿರ ಪುಟದ ದಾಖಲೆ!]

isis

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ಸೂಚನೆ ನೀಡಿತ್ತು. ಆದ್ದರಿಂದ, ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸಿರಾಜುದ್ದೀನ್ ಅವರ ವಿರುದ್ಧ ಜೈಪುರದಲ್ಲಿ ಪ್ರಕರಣ ದಾಖಲಾಗಿದೆ. [ISIS ಪರ ಪ್ರಚಾರ. ಕಲಬುರಗಿ ಮೂಲದ ವ್ಯಕ್ತಿ ಸೆರೆ]

ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಪರವಾಗಿ ಪ್ರಚಾರ ಮಾಡುತ್ತಿದ್ದ ಸಿರಾಜುದ್ದೀನ್, ಯುವಕರಿಗೆ ಉಗ್ರ ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದ ಎಂಬ ಆರೋಪಗಳು ಇವೆ. ಕೇಂದ್ರ ಸರ್ಕಾರ ಎನ್‌ಐಎ ತನಿಖೆ ನಡೆಸುವ ಆದೇಶ ಹೊರಡಿಸಿದ್ದು, ಎಸ್‌ಪಿ ದರ್ಜೆಯ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದೆ.

ಮೊಹಮದ್ ಸಿರಾಜುದ್ದೀನ್‌ ಬಂಧಿಸುವಾಗ ಎಟಿಎಸ್ ಅಧಿಕಾರಿಗಳು ಆತನ ಬಳಿ ಇದ್ದ ಸುಮಾರು 12 ಸಾವಿರ ಪುಟಗಳ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಕೆಲವು ಯುವಕರನ್ನು ಆತ ಭೇಟಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigation Agency (NIA) has taken over the case relating to an Indian Oil Corporation official who is alleged to be linked to the ISIS. The official Mohammad Sirajuddin a resident of Karnataka was arrested in Jaipur, Rajasthan on 2015, December.
Please Wait while comments are loading...