ಐಸಿಸ್ ಸಂಬಂಧ: ತಮಿಳುನಾಡು, ಪುದುಚೇರಿಯಲ್ಲಿ ಎನ್‌ಐಎ ಶೋಧ
ಚೆನ್ನೈ, ಜೂ. 10; ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲವರ ಬಗ್ಗೆ ಮಾಹಿತಿ ಕಲೆ ಹಾಕಲು ಗುರುವಾರ ಎನ್‌ಐಎ ತಮಿಳುನಾಡು ಹಾಗೂ ಪುದುಚೇರಿಯ ಹಲವು ಪ್ರದೇಶಗಳಲ್ಲಿ ಶೋಧ ನಡೆಸಿದೆ.
ತಮಿಳುನಾಡಿನ ಚೆನ್ನೈ, ಮೈಲಾಡುತುರೈ, ಪುದುಚೇರಿಯ ಕಾರೈಕಲ್‌ಗೆ ಸೇರಿದ 9 ಪ್ರದೇಶಗಳಲ್ಲಿ ಶೋಧ ನಡೆಸಿ ಹಲವು ಮಹತ್ವದ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಹಲವು ಕೈಬರಹದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈಲಾಡುತುರೈನ ಎಂ.ಡಿ. ಸಾಧಿಕ್ ಬಚ್ಚಾ ಅಲಿಯಾಸ್ ಐಸಿಎಎಂಎ ಸಾಧಿಕ್ ಸೇರಿದಂತೆ ಇನ್ನೂ ನಾಲ್ವರು ಆರೋಪಿಗಳು ಫೆಬ್ರವರಿಯಲ್ಲಿ ಕೆಲವು ಜನರು ಹಾಗೂ ಪೊಲೀಸರ ಕೊಲೆಗೆ ಸಂಚು ರೂಪಿಸಿದ್ದರು. ವಾಹನ ತಪಾಸಣೆಯ ಸಂದರ್ಭದಲ್ಲಿ ಅವರನ್ನು ಕೊಲೆ ಮಾಡಲು ಕೂಡ ಹೊಂಚು ಹಾಕಿದ್ದರು.

ಆರೋಪಿಗಳು ಖಿಲಾಫತ್ ಪಾರ್ಟಿ ಆಫ್ ಇಂಡಿಯಾ, ಖಿಲಾಫತ್ ಫ್ರಂಟ್ ಆಫ್ ಇಂಡಿಯಾ. ಇಂಟಲೆಕ್ಚುವಲ್ ಸ್ಟೂಡೆಂಟ್ಸ್ ಆಫ್ ಇಂಡಿಯಾ ಎಂಬ ಸಂಘಟನೆಗಳನ್ನು ರೂಪಿಸಿಕೊಂಡು ನಿಷೇಧಿತ ಸಂಘಟನೆಗಳಾದ ಐಸಿಸ್ ಹಾಗೂ ಅಲ್‌ಖೈದಾದೊಂದಿಗೆ ಸಂಬಂಧ ಹೊಂದುವ ಮೂಲಕ ದ್ವೇಷವನ್ನು ಹರಡಲು ಪ್ರಚೋದನೆ ಮಾಡುತ್ತಿದ್ದರು ಎಂಬ ಆರೋಪವಿದೆ.

ಮೈಲಾಡುತುರೈನಲ್ಲಿ ಮೊದಲಿಗೆ ಪ್ರಕರಣ ದಾಖಲಿಸಲಾಯಿತು ನಂತರ ಏಪ್ರಿಲ್‌ನಲ್ಲಿ ಮತ್ತೆ ಎನ್ಐಎ ಮತ್ತೆ ಕೇಸು ದಾಖಲಿಸಿತ್ತು. ಈಗಿನ ಶೋಧ ಕಾರ್ಯದಲ್ಲಿಎನ್‌ಐಎ 16 ಡಿಜಿಟಲ್ ಸಾಧನಗಳು, 6 ಇತರ ಶಾಸ್ತ್ರಸ್ತ್ರಗಳು, ರಾಡ್‌ಗಳು, ಚಾಕುಗಳು, ಹಲವು ದಾಖಲೆಗಳು ಮತ್ತು ಕೈಬರಹದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಅಲ್‌ಖೈದಾ ಮತ್ತು ಐಸಿಸ್ ಬೆಂಬಲಿಗನಾದ ಅನ್ಸರುಲ್ಲಾ ಗುಂಪಿನ ಸಂಸ್ಥಾಪಕನ ಮೇಲೆ ಕೇಸು ದಾಖಲಿಸಿತ್ತು. ಸದ್ಯ ಈಗ ದಿವಾನ್ ಮುಜಿಪೀರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 120B (ಕ್ರಿಮಿನಲ್ ಪಿತೂರಿ) ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (UAPA) ನಿಬಂಧನೆಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಇದೇ ಪ್ರಕರಣದಲ್ಲಿ ಪ್ರಕರಣದಲ್ಲಿ ಮುಜಿಪೀರ್ 12ನೇ ಆರೋಪಿಯಾಗಿದ್ದಾನೆ.












Click it and Unblock the Notifications