'ಕರ್ನಾಟಕದ ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧ ಕಾಯ್ದೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್''

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದ ಆನ್‌ಲೈನ್ ಗೇಮಿಂಗ್ ನಿಷೇಧಿಸುವ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆನ್‌ಲೈನ್ ಗೇಮಿಂಗ್ ತಡೆಯುವ ನಮ್ಮ ಉದ್ದೇಶಕ್ಕೆ ಜಯ ಸಿಕ್ಕಂತಾಗಿದೆ. ಸುಪ್ರೀಂ ಕೊರ್ಟ್‌ನ ಈ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಬುಧವಾರ (ಮೇ 27) ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ವಿಭಾಗೀಯ ನ್ಯಾಯಪೀಠ ನನ್ನ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಆನ್‌ಲೈನ್ ಗ್ಯಾಂಬ್ಲಿಂಗ್ ವಿರುದ್ಧ ತಂದಿರುವ ಕಾನೂನನ್ನು ಎತ್ತಿ ಹಿಡಿದಿದೆ.

Supreme Court

ಕರ್ನಾಟಕ ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಇದ್ದಾಗ ಕರ್ನಾಟಕ ಪೊಲಿಸ್ ಅಮೆಂಡ್‌ಮೆಂಟ್ ಆಕ್ಟ್ 2021 ಜಾರಿ ತಂದಿದ್ದೆವು. ಅದರಲ್ಲಿ ಕನಾಟಕ ಪೊಲಿಸ್ ಆಕ್ಟ್ 1963ಗೆ ಹಲವಾರು ಬದಲಾವಣೆ ತಂದು ಗ್ಯಾಂಬ್ಲಿಂಗ್ ವ್ಯಾಖ್ಯಾನ ವಿಸ್ತರಣೆ ಮಾಡಿ ಆನ್‌ಲೈನ್‌ ಗೇಮಿಂಗ್‌ನ್ನು ಜಾಮೀನು ರಹಿತ ಅಪರಾಧ ಅಂತ ಕಾನೂನು ತಿದ್ದುಪಡಿ ತಂದು ಆನ್‌ಲೈನ್‌ಗೆ ಸಂಪೂರ್ಣ ಕಡಿವಾಣ ಹಾಕಲು ಕಾನೂನು ಜಾರಿಗೊಳಿಸಲಾಗಿತ್ತು.

Bakrid: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ: ತಮಿಳುನಾಡಿನಲ್ಲಿ ಗೋಹತ್ಯೆಗೆ ನಿಷೇಧಕ್ಕೆ ಸೂಚನೆ
Bakrid: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ: ತಮಿಳುನಾಡಿನಲ್ಲಿ ಗೋಹತ್ಯೆಗೆ ನಿಷೇಧಕ್ಕೆ ಸೂಚನೆ

ಹೈಕೋರ್ಟ್ ತಡೆ ವಿರುದ್ಧ ಮೇಲ್ಮನವಿ

ಅದಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಅದರ ವಿರುದ್ಧ ನಾವು ಸುಪ್ರೀಂ ಕೊರ್ಟ್‌ಗೆ ಹೋಗಿದ್ದೇವು. ಈಗ ಸುಪೀಂ ಕೋರ್ಟ್ ನಮ್ಮ ಕಾನೂನು ಮತ್ತು ತಮಿಳುನಾಡಿನ ಕಾನೂನು ಎತ್ತಿ ಹಿಡಿಯುವ ಮೂಲಕ ಆನ್‌ಲೈನ್ ಗೇಮಿನಿಂದ ಹಲವಾರು ಜನರು ಮತ್ತು ಬಡವರು ಆರ್ಥಿಕವಾಗಿ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶಕ್ಕೆ ಜಯಸಿಕ್ಕಿದೆ ಎಂದು ಅವರು ವಿವರಿಸಿದರು.

ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಈಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಆನ್‌ಲೈನ್ ಗೆಮಿಂಗ್ ತಡೆಗಟ್ಟಿ ಹಲವಾರು ಸಂಸಾರಗಳು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಅವರು ಈ ವೇಳೆ ಆಗ್ರಹಿಸಿದರು.

ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ಬಕ್ರೀದ್ ಹಬ್ಬದ ಒಂದು ದಿನಕ್ಕೂ ಮುನ್ನ ತಮಿಳುನಾಡು ರಾಜ್ಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ರಾಜ್ಯದಲ್ಲಿ ಗೋವುಗಳ ವಧೆ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಆದೇಶ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದೆ. ಜೊತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಾನೂನು ಜಾರಿಯ ಹೊಣೆ ಹೊರಿಸಿ ಬುಧವಾರ ಆದೇಶ ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+