ಐಪಿಎಲ್‌ನಲ್ಲಿ ಪ್ರಚಂಡ ಪುಟಾಣಿ ವೈಭವ್ ಸೂರ್ಯವಂಶಿ ಮಾಡಿದ ಐತಿಹಾಸಿಕ ದಾಖಲೆಗಳು

Vaibhav Sooryavanshi Records: ಮುಲ್ಲನ್‌ಪುರ್‌ನಲ್ಲಿ ಬುಧವಾರ (ಮೇ 27) ನಡೆದ ಐಪಿಎಲ್‌ 2026ರ ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್ ಭರ್ಜರಿ ಜಯ ದಾಖಲಿಸಿ ಕ್ವಾಲಿಫೈರ್ 2 ಹಂತಕ್ಕೆ ಪ್ರವೇಶಿಸಿತು. ಆರ್‌ಆರ್ ಗೆಲುವಿಗೆ ಪ್ರಮುಖ ಕಾರಣನಾದ 15 ವರ್ಷದ ಯುವ ಪ್ರತಿಭೆ ಹಾಗೂ ಯೂನಿವರ್ಸಲ್ ಬೇಬಿ ಬಾಸ್ ಎಂದೇ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬುಧವಾರ ಮುಲ್ಲನ್‌ಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳ ನೆರವಿನಿಂದ 97 ರನ್ ಗಳಿಸಿದರು. ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಈ ಸ್ಫೋಟಕ ಇನ್ನಿಂಗ್ಸ್ ಮೂಲಕ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಈ 15 ವರ್ಷದ ಬಾಲಕ ಅಳಿಸಿಹಾಕಿದ್ದಾರೆ. ಈ ಸಾಧನೆಯ ಮೂಲಕ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.

Vaibhav Sooryavanshi Rajasthan Royals 15-Year-Old Historic IPL Major Records Know Complete detail

ಹಲವು ದಾಖಲೆ ಮಾಡಿದ ವೈಭವ್

2012ರ ಐಪಿಎಲ್ ಸೀಸನ್‌ನಲ್ಲಿ ಕ್ರಿಸ್ ಗೇಲ್ ಒಟ್ಟು 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಕಳೆದ 14 ವರ್ಷಗಳಿಂದ ಈ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ 2026ರ ಐಪಿಎಲ್ ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ ಒಟ್ಟು 65 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗೇಲ್ ಅವರ ಈ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ವೈಭವರ್ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ರಿಷಭ್ ಪಂತ್ ದಾಖಲೆ ಉಡೀಸ್

ಒಂದು ಐಪಿಎಲ್ ಸೀಸನ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು 2018 ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಒಂದೇ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಸಿಡಿಸಿದ 684 ದಾಖಲೆಯನ್ನೂ ಮುರಿಯುವ ಸನಿಹದಲ್ಲಿದ್ದಾರೆ.

ಐಪಿಎಲ್‌ನ ಒಂದೇ ಸೀಸಲ್‌ನಲ್ಲಿ ಹೆಚ್ಚು ಸಿಕ್ಸರ್‌ ಸಿಡಿಸಿದವರು

* ವೈಭವ್ ಸೂರ್ಯವಂಶಿ (2026): 65 ಸಿಕ್ಸ್‌

* ಕ್ರಿಸ್ ಗೇಲ್ (2012): 59 ಸಿಕ್ಸ್‌

* ಆಂಡ್ರೆ ರಸೆಲ್ (2019): 52 ಸಿಕ್ಸ್‌

* ಕ್ರಿಸ್ ಗೇಲ್ (2013): 51 ಸಿಕ್ಸ್‌

* ಜೋಸ್ ಬಟ್ಲರ್ (2022): 45 ಸಿಕ್ಸ್‌

ಐಪಿಎಲ್ ಪ್ಲೇ-ಆಫ್‌ನನಲ್ಲಿ ಅತಿ ವೇಗದ ಅರ್ಧಶತಕಗಳು

* ಸುರೇಶ್ ರೈನಾ (16 ಎಸೆತಗಳು) Vs ಪಂಜಾಬ್ ಕಿಂಗ್ಸ್, ವಾಂಖೆಡೆ ಕ್ರೀಡಾಂಗಣ, 2014

* ವೈಭವ್ ಸೂರ್ಯವಂಶಿ (16 ಎಸೆತಗಳು) Vs ಎಸ್‌ಆರ್‌ಎಚ್, ಮುಲ್ಲನ್‌ಪುರ, 2026*

* ಆಡಮ್ ಗಿಲ್‌ಕ್ರಿಸ್ಟ್ (17 ಎಸೆತಗಳು) Vs ಡಿಸಿ, ಸೆಂಚೂರಿಯನ್, 2009

* ಎಂ.ಎಸ್. ಧೋನಿ (20 ಎಸೆತಗಳು) Vs ಮುಂಬೈ ಇಂಡಿಯನ್ಸ್, ಬೆಂಗಳೂರು, 2012.

20ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕಗಳು

* ಅಭಿಷೇಕ್ ಶರ್ಮಾ: 6 ಬಾರಿ (ಸನ್‌ರೈಸರ್ಸ್ ಹೈದರಾಬಾದ್)

* ನಿಕೋಲಸ್ ಪೂರನ್: 5 ಬಾರಿ (ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಎಸ್‌ಆರ್‌ಎಚ್)

* ವೈಭವ್ ಸೂರ್ಯವಂಶಿ: 5 ಬಾರಿ (ರಾಜಸ್ಥಾನ್ ರಾಯಲ್ಸ್)

* ಟ್ರಾವಿಸ್ ಹೆಡ್: 3 ಬಾರಿ (ಸನ್‌ರೈಸರ್ಸ್ ಹೈದರಾಬಾದ್)

* ಜೇಕ್ ಫ್ರೇಸರ್-ಮೆಕ್‌ಗುರ್ಕ್: 3 ಬಾರಿ (ಡೆಲ್ಲಿ ಕ್ಯಾಪಿಟಲ್ಸ್)

ಒಂದೇ ಇನ್ನಿಂಗ್ಸ್‌ನಲ್ಲಿ 10 ಅಥವಾ ಅದಕ್ಕಿಂತ ಸಿಕ್ಸರ್ ಸಿಡಿಸಿದವರು

* ಕ್ರಿಸ್ ಗೇಲ್: 4 ಬಾರಿ

* ವೈಭವ್ ಸೂರ್ಯವಂಶಿ: 4 ಬಾರಿ

* ಅಭಿಷೇಕ್ ಶರ್ಮಾ: 2 ಬಾರಿ

* ಫಿನ್ ಅಲೆನ್: 2 ಬಾರಿ

ಒಂದು ಸೀಸನ್‌ನಲ್ಲಿ ಅನ್‌ಕ್ಯಾಪ್ಡ್ ಬ್ಯಾಟರ್‌ಗಳ ಗರಿಷ್ಠ ರನ್

* ವೈಭವ್ ಸೂರ್ಯವಂಶಿ - 680 ರನ್ (ರಾಜಸ್ಥಾನ್ ರಾಯಲ್ಸ್, 2026)

* ಯಶಸ್ವಿ ಜೈಸ್ವಾಲ್ - 625 ರನ್ (ರಾಜಸ್ಥಾನ್ ರಾಯಲ್ಸ್, 2023)

* ಶಾನ್ ಮಾರ್ಷ್ - 616 ರನ್ (ಪಂಜಾಬ್ ಕಿಂಗ್ಸ್, 2008)

* ರಿಯಾನ್ ಪರಾಗ್ - 573 ರನ್ (ರಾಜಸ್ಥಾನ್ ರಾಯಲ್ಸ್, 2024)

* ಪ್ರಭ್‌ಸಿಮ್ರಾನ್ ಸಿಂಗ್ - 549 ರನ್ (ಪಂಜಾಬ್ ಕಿಂಗ್ಸ್, 2025)

ಪವರ್‌ಪ್ಲೇನಲ್ಲಿ ಅತಿ ಹೆಚ್ಚು 50+ ರನ್‌ ಗಳಿಸಿದವರು

* ಡೇವಿಡ್ ವಾರ್ನರ್: 6 ಬಾರಿ

* ವೈಭವ್ ಸೂರ್ಯವಂಶಿ: 5 ಬಾರಿ

* ಟ್ರಾವಿಸ್ ಹೆಡ್: 4 ಬಾರಿ

ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನ ಬಾರಿಸಿದವರು

* ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ: 8 ಸಿಕ್ಸ್‌ Vs ಎಸ್‌ಆರ್‌ಎಚ್‌, ಜೈಪುರ, 2026ರ ಎಲಿಮಿನೇಟರ್ ಪಂದ್ಯ

* ಮುಂಬೈ ಇಂಡಿಯನ್ಸ್ ಪರ ಸನತ್ ಜಯಸೂರ್ಯ: 7 ಸಿಕ್ಸ್‌ Vs ಸಿಎಸ್‌ಕೆ, ಮುಂಬೈ ವಾಂಖೆಡೆ, 2008

* ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್: 7 ಸಿಕ್ಸ್‌ Vs ಡಿಸಿ, ದೆಹಲಿ, 2018

* ಪಂಜಾಬ್ ಕಿಂಗ್ಸ್ ಪರ ಜಾನಿ ಬ್ಯಾರಿಸ್ಟ್ರೋ: 7 ಸಿಕ್ಸರ್: Vs ಆರ್‌ಸಿಬಿ, ಬ್ರಬೋರ್ನ್, 2022

* ಎಸ್‌ಆರ್‌ಎಚ್‌ ಪರ ಅಭಿಷೇಕ್ ಶರ್ಮಾ: 7 ಸಿಕ್ಸ್‌ Vs ಪಂಜಾಬ್ ಕಿಂಗ್ಸ್‌, ಮುಲ್ಲನ್‌ಪುರ್‌, 2026

* ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ: 7 ಸಿಕ್ಸ್‌ Vs ಎಸ್‌ಆರ್‌ಎಚ್‌, ಜೈಪುರ, 2026

ಒಟ್ಟಿನಲ್ಲಿ ಹೇಳುವುದಾದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾ ಇಡೀ ಕ್ರಿಕೆಟ್ ಲೋಕವನ್ನೇ ತನ್ನತ್ತ ತಿರುಗುವಂತೆ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜರು ಸಹ ಈ ಬಾಲಕನ ಆಟ ನೋಡಿ ನಿಬ್ಬೆರಗಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+