Vaibhav Sooryavanshi: 6, 6, 6, 6, 6, 6..60* ಕ್ರಿಸ್ ಗೇಲ್ ದಾಖಲೆ ಮುರಿದ 15 ವರ್ಷದ ವೈಭವ್ ಸೂರ್ಯವಂಶಿ

Vaibhav Sooryavanshi: ಮುಲ್ಲನ್‌ಪುರ್‌ನಲ್ಲಿ ಬುಧವಾರ (ಮೇ 27) ನಡೆಯತ್ತಿರುವ ಐಪಿಎಲ್‌ 2026ರ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿಯಾಗಿವೆ. ಟಾಸ್‌ ಸೋತ ಆರ್‌ಆರ್ ಪರ ಆರಂಭಿಕರಾಗಿ ಕಣಕ್ಕಿಳಿದ 15 ವರ್ಷದ ವೈಭವ್ ಸೂರ್ಯವಂಶಿ ಹೊಡಿಬಡಿ ಆಟ ಆಡಿ ಕೇವಲ 29 ಎಸೆತಗಳಲ್ಲಿ 97 ರನ್‌ಗಳನ್ನು ಕಲೆಹಾಕಿದರು. ಇದೇ ಪಂದ್ಯದಲ್ಲಿ ವಂಡರ್ ಕಿಡ್‌ ಯುನಿವರ್ಸಲ್ ಬಾಸ್ ಎನಿಸಿಕೊಂಡಿರುವ ಕ್ರಿಸ್ ಗೇಲ್ ದಾಖಲೆಯನ್ನು ಮುರಿದು ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾರೆ.

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಐಪಿಎಲ್ ಇತಿಹಾಸದಲ್ಲಿ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಅವರ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 2012ರಲ್ಲಿ ಕ್ರಿಸ್ ಗೇಲ್ 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದುವರೆಗೂ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. ಇದೀಗ ವೈಭವ್ ಸೂರ್ಯವಂಶಿ ಈ ಈ ದಾಖಲೆ ಮುರಿದಿದ್ದಾರೆ.

Vaibhav Sooryavanshi Breaks Chris Gayle s IPL Sixes Record With 97 Blitz Against SRH Know details

ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 27ರಂದು ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ವೈಭವ್ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ವೈಭವ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿಗಳು, 12 ಸಿಕ್ಸರ್‌ಗಳ ಸಹಿತ 97 ರನ್ ಬಾರಿಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಗಮನ ಸೆಳೆದರು. ಈ ಪಂದ್ಯದ ನಂತರ ವೈಭವ್ ಅವರ 2026ರ ಸೀಸನ್‌ನ ಒಟ್ಟು ಸಿಕ್ಸರ್‌ಗಳ ಸಂಖ್ಯೆ 65 ಕ್ಕೆ ಏರಿದ್ದು, ಕ್ರಿಸ್‌ ಗೇಲ್‌ (59 ಸಿಕ್ಸ್‌) ದಾಖಲೆ ಮುರಿದರು.

600ಕ್ಕೂ ಹೆಚ್ಚು ರನ್ ಗಳಿಸಿದ ವಂಡರ್ ಕಿಡ್

ಒಂದು ಐಪಿಎಲ್ ಸೀಸನ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ರಿಷಬ್ ಪಂತ್ ದಾಖಲೆ ಮುರಿದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ರನ್ ಮತ್ತು 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಹೈದರಾಬಾದ್ ಬೌಲರ್‌ಗಳನ್ನು ಕಂಗೆಡಿಸಿದಂತೂ ನಿಜ.

ಒಂದೇ ಸೀಸನ್‌ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದವರು

* ವೈಭವ್ ಸೂರ್ಯವಂಶಿ (2026): 65 ಸಿಕ್ಸ್‌
* ಕ್ರಿಸ್ ಗೇಲ್ (2012): 59 ಸಿಕ್ಸ್‌
* ಆಂಡ್ರೆ ರಸೆಲ್ (2019): 52 ಸಿಕ್ಸ್‌
* ಕ್ರಿಸ್ ಗೇಲ್ (2013): 51 ಸಿಕ್ಸ್‌

ಒಂದು ದಾಖಲೆ ಮಿಸ್‌ ಮಾಡಿಕೊಂಡ ವೈಭವ್

ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರು ಪುಣೆ ವಾರಿಯರ್ಸ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ ಸಾರ್ವಕಾಲಿಕ ದಾಖಲೆ ಹೊಂದಿದ್ದಾರೆ. ವೈಭವ್ ಸೂರ್ಯವಂಶಿ ಅವರು ಕೇವಲ ಒಂದು ಎಸೆತದ ಅಂತರದಲ್ಲಿ ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು. ಒಂದು ವೇಳೆ ಅವರು ಶತಕ ಪೂರೈಸಿದ್ದರೆ, ಗೇಲ್ ಅವರ 30 ಎಸೆತಗಳ ಶತಕದ ದಾಖಲೆಯೂ ಪತನವಾಗುತ್ತಿತ್ತು. ವಿಕೆಟ್‌ ಒಪ್ಪಿಸುತ್ತಿದ್ದಂತೆ ವೈಭವ್ ಅವರು ಈ ದಾಖಲೆಯನ್ನ ಮುರಿಯುಲಿಲ್ಲವಲ್ಲ ಎಂದು ಬೇಸರಗೊಂಡು ಪೆವಿಲಿಯನ್ ಕಡೆ ನಡೆದರು. ಆದರೂ ಅವರ ಅದ್ಭುತ ಪ್ರದರ್ಶನಕ್ಕೆ ಎಸ್‌ಆರ್‌ಎಚ್‌ ಹಾಗೂ ತಮ್ಮ ಆರ್‌ರ್‌ ಎರಡೂ ತಂಡಗಳ ಕಡೆಯವರು ಚಪ್ಪಾಳೆ ತಟ್ಟಿ ಗಮನ ಸೆಳೆದರು.

ಒಟ್ಟಿನಲ್ಲಿ ಬಿಹಾರ ಮೂಲದ ಈ 15 ವರ್ಷದ ವಂಡರ್ ಕಿಡ್‌ ಕೇವಲ ಸಿಕ್ಸರ್‌ಗಳ ದಾಖಲೆ ಮಾತ್ರವಲ್ಲದೆ, ಗೇಲ್ ಅವರ ಅತ್ಯಂತ ವೇಗದ ಶತಕದ ದಾಖಲೆಗೂ ನಡುಕ ಹುಟ್ಟಿಸಿ ಈಗ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲ ಸೃಷ್ಟಿಸಿದ್ದಾರೆ. ಎದುರಾಳಿ ಬೌಲರ್ ಯಾರೇ ಆಗಿರಲಿ ನನ್ನ ಗುರಿ ಮಾತ್ರ ಸಿಕ್ಸರ್, ಬೌಂಡರಿಗಳನ್ನ ಅಟ್ಟುವುದು ಅಷ್ಟೇ ಎನ್ನುವ ರೀತಿಯಲ್ಲಿ ಆಕ್ರಮಣಕಾರಿ ಆಟ ಮಾಡುತ್ತಿದ್ದಾರೆ. ಅಲ್ಲದೆ ವಯಸು ಚಿಕ್ಕದಿರಬಹುದು, ಆದರೆ ನನ್ನ ಕನಸು ಮಾತ್ರ ದೊಡ್ಡದಿದೆ ಎನ್ನುವ ಮಾತನ್ನ ನಿಜ ಮಾಡುತ್ತಲೇ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+