Vendor Samosa Tray Video: ರೈಲಿನಲ್ಲಿ ಸಮೋಸಾ ಟ್ರೇನಲ್ಲಿ ಕಾಲಿಟ್ಟ ಮಾರಾಟಗಾರ, ನೆಟ್ಟಿಗರ ಆಕ್ರೋಶ

Indian Railway Hygiene: ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ಮಾರಾಟ ಮಾಡಬೇಕಾದ ಸಮೋಸಾಗಳು ಅನಧಿಕೃತ ಮಾರಾಟಗಾರನ ಕಾಲ ಕೆಳಗೆ ಕಂಡು ಬಂದಿದ್ದು ನೋಡಿ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಮಾರಾಟಗಾರ ಸಮೋಸಾ ಟ್ರೇನಲ್ಲಿ ಕಾಲಿಟ್ಟು ಕುಳಿತುಕೊಂಡಿರುವುದು ಕಾಣಿಸುತ್ತದೆ. ಇದು ರೈಲ್ವೆ ಇಲಾಖೆಯ ನೈರ್ಮಲ್ಯದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾರತೀಯ ರೈಲ್ವೆಯು ದಕ್ಷತೆ, ವೇಗದ ಸೇವೆ ಹಾಗೂ ಹೊಸ ರೈಲುಗಳ ಕಾರ್ಯಾಚರಣೆ, ನೂತನ ಮಾರ್ಗಗ ಹೀಗೆ ಹಲುವು ಯೋಜನೆಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಲಾಖೆಯು ಪ್ರಯಾಣಿಕ ಸ್ನೇಹಿ ಪ್ರಯೋಜನಗಳನ್ನು ಒದಗಿಸುತ್ತಿದೆ. ಇದರ ನಡುವೆ ಇಂಥಹ ಘಟನೆಗಳು ರೈಲುಗಳ ಶುಚಿತ್ವದ ಮೇಲೆ ಅನುಮಾನ ಉಂಟಾಗುವಂತೆ ಮಾಡುತ್ತಿವೆ.

India Railway

ಟೀ, ಕಾಫಿಗೆ ಶೌಚಾಲಯದ ನೀರು ಬಳಕೆಯಂತಹ ಘಟನೆಗಳ ವಿಡಿಯೋ ನೋಡಿರುತ್ತೇವೆ. ಇಲ್ಲೊಂದು ಘಟನೆಯಲ್ಲಿ ರೈಲ್ವೆ ಇಲಾಖೆ ನೇಮಿಸದ ವ್ಯಕ್ತಿಯೊಬ್ಬ (ಆಹಾರ ಮಾರಾಟಗಾರ) ಟ್ರೇನಲ್ಲಿ ಸಮೋಸಾ ಇಟ್ಟುಕೊಂಡು ರೈಲಿನಲ್ಲಿ ಮಾರಾಟಕ್ಕೆ ಬಂದಿದ್ದಾನೆ. ಈ ವೇಳೆ ಆತ ರೈಲಿನ ಬೋಗಿಯ ಬಾಗಿಲ ಬಳಿ ಕುಳಿತಾಗ, ಆತ ಚಪ್ಪಲಿ ಬಿಟ್ಟು ಸಮೋಸಾ ಇರುವ ಟ್ರೇನಲ್ಲಿ ಕಾಲಿಟ್ಟು ಕುಳಿತುಕೊಂಡ ದೃಶ್ಯಗಳು ವೈರಲ್ ಆಗಿವೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಬೆಂಗಳೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ರೈಲು ನಿಲುಗಡೆ 6 ತಿಂಗಳು ವಿಸ್ತರಣೆ, ಪಟ್ಟಿ ಇಲ್ಲಿದೆ
ಬೆಂಗಳೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ರೈಲು ನಿಲುಗಡೆ 6 ತಿಂಗಳು ವಿಸ್ತರಣೆ, ಪಟ್ಟಿ ಇಲ್ಲಿದೆ

ಅಸಲಿಗೆ ಈ ಸಮೋಸಾಗಳನ್ನು ರೈಲು ಪ್ರಯಾಣಿಕರಿಗೆ ಮಾರಾಟ ಮಾಡಲು ತಂದಿದ್ದು, ಅದರ ಮೇಲೆ ಪಾದ ಇಟ್ಟು ಮಾರಾಟ ಕುಳಿತುಕೊಂಡಿದ್ದಾನೆ. ಜನರು ರೈಲುಗಳ ನೈರ್ಮಲ್ಯ, ರೈಲ್ವೆ ಮಾನದಂಡಗಳು, ಆಹಾರ ಶುಚಿತ್ವ ಕುರಿತು ಪ್ರಶ್ನಿಸುತ್ತಿದ್ದಾರೆ. ಆಹಾರದ ವಿಚಾರದಲ್ಲಿ ಸ್ಪಷ್ಟ ಲೋಪಗಳು ಉಂಟಾಗಿರುವುದು ಗೊತ್ತಾಗುತ್ತದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆನ್‌ಲೈನ್ ದೂರು ಪರಿಗಣಿಸಿರುವ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.

ನಮ್ಮ ಸಿಬ್ಬಂದಿ ನಿಯೋಜಿಸಿರಲಿಲ್ಲ: ರೈಲ್ವೆ ಸ್ಪಷ್ಟನೆ

ಇಂಡಿಯಾ ಟುಡೆ ವರದಿ ಬಳಿಕ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಮೇ 20ರಿಂದ ಮೇ 22ರವರೆಗೆ ಈ ಅವಧಿಯಲ್ಲಿ ರೈಲಿನಲ್ಲಿ ಯಾವುದೇ ಅಧಿಕೃತ ಸಿಬ್ಬಂದಿಯು ಆಹಾರ ವಿತರಣೆಗೆ ನಿಯೋಜಿಸಲಾಗಿಲ್ಲ ಎಂದು ಹೇಳಿದ್ದಾರೆ. ವೈರಲ್ ವಿಡಿಯೋದಲ್ಲಿ ಕಂಡು ಬಂದ ಈ ವ್ಯಕ್ತಿ ಅನಧಿಕೃತ ಮಾರಾಟಗಾರ ಎಂದು ತನ್ನ ಹೇಳಿಯಲ್ಲಿ ರೈಲ್ವೆ ತಿಳಿಸಿದೆ.

RRB Recruitment: ಎನ್‌ಟಿಪಿ ಹುದ್ದೆಗಳ ಸಿಬಿಟಿ-2 ಪರೀಕ್ಷೆ ಫಲಿತಾಂಶ ಪ್ರಕಟ, ಅಂಕಪಟ್ಟಿ ಡೌನ್‌ಲೋಡ್ ಹೇಗೆ?
RRB Recruitment: ಎನ್‌ಟಿಪಿ ಹುದ್ದೆಗಳ ಸಿಬಿಟಿ-2 ಪರೀಕ್ಷೆ ಫಲಿತಾಂಶ ಪ್ರಕಟ, ಅಂಕಪಟ್ಟಿ ಡೌನ್‌ಲೋಡ್ ಹೇಗೆ?

ರೈಲಿನಲ್ಲಿ ಇಂಥಹ ಘಟನೆಗಳು ಸಾಮಾನ್ಯವೇ?

ಈ ಹಿಂದೆ ಸ್ವತಃ ರೈಲ್ವೆ ಸಿಬ್ಬಂದಿ ಚಲಿಸುವ ರೈಲಿನ ಒಳಗೆ ಡಸ್ಟ್‌ಬಿನ್ ನಲ್ಲಿದ್ದ ಕಸವನ್ನು ಟ್ರ್ಯಾಕ್‌ ಮೇಲೆ ಎಸೆಯುವ ಮೂಲಕ ನೈರ್ಮಲ್ಯ ಮತ್ತು ಪರಿಸರ ವಿರೋಧಿ ನಡೆ ಪ್ರದರ್ಶಿಸಿದ್ದರು. ಆತನನ್ನು ಇಲಾಖೆ ಮೇಲಾಧಿಕಾರಿಗಳು ಅಮಾನತು ಮಾಡಿ ಆದೇಶಿಸಿದ್ದರು. ಇತ್ತೀಚೆಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಪೊಟ್ಟಣ ಮಾರಾಟ ಮಾಡಿದ್ದ ರೈಲ್ವೆ ಅಧಿಕೃತ ಸಿಬ್ಬಂದಿಗೆ ಬಿಲ್ ಪ್ರಯಾಣಿಕ ಕೇಳಿದ್ದಕ್ಕೆ ತಡವರಿಸಿದ್ದ. ಬಳಿಕ ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ ಮೇಲೆ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿದ್ದ. ದೂರು ನೀಡದಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ ಘಟನೆ ನಡೆದಿತ್ತು. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ಭವಿಷ್ಯದಲ್ಲಿ ಒಂದಷ್ಟು ಉಪಕ್ರಮಗಳನ್ನು ಜಾರಿಗೆ ತರಬೇಕಿದೆ ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+