ಹೋಂ ಮಿನಿಸ್ಟರ್ ಎಲ್ಲ ಬಿಟ್ಟು RSS ಹಿಂದೆ ಬಿದ್ದಿದ್ಯಾಕೆ: ಪ್ರಿಯಾಂಕ್ ಖರ್ಗೆಗೆ ಚೇತನ್ ಅಹಿಂಸಾ ಪ್ರಶ್ನೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಆಸ್ತಿ ಮತ್ತು ಕಾನೂನಾತ್ಮಕ ಸ್ಥಾನಮಾನವನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಚಿವರ ಈ ನಡೆಗೆ ರಾಜಕೀಯ ವಲಯದ ಹೊರತಾಗಿಯೂ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಖರ್ಗೆ ಅವರ ನಡೆಯನ್ನು ಟೀಕಿಸಿದ್ದಾರೆ. ಸರ್ಕಾರದ ಈ ಕ್ರಮವು ರಾಜಕೀಯ ದ್ವೇಷದ ಪರಮಾವಧಿ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ ಎಂದು ಕರೆದಿದ್ದಾರೆ.

ಪ್ರಿಯಾಂಕ್ ಖರ್ಗೆ ಪತ್ರದಲ್ಲೇನಿದೆ?

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಅಧಿಕೃತ ಪತ್ರ ಬರೆದಿದ್ದು, ಅದರಲ್ಲಿ ಸಂಘಟನೆಯ ಕಾರ್ಯವೈಖರಿಯ ಬಗ್ಗೆ ಹಲವು ಕಾನೂನಾತ್ಮಕ ಪ್ರಶ್ನೆಗಳನ್ನು ಎತ್ತಿದ್ದಾರೆ. "ದೇಶ ಮತ್ತು ರಾಜ್ಯದಲ್ಲಿ ಇಷ್ಟೊಂದು ಬೃಹತ್ ಮಟ್ಟದಲ್ಲಿ ನೆಟ್‌ವರ್ಕ್ ಹೊಂದಿರುವ ಆರ್‌ಎಸ್‌ಎಸ್, ಯಾವ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನೋಂದಣಿಯಾಗಿದೆ? ಸಂಘಟನೆಗೆ ಹರಿದುಬರುತ್ತಿರುವ ಆದಾಯದ ಮೂಲಗಳೇನು? ಮತ್ತು ಅದಕ್ಕೆ ಸಿಗುತ್ತಿರುವ ನಿಧಿಯ ವಿವರಗಳೇನು?" ಎಂದು ಪತ್ರದಲ್ಲಿ ಕೇಳಿದ್ದಾರೆ. ಯಾವುದೇ ಅಧಿಕೃತ ನೋಂದಣಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಾಚರಣೆ ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದ್ದಾರೆ.

Chetan Ahimsa

ಚುನಾವಣಾ ಭಯದಿಂದ ಬಾಯಿ ಮುಚ್ಚಿಸುವ ಯತ್ನ

ಸಚಿವರ ಈ ಪತ್ರದ ಬೆನ್ನಲ್ಲೇ ನಟ ಚೇತನ್ ಅಹಿಂಸಾ, ಕಾಂಗ್ರೆಸ್ ಸರ್ಕಾರದ ಉದ್ದೇಶವನ್ನು ಮುಕ್ತವಾಗಿ ಪ್ರಶ್ನಿಸಿದ್ದಾರೆ. "ಮೊದಲಿಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಇವರು ಆರ್‌ಎಸ್‌ಎಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಹೊರಟಿದ್ದಾರೋ ಅಥವಾ ಕೇವಲ ಅದನ್ನು ನೋಂದಣಿ ಮಾಡಿಸಲು ಒತ್ತಾಯಿಸುತ್ತಿದ್ದಾರೋ? ಕೇವಲ ಒಂದು ನಿರ್ದಿಷ್ಟ ಸಂಘಟನೆಯನ್ನು ಆಯ್ದುಕೊಂಡು, ಅದನ್ನೇ ಗುರಿಯಾಗಿಸಿ ದಾಳಿ ಮಾಡುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ.

"ಯಾರೇ ಆಗಲಿ, ಅವರು ಕಾನೂನನ್ನು ಕೈಗೆತ್ತಿಕೊಂಡರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಿ, ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ನಿಮ್ಮ ರಾಜಕೀಯ ಎದುರಾಳಿಗಳ ಸಿದ್ಧಾಂತವನ್ನು ಎದುರಿಸಲಾಗದೆ, ಚುನಾವಣೆಯಲ್ಲಿ ಅವರು ನಿಮ್ಮನ್ನು ಸೋಲಿಸಬಹುದು ಎಂಬ ಭೀತಿಯಿಂದ, ಅವರ ಬಾಯಿ ಮುಚ್ಚಿಸಲು ನೀವು ಅಧಿಕಾರ ಬಳಸಿ ನಿಷೇಧದಂತಹ ಹಾದಿ ಹಿಡಿದರೆ ಅದು ಖಂಡಿತವಾಗಿಯೂ ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಧೋರಣೆ ಆಗುತ್ತದೆ" ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ನ ಆಸ್ತಿ, ಆದಾಯದ ಮೂಲ ಬಹಿರಂಗಪಡಿಸಿ: ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಆರ್‌ಎಸ್‌ಎಸ್‌ನ ಆಸ್ತಿ, ಆದಾಯದ ಮೂಲ ಬಹಿರಂಗಪಡಿಸಿ: ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಪಿಎಫ್‌ಐ ನಿಷೇಧದ ಉದಾಹರಣೆ ನೀಡಿದ ನಟ

ಈ ಹಿಂದೆ ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಸಕ್ರಿಯವಾಗಿದ್ದ ಪಿಎಫ್‌ಐ (PFI) ಸಂಘಟನೆಯನ್ನು ನಿಷೇಧಿಸಿದ ಸಂದರ್ಭವನ್ನು ನೆನಪಿಸಿಕೊಂಡ ಚೇತನ್, "ಆಗಲೂ ಸಹ ಪಿಎಫ್‌ಐ ನಿಷೇಧಿಸುವುದನ್ನು ನಾನು ವಿರೋಧಿಸಿದ್ದೆ. ಆಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಆ ಕೆಲಸ ಮಾಡಿದ್ದವು. ಬಿಜೆಪಿ ತನ್ನ ಹಿಂದುತ್ವ ರಾಜಕಾರಣದ ಅಜೆಂಡಾಕ್ಕಾಗಿ ಅದನ್ನು ಮಾಡಿದರೆ, ಕಾಂಗ್ರೆಸ್ ಪಕ್ಷವು ತನ್ನ ಮುಸ್ಲಿಂ ಮತಗಳು ಚದುರಿ ಹೋಗಬಹುದು ಎಂಬ ಆತಂಕದಿಂದ ಆ ನಿರ್ಧಾರಕ್ಕೆ ಸಮ್ಮತಿ ಸೂಚಿಸಿತ್ತು" ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಚಾರದಲ್ಲಿ ಸೋಲಿಸಿ, ನಿಷೇಧ ಪರಿಹಾರವಲ್ಲ

ಯಾವುದೇ ಒಂದು ಸಿದ್ಧಾಂತ ಅಥವಾ ಸಂಘಟನೆಯನ್ನು ಕಾನೂನಾತ್ಮಕವಾಗಿ ನಿಷೇಧಿಸುವುದರಿಂದ ಅದನ್ನು ಸಮಾಜದಿಂದ ದೂರವಿಡಲು ಸಾಧ್ಯವಿಲ್ಲ ಎಂಬುದು ಚೇತನ್ ಅವರ ವಾದವಾಗಿದೆ. "ನಿಮ್ಮ ಸಿದ್ಧಾಂತದಲ್ಲಿ ಗಟ್ಟಿತನ ಇಲ್ಲದಿದ್ದಾಗ, ಎದುರಾಳಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ಮಾತ್ರ ಇಂತಹ ನಿಷೇಧದ ಅಸ್ತ್ರಗಳನ್ನು ಬಳಸಲಾಗುತ್ತದೆ. ಯಾವುದೇ ಸಂಘಟನೆಯನ್ನು ನಿಷೇಧಿಸುವ ಬದಲು, ಅವರ ಆಲೋಚನೆಗಳನ್ನು ನಿಮ್ಮ ಪ್ರಗತಿಪರ ವಿಚಾರಗಳ ಮೂಲಕ ಸಾರ್ವಜನಿಕವಾಗಿ ಸೋಲಿಸಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ" ಎಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+