ಉಗ್ರರ ಅಡಗುತಾಣವಾಗುತ್ತಿದೆಯಾ ಹುಬ್ಬಳ್ಳಿ-ಧಾರವಾಡ?: ಪೊಲೀಸರಿಂದ ತೀವ್ರ ಶೋಧ
ಧಾರವಾಡ, ಅಕ್ಟೋಬರ್ 04: ಧಾರವಾಡ ಜಿಲ್ಲೆ ಸಾಮಾನ್ಯವಾಗಿ ಅರೆಮಲೆನಾಡು ಪ್ರದೇಶ. ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಪ್ರದೇಶ. ಈ ಪ್ರದೇಶ ಇದೀಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.
ದೆಹಲಿ ಎನ್‌ಐಎ ತಂಡ ಇತ್ತೀಚಿಗಷ್ಟೇ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಮೂವರಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ಹುಬ್ಬಳ್ಳಿ, ಧಾರವಾಡದ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಇದೀಗ ಹುಬ್ಬಳ್ಳಿ, ಧಾರವಾಡದ ಜನತೆ ಭಯಭೀತರಾಗಿದ್ದಾರೆ.

ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರಾಗಿರಬಹುದು ಹಾಗೂ ಜಿಲ್ಲಾ ಪೊಲೀಸರಾಗಿರಬಹುದು ನಿರಂತರವಾಗಿ ದೆಹಲಿ ಪೊಲೀಸರ ಸಂಪರ್ಕದಲ್ಲಿದ್ದಾರೆ. ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆ ಬಗ್ಗೆ ಕುರುಹು ಸಹ ಪತ್ತೆಯಾಗಿಲ್ಲ.
ಹುಬ್ಬಳ್ಳಿ, ಧಾರವಾಡ ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಧಾರವಾಡದ ದಾಟುತ್ತಿದ್ದಂತೆ ಅನೇಕ ಕಾಡುಗಳಿದ್ದು, ಅಲ್ಲಿ ಉಗ್ರರ ಯಾವು ಕುರುಹು ಸಹ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ದೆಹಲಿಯಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ಹೇಳಿದ ಹೇಳಿಕೆಯ ಜಾಡು ಹಿಡಿದು ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

'ಈ ನಡುವೆ ಹುಬ್ಬಳ್ಳಿ ಧಾರವಾಡ ಜನತೆ ಆತಂಕಕ್ಕೀಡಾಗೀದ್ದು ಇದು ಕೇವಲ ವದಂತಿ ಅಥವಾ ಇದೇ ಮೊದಲು ಅಂತಾ ಅಲ್ಲ. ಈ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ ಹಾಗೂ ಧಾರವಾಡದಲ್ಲಿ ಶಂಕಿತ ಭಯೋತ್ಪಾದಕರರ ಜಾಡು ಇತ್ತು. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸುವುದು ಬೇಡ ಮತ್ತು ತುಷ್ಟೀಕರಣ ಸಹ ಬೇಡ. ಶಂಕಿತ ಉಗ್ರರ ಬಗ್ಗೆ ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದು ಇಂತಹ ಸಾಮಾಜಘಾತುಕ ಶಕ್ತಿಗಳ ಹುಟ್ಟಡಗಿಸ ಬೇಕು' ಎಂದು ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಮೇಶ್ ಕದಂ ಹಾಗೂ ವಿಶ್ವ ಹಿಂದು ಪರಿಷತ್ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಮೇಶ್ ಕದಂ ಹಾಗೂ ವಿಶ್ವ ಹಿಂದು ಪರಿಷತ್ ಮುಖಂಡರಾದ ಅವಿನಾಶ್ ಮುಂತಾದವರು ಒತ್ತಾಯ ಮಾಡಿದ್ದಾರೆ.












Click it and Unblock the Notifications