ಮಂಡ್ಯದಿಂದ ವಿಜಯಪುರದವರೆಗೆ ನಿಮ್ಮೂರಲ್ಲೊಂದು ಸುತ್ತಾಟ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 20: ಮಂಡ್ಯ ಜಿಲ್ಲೆಯ ಪೂರಿಗಾಲಿ ಏತ ನೀರಾವರಿ ಮತ್ತು ಹನಿ ನೀರಾವರಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರವೇರಿಸಿದರು. ಕಾವೇರಿ ನೀರಾವರಿ ನಿಗಮವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಲ್ಲಗಹಳ್ಳಿ ಬೋರೆ ಗ್ರಾಮದಲ್ಲಿ ಈ ಕಾರ್ಯಕ್ರಮನ್ನು ಆಯೋಜಿಸಿತ್ತು

CM Siddaramaiah inaugurates a programme in Mandya

ಮುಖ್ಯಮಂತ್ರಿಗಳ ಜೊತೆಯಲ್ಲಿ ಸಚಿವರುಗಳಾದ ಎಂ ಬಿ ಪಾಟೀಲ್, ಟಿ ಬಿ ಜಯಚಂದ್ರ, ಡಿ ಕೆ ಶಿವಕುಮಾರ್ ಮುಂತಾದವರು ಹಾಜರಿದ್ದರು.

ತಿಪಟೂರಿನಲ್ಲಿ ನಕಲಿ ವೈದ್ಯನಿದ್ದಾನೆ ಎಚ್ಚರ!

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಎಂಬಿಬಿಎಸ್ ಪದವಿಯನ್ನೇ ಪಡೆಯದೆ ಕ್ಲಿನಿಕ್ ತೆರೆದು ವೈದ್ಯವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯ ಶಂಕರಯ್ಯ ಎಂಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಘಸ್ವಾಮಿ ಹೇಳಿದ್ದಾರೆ.

ನಕಲಿ ವೈದ್ಯ ಶಂಕರಯ್ಯ ತನ್ನ ಬಳಿ ಬರುವ ರೋಗಿಗಳಿಗೆ ಮನಸ್ಸಿಗೆ ಕಂಡ ಮಾತ್ರೆ ನೀಡಿ, ಇಂಜೆಕ್ಷನ್ ಕೊಟ್ಟು ಕಳಿಸುತ್ತಿದ್ದ. ಈತನ ಬಳಿ ಬರುತ್ತಿದ್ದ ರೋಗಿಗಳ ರೋಗ ಕಡಿಮೆಯಾಗುವ ಬದಲು ಹೊಸ ರೋಗವೇ ಹುಟ್ಟಿಕೊಳ್ಳುತ್ತಿತ್ತು. ಈ ಬಗ್ಗೆ ಕನ್ನಡ ವಾಹಿನಿಯೊಂದು ಮಾಡಿದ ವರದಿಯನ್ವಯ ಜಿಲ್ಲಾ ಆರೋಗ್ಯಾಧಿಕಾರಿಗಳು ನಕವಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ಶಿವಮೊಗ್ಗದ ಮೇಳಿಗೆ ಗ್ರಾಮಕ್ಕೆ ರಾಷ್ಟ್ರೀಯ ಗೌರವ
ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ಕಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮಕ್ಕೆ ರಾಷ್ಟ್ರೀಯ ಗೌರವ ಗ್ರಾಮ ಪುರಸ್ಕಾರ ಪಡೆದಿದೆ. ಮಲೆನಾಡಿನ ಈ ಪುಟ್ಟ ಹಳ್ಳಿ ಈ ಗೌರವ ಪಡೆದು ಉಳಿದ ಹಳ್ಳಿಗಳಿಗೆ ಮಾದರಿಯಾಗಿದೆ.[ವಿಜಯಪುರ: ಆಸ್ತಿಗಾಗಿ ಪತ್ನಿ ಮೇಲೆ ಫೈರಿಂಗ್ ಮಾಡಿದ ಮಾಜಿ ಸೈನಿಕ]

Beware of fake doctor in Tiptur!

ವಿಜಯಪುರ: ಪತ್ನಿ ಸಾವಿನಿಂದ ನೊಂದ ಪತಿ ಆತ್ಮಹತ್ಯೆ
ಪತಿಯ ಕುಡಿತದ ಚಟದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡ ಪತ್ನಿ ಭೀಮವ್ವಳ ಸಾವಿನ ಸುದ್ದಿ ಕೇಳಿ, ಪತಿ ಜಗದೇವ್ (36) ಎಂಬುವವರು ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಹೊಳೆಸಂಕ ಎಂಬ ಗ್ರಾಮದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಭೀಮವ್ವ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದರು.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ]

ಉತ್ತರ ಕನ್ನಡ: ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು
ಗೇರು ಬೀಜ ಕಾರ್ಖಾನೆಗೆ ನಿರ್ಮಾಣಕ್ಕೆ ಎನ್ ಒಸಿ ನೀಡಲು 15,000 ಲಂಚ ಕೇಳಿದ ಉತ್ತರ ಕನ್ನಡ ಜಿಲ್ಲಾ ಪರಿಸರ ಅಧಿಕಾರಿ ಸುಗಂಧ ಕುರಿ, ಜಿಲ್ಲಾ ಪರಿಸರ ಸಹಾಯಕ ಅಧಿಕಾರಿ ಕುಮಾರಸ್ವಾಮಿ, ಕಚೇರಿ ಸಹಾಯಕ ಚಂದ್ರಕಾಂತ್ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಚೇರಿಯಲ್ಲಿ ಸಹಾಯಕನ ಮೂಲಕ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಅವರು ಎಸಿಬಿ ಬಲೆಗೆ ಬಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister of Karnataka Siddaramaiah has inaugurated a developmental programme in Mallagahalli Bore village, Malahalli taluk in Mandya district.
Please Wait while comments are loading...