ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ.ಜಿ.ಸಿದ್ಧಾರ್ಥ ಪತ್ರದ ಬಗ್ಗೆ ಸಿಸಿಡಿಯಿಂದ ತನಿಖೆ

|
Google Oneindia Kannada News

ಬೆಂಗಳೂರು, ಜುಲೈ 31 : ನಿಗೂಢವಾಗಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಉದ್ಯಮಿ ವಿ.ಜಿ.ಸಿದ್ದಾರ್ಥ ಪಂಚಭೂತಗಳಲ್ಲಿ ಲೀನವಾದರು. ವಿ.ಜಿ.ಸಿದ್ಧಾರ್ಥ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರದ ಬಗ್ಗೆ ತನಿಖೆ ನಡೆಯಲಿದೆ.

ಕೆಫೆ ಕಾಫಿ ಡೇ ಮಾಲೀಕ, ಕರ್ನಾಟಕದ ಶ್ರೀಮಂತ ಉದ್ಯಮಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಅಳಿಯ ವಿ.ಜಿ.ಸಿದ್ಧಾರ್ಥ ಸಾವು ನಿಗೂಢವಾಗಿಯೇ ಉಳಿದಿದೆ. ಕೆಫೆ ಕಾಫಿ ಡೇ ವಿ.ಜಿ.ಸಿದ್ಧಾರ್ಥ ಬರೆದಿರುವ ಪತ್ರದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.

ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ

ಬುಧವಾರ ಬೆಂಗಳೂರಿನಲ್ಲಿ ನಡೆದ ಕೆಫೆ ಕಾಫಿ ಡೇ ಆಡಳಿತ ಮಂಡಳಿ ಸಭೆಯಲ್ಲಿ ಪತ್ರದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ವಿ.ಜಿ.ಸಿದ್ಧಾರ್ಥ ಕಂಪನಿಯ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?

CCD To Probe On Letter Of VG Siddhartha

ಇಂದು ನಡೆದ ಸಭೆಯಲ್ಲಿ ಎಸ್. ವಿ.ರಂಗನಾಥ್‌ರನ್ನು ಹಂಗಾಮಿ ಅಧ್ಯಕ್ಷರನ್ನಾಗಿ, ನಿತಿನ್ ಬಾಗ್‌ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆಗಸ್ಟ್ 8ರಂದು ಆಡಳಿತ ಮಂಡಳಿಯ ಮುಂದಿನ ಸಭೆ ನಡೆಯಲಿದೆ.

ಸಿದ್ಧಾರ್ಥ ಮೇಲಿದ್ದ 9409 ಕೋಟಿ ಸಾಲದ ಪೂರ್ಣ ಅಂಕಿ-ಅಂಶಸಿದ್ಧಾರ್ಥ ಮೇಲಿದ್ದ 9409 ಕೋಟಿ ಸಾಲದ ಪೂರ್ಣ ಅಂಕಿ-ಅಂಶ

ಜುಲೈ 27ರಂದು ವಿ.ಜಿ.ಸಿದ್ಧಾರ್ಥ ಕಂಪನಿಯ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಎಲ್ಲಾ ಕಡೆ ವೈರಲ್ ಆಗಿದೆ. ಆದರೆ, ಈ ಪತ್ರದಲ್ಲಿರುವ ಸಹಿ ಸಿದ್ದಾರ್ಥ ಅವರದ್ದಲ್ಲ ಎಂಬ ಅನುಮಾನವೂ ಉಂಟಾಗಿದೆ. ಆದ್ದರಿಂದ, ಸಿಸಿಡಿ ತನಿಖೆಯನ್ನು ಕೈಗೊಳ್ಳಲಿದೆ.

"ನಾನು ವಿಫಲನಾದೆ, ಒಬ್ಬ ಗೆಳೆಯ, ಒಬ್ಬ ಮಾಜಿ ಐಟಿ ಅಧಿಕಾರಿ ನನಗೆ ಒತ್ತಡ ಹೇರುತ್ತಿದ್ದಾರೆ. ವ್ಯವಹಾರ ಸಾಧ್ಯವಾಗದ ಸ್ಥಿತಿ ತಲುಪಿದ್ದೇನೆ" ಎಂಬುದು ಪತ್ರದ ಪ್ರಮುಖ ಸಾರಾಂಶವಾಗಿದೆ. ಆದರೆ, ಐಟಿ ಇಲಾಖೆ ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿತ್ತು.

English summary
Cafe Coffee Day (CCD) decided to probe on a letter of V.G.Siddhartha that goes viral on social media. Founder & owner of the CCD V.G.Siddhartha found dead on July 31, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X