ಸಿದ್ದಾರ್ಥ ಹೆಗ್ಡೆ ಕನಸಿನ ಕಾಫಿ ಡೇ ಸಾಲ ತಗ್ಗಿಸಿದ ಗಟ್ಟಿಗಿತ್ತಿ ಮಾಳವಿಕಾ
ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ ದಿನದಿನಕ್ಕೆ ಕುಸಿಯುತ್ತಿದೆ, ಷೇರುಪೇಟೆಯಲ್ಲಿ ಕಾಫಿ ಡೇ ಷೇರುಗಳು ನೆಲಕಚ್ಚಿವೆ ಎಂಬ ಕಹಿ ಸುದ್ದಿ ನಡುವೆ, ಸಾಲದ ಹೊರೆ ತಗ್ಗಿರುವ ಸಿಹಿ ಸುದ್ದಿ ಬಂದಿದೆ.
ವಿಜಿ ಸಿದ್ಧಾರ್ಥ ಅವರು ಸ್ಥಾಪಿಸಿದ್ಧ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮತ್ತು ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕೋ ಲಿಮಿಟೆಡ್‌ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರಿಗೆ ಮಂಡಳಿಯು ಸಂಸ್ಥೆಯನ್ನು ನೋಡಿಕೊಳ್ಳುವ ಮಹತ್ವದ ಹುದ್ದೆಗೆ ನೇಮಿಸಿದ ಬಳಿಕ ಚಿತ್ರಣ ಬದಲಾಗಿದೆ.
2019ರ ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿತ್ತು. ಸಿದ್ದಾರ್ಥ ಅಗಲಿಕೆ ಬಳಿಕ ಕಂಪೆನಿಗೆ ಮರುಜೀವ ನೀಡುವ ಪ್ರಯತ್ನ ನಡೆಯುತ್ತಿದ್ದು, ಕಳೆದುಕೊಂಡಿರುವ ಮೌಲ್ಯವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಮುಖ ನೇಮಕಗಳನ್ನು ಮಾಡಲಾಗಿತ್ತು.

ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಕಾಫಿ ಡೇ ಸಂಸ್ಥೆ ಸಲ್ಲಿಸಿದ ವರದಿ ಪ್ರಕಾರ 1,810 ಕೋಟಿ ರು ತಲುಪಿದೆ. ಅಂದರೆ ಸುಮಾರು 7,214 ಕೋಟಿ ರು ಇದ್ದ ಸಾಲದ ಹೊರೆ ತಗ್ಗಿದ್ದು 5000 ಕೋಟಿ ರು ಸಾಲದ ಹೊರೆಯನ್ನು ಇಳಿಸುವಲ್ಲಿ ಮಾಳವಿಕಾ ಹಾಗೂ ತಂಡ ಯಶ ಕಂಡಿದೆ. ಈ ಕುರಿತಂತೆ ವಾಟ್ಸಾಪ್, ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದಾಡಿದ್ದು, ಯಥಾವತ್ತಾಗಿ ಈ ಕೆಳಗೆ ನೀಡಲಾಗಿದೆ.
ನೇತ್ರಾವತಿ ನದಿಗೆ ಹಾರಿ ಸಾಯುವ ಮುನ್ನ ಹೀಗೊಂದು ಸಾಲು ಬರೆದಿದ್ದಾರೆ
"ನನ್ನ ವ್ಯಾಪಾರ ತಂತ್ರಗಳಲ್ಲಿ ನಾನು ವಿಫಲನಾಗಿದ್ದೇನೆ"
7,000 ಕೋಟಿ ಸಾಲದ ರಾಶಿಯಿಂದ ಹೊರಬರುವುದೊಂದೇ ದಾರಿ ಎಂದು ಭಾವಿಸಿ ಕುಟುಂಬವನ್ನೇ ಬಿಟ್ಟು ಶಾಶ್ವತವಾಗಿ ಓಡಿಹೋದರು. ನಮಗೆಲ್ಲರಿಗೂ ತಿಳಿದಿರುವ ಭಾರತದ ಅತಿದೊಡ್ಡ ಕಾಫಿ ಶಾಪ್ ಸರಣಿ ಕೆಫೆ ಡೇ ಕಾಫಿಯ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಕಥೆ ಮೇಲಿನದು.
ಸಿದ್ಧಾರ್ಥನ ಮರಣದ ನಂತರ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಅವರ ಬಡ ಪತ್ನಿ ಮಾಳವಿಕಾ ಹೆಗಡೆ ಅವರನ್ನು ಅನೇಕರು ಸಹಾನುಭೂತಿಯಿಂದ ನೋಡಿರಬಹುದು.

"ದುರದೃಷ್ಟ ಮಹಿಳೆ !! ದೊಡ್ಡ ಸಾಲಗಾರನ ಹೆಂಡತಿ"
ಇನ್ನೂ ಹಲವರು, "ಅಯ್ಯೋ, ನಾನು ಅವಳಿಗೆ ಏನು ಮಾಡಲಿ? ಮೂರು ದಶಕಗಳಲ್ಲಿ, ಸಿದ್ಧಾರ್ಥ 7000 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ.
ಸಿಇಓ ಖುರ್ಚಿಯಲ್ಲಿ ಕುಳಿತಾಗ ಅವಳ ಕಣ್ಣಾಲಿಗಳು ತುಂಬಿ ಬಂದಿರಬೇಕು... ತನ್ನ ದುಃಸ್ಥಿತಿಯನ್ನು ನೆನೆದುಕೊಂಡಳು.
ಗಂಡನನ್ನು ಕಳೆದುಕೊಂಡ ದುಃಖವನ್ನು ನೆನಪಿಸಿಕೊಂಡರೆ ಅವರ ತೂಕ ಎಷ್ಟು ??
ಆದರೆ ಇವು ಅವಳ ಜೀವನದಲ್ಲಿ ಕೇವಲ ಮುಳ್ಳಿನ ಹಾದಿಗಳಾಗಿದ್ದವು.
ಆದರೆ ಕೇವಲ ಎರಡೇ ವರ್ಷದಲ್ಲಿ 5500 ಕೋಟಿ ಸಾಲ ತೀರಿಸಿ ಸೋತವರ ಮೇಲೆ ವಿಜಯ ಪತಾಕೆ ಹಾರಿಸಿದ ಸಿದ್ಧಾರ್ಥನ ನಿಜವಾದ ಹೀರೋ ಇವರೇ. ಬಹುಶಃ ಸಿದ್ಧಾರ್ಥ ತನ್ನ ಹೆಂಡತಿಯ ಸಾಮರ್ಥ್ಯವನ್ನು ಅರಿತುಕೊಂಡಿರಲಿಲ್ಲ.
ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿದರೆ ಇಂತಹ ಸಾವಿರ ಮಾಳವಿಕಾ ಹೆಗಡೆ ಕಾಣಸಿಗುತ್ತಾರೆ. ಖಾಲಿತನದಿಂದ ಅದ್ಭುತಗಳನ್ನು ಮಾಡುವ ಬಹಳಷ್ಟು ಮಹಿಳೆಯರು ... ಬಹಳಷ್ಟು ಕುಟುಂಬಗಳಿಗೆ ಬೆನ್ನೆಲುಬಾಗಿರುವ ಮಹಿಳೆಯರು. ಮಹಿಳೆಯರು ಯಾವುದೇ ಅಧಿಕಾರದ ಸ್ಥಾನವನ್ನು ಹೊಂದಿಲ್ಲ ಎಂದು ಇನ್ನೂ ನಂಬುವ ಕೀಳುಮಟ್ಟದವರಿಗೆ ಅವರು ಉತ್ತರ.
ಇದನ್ನೇ ಹೆಣ್ಣಿನ ಶಕ್ತಿ ಎನ್ನಬೇಕು.
ನನ್ನದಲ್ಲದ ಬರಹ

ಅಧಿಕೃತ ಮಾಹಿತಿ ಏನಿದೆ?:
ಮಾರ್ಚ್ 31ಕ್ಕೆ ಷೇರು ಪೇಟೆಗೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಸಲ್ಲಿಸಿರುವ ಮಾಹಿತಿಯಂತೆ ಸಾಲದ ಮೊತ್ತ 1,810 ಕೋಟಿ ರು ಗೆ ತಗ್ಗಿದೆ. ಮಾರ್ಚ್ 2019ರಲ್ಲಿ ವಿ. ಜಿ ಸಿದ್ದಾರ್ಥ ಅವರ ಕಂಪನಿ ಸುಮಾರು 7,214 ಕೋಟಿ ರು ಸಾಲ ಹೊಂದಿತ್ತು. ಮಾರ್ಚ್ 2021ರಲ್ಲಿ
ಬಿಎಸ್‌ಇಯಲ್ಲಿ ಸಂಸ್ಥೆ ಈ ದಿನ(ಸೆ.13,2022)ದ ವಹಿವಾಟಿನ ಅಂತ್ಯದಲ್ಲಿ 66.45 ರೂಪಾಯಿ ನಷ್ಟಿದೆ. ಸಾರ್ವಕಾಲಿಕ ಗರಿಷ್ಠ ಮೌಲ್ಯ ಎನ್‌ಎಸ್‌ಇಯಲ್ಲಿ ಏಪ್ರಿಲ್ 2018ರಲ್ಲಿ 345.71 ರೂಪಾಯಿ ಆಗಿತ್ತು.
2021-22 ಆರ್ಥಿಕ ವರ್ಷದಲ್ಲಿ ಸಿಡಿಇಎಲ್ ಕ್ರೋಢಿಕೃತ ಆದಾಯದ ಶೇ 85ರಷ್ಟು ಕಾಫಿ ವ್ಯಾಪಾರ, ವಹಿವಾಟಿನಿಂದ ಬಂದಿತ್ತು. ಆತಿಥ್ಯ ವಿಭಾಗದಿಂದ ಶೇ 6ರಷ್ಟು, ಆಪರೇಷನ್ಸ್ ಶೇ 9ರಷ್ಟು, ಆದಾಯ ತಂದು ಕೊಟ್ಟಿತ್ತು. 2021-22ರಲ್ಲಿ ಆದಾಯ 496 ಕೋಟಿ ರು ಕಂಡಿತ್ತು. 2020-21ಕ್ಕೆ ಹೋಲಿಸಿದರೆ ಶೇ 24ರಷ್ಟು ಅಧಿಕ ಮೊತ್ತ ಗಳಿಕೆಯಾಗಿತ್ತು. ಇದೇ ವೇಳೆ ತೆರಿಗೆ ಕಡಿತಕ್ಕೂ ಮುಂಚಿನ ನಷ್ಟದ ಬಬ್ತು 111ಕೋಟಿ ರು ಮಾತ್ರ ಆಗಿದ್ದು ವಿಶೇಷ. ಇದಕ್ಕೂ ಹಿಂದಿನ ವರ್ಷದಲ್ಲಿ 450 ಕೋಟಿ ರು ನಷ್ಟ ಕಂಡಿತ್ತು.
ಸಿಡಿಇಎಲ್ ಕಂಪನಿಯ ಸ್ವಾಮ್ಯದಲ್ಲಿ ಐಷಾರಾಮಿ ಬೊಟಿಕ್ ರೆಸಾರ್ಟ್ಸ್, ಕಾಫಿ ಡೇ ಹೋಟೆಲ್ ಅಂಡ್ ರೆಸಾರ್ಟ್ಸ್ ಪ್ರೈ ಲಿಮಿಟೆಡ್ ಬ್ರ್ಯಾಂಡ್ ನ ದಿ ಸೆರಾಯ್ ಜನಪ್ರಿಯವಾಗಿದ್ದು, ಚಿಕ್ಕಮಗಳೂರು, ಬಂಡೀಪುರ ಹಾಗೂ ಕಬಿನಿ ಪ್ರದೇಶದಲ್ಲಿವೆ. ಇದಲ್ಲದೆ ಅಂಡಮಾನ್ ಅಂಡ್ ನಿಕೋಬಾರ್ ದ್ವೀಪದ ಐಷಾರಾಮಿ ರೆಸಾರ್ಟ್ ನಲ್ಲೂ ಸಂಸ್ಥೆ ಪಾಲು ಹೊಂದಿದೆ.
ಕೆಫೆ ಕಾಫಿ ಡೇ ಬ್ರ್ಯಾಂಡ್ ಹೊಂದಿರುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್, ಸದ್ಯ 158 ಪಟ್ಟಣಗಳಲ್ಲಿ 495 ಕೆಫೆ, 285 ಸಿಸಿಡಿ ವಾಲ್ಯೂ ಎಕ್ಸ್ ಪ್ರೆಸ್ ಕಿಯೋಸ್ಕ್ ಹೊಂದಿವೆ. ಸುಮಾರು 38,810 ವೆಂಡಿಂಗ್ ಮಷಿನ್ ಗಳನ್ನು ಮಾರಾಟ ಮಾಡಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications