• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?

|
   V G Siddhartha :ಸಿದ್ದಾರ್ಥ ಅವರ ಕೊನೆ ಇ- ಮೇಲ್‌ನಲ್ಲೇನಿದೆ? | Oneindia Kannada

   ಮಂಗಳೂರು, ಜುಲೈ 30: ಅನೇಕ ಯುವ ಉದ್ಯಮಿಗಳಿಗೆ ರೋಲ್ ಮಾಡೆಲ್ ಅನ್ನಿಸಿಕೊಂಡಿದ್ದ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ ತಮ್ಮ 60ನೇ ವಯಸ್ಸಿನಲ್ಲಿ ಬದಕನ್ನು ಕೈ ಚೆಲ್ಲಿದರಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಅವರು ಎರಡು ದಿನಗಳ ಹಿಂದಷ್ಟು ಹಂಚಿಕೊಂಡಿದ್ದ ಇ- ಮೇಲ್.

   ಜುಲೈ 27ರಂದು ಕಾಫಿ ಡೇ ಗ್ರೂಪ್‌ನ ಮಂಡಳಿ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸಿದ್ಧಾರ್ಥ ತಮ್ಮ 37 ವರ್ಷಗ ಔದ್ಯಮಿಕ ಬದುಕು ದಾರಿ ತಪ್ಪಿತು ಎಂದು ತಿಳಿಸಿದ್ದಾರೆ. "ಕಠಿಣ ಪರಿಶ್ರಮದಿಂದ ನಮ್ಮ ಕಂಪನಿಯಲ್ಲಿ 30 ಸಾವಿರ ಉದ್ಯೋಗ (ಕಾಫಿ ಡೇ ಮತ್ತು ಸಬ್ಸಿಡರಿಗಳಲ್ಲಿ) ಹಾಗೂ ತಂತ್ರಜ್ಞಾನ ಕಂಪನಿಯಲ್ಲಿ 20 ಸಾವಿರ (ಮೈಂಡ್ ಟ್ರೀ?) ಸೃಷ್ಟಿ ಮಾಡಿದ್ದೆ. ಆದರೆ ಇವುಗಳಿಗೆ ಒಂದು ಸರಿಯಾದ ಬಿಜಿನೆಸ್ ಮಾಡೆಲ್ ಸೃಷ್ಟಿ ಮಾಡುವಲ್ಲಿ ಸೋತು ಹೋದೆ,'' ಎಂದು ಬರೆಯುತ್ತಾರೆ ಸಿದ್ಧಾರ್ಥ.

   CCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

   ಗಮನ ಸೆಳೆಯುವ ಅಂಶ ಏನೆಂದರೆ, ತಮ್ಮ ಸಂಕಷ್ಟಗಳನ್ನು ವಿವರಿಸುವ ಸಿದ್ಧಾರ್ಥ ತಮ್ಮ ಒಬ್ಬ ಸ್ನೇಹಿತನಿಂದ ಆಗುತ್ತಿರುವ ಒತ್ತಡವನ್ನು ಇಲ್ಲಿ ನಮೋದಿಸುತ್ತಾರೆ. "6 ತಿಂಗಳ ಹಿಂದೆ ನಡೆದ ವ್ಯವಹಾರವೊಂದರಲ್ಲಿ ಒಬ್ಬ ಸ್ನೇಹಿತ ತನ್ನ ಶೇರುಗಳನ್ನು ಬೈ ಬ್ಯಾಕ್ ಮಾಡುವಂತೆ ಒತ್ತಡ ಹಾಕುತ್ತಿದ್ದಾನೆ. ಇತರೆ ಸಾಲ ನೀಡಿದವರಿಂದಲೂ ತೀವ್ರ ಒತ್ತಡ ಸೃಷ್ಟಿಯಾಗಿದ್ದು ಇದರಲ್ಲೇ ನಾನು ಮುಳುಗಿ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಂದೆ ಇದ್ದ ತೆರಿಗೆ ಇಲಾಖೆ ಡಿಜಿಯಿಂದಲೂ ಒತ್ತಡ ಹೆಚ್ಚಾಗತ್ತಿದೆ. ಇದರಿಂದ ವ್ಯವಹಾರ ಕಷ್ಟವಾಗುತ್ತಿದೆ," ಎಂದು ಸಿದ್ಧಾರ್ಥ ತಮ್ಮ ಒತ್ತಡವನ್ನು ವಿವರಿಸಿದ್ದಾರೆ.

   ಇದರ ಜತೆಗೆ ಕಂಪನಿ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ. "ಎಲ್ಲಾ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ. ನನ್ನ ತಂಡವಾಗಲೀ, ನನ್ನ ಆಡಿಟರ್‌ಗಳಾಗಲೀ, ಹಿರಿಯ ವ್ಯವಸ್ಥಾಪಕರುಗಳಿಗಾಲೀ ಕೆಲವೊಂದು ಕೊಡು ಕೊಳ್ಳುವಿಕೆ ಬಗ್ಗೆ ಮಾಹಿತಿ ಇಲ್ಲ. ಕಾನೂನು ನನ್ನನ್ನು ಮಾತ್ರವೇ ಪ್ರಶ್ನಿಸಬೇಕು. ನನ್ನ ಕುಟುಂಬವನ್ನೂ ಈ ವ್ಯವಹಾರದಿಂದ ದೂರ ಇಟ್ಟಿದ್ದೆ,'' ಎಂದು ಸಿದ್ಧಾರ್ಥ ವಿವರಿಸಿದ್ದಾರೆ.

   "ಐಟಿ ದಾಳಿ ನೋವಿತ್ತು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ"

   "ನನ್ನ ಉದ್ದೇಶ ತಪ್ಪು ದಾರಿಗೆ ಎಳೆಯುವುದಾಗಲೀ ಅಥವಾ ವಂಚಿಸುವುದಾಗಲೀ ಆಗಿರಲಿಲ್ಲ. ಒಬ್ಬ ಉದ್ಯಮಿಯಾಗಿ ನಾನು ವಿಫಲನಾಗಿದ್ದೆ. ಇದು ನನ್ನ ಪ್ರಾಮಾಣಿಕ ತಪ್ಪೊಪ್ಪುವಿಕೆಯಾಗಿದ್ದು ನೀವೆಲ್ಲ ನನ್ನ ಕ್ಷಮಿಸುತ್ತೀರಿ ಎಂದಿ ಭಾವಿಸಿದ್ದೇನೆ,'' ಎಂದು ಸಿದ್ಧಾರ್ಥ ತಿಳಿಸಿದ್ದರು.

   ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು

   ಇದರ ಜತೆಗೆ ತಮ್ಮ ಆಸ್ತಿಗಳ ವಿವರಗಳು ಹಾಗೂ ಸಾಲಗಳ ಮಾಹಿತಿಯನ್ನು ಪ್ರತ್ಯೇಕ ಅಟ್ಯಾಚ್‌ಮೆಂಟ್‌ನಲ್ಲಿ ನೀಡಿದ್ದಾಗಿಯೂ ಇ- ಮೇಲ್‌ನಲ್ಲಿ ತಿಳಿಸಿದ್ದರು ಸಿದ್ಧಾರ್ಥ.

   English summary
   Every financial transaction is my responsibility .the law should hold me and only me accountable,' reads VG Siddhartha's email. He was sent his last email to coffee day group director three days back.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X