Siddaramaiah: ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ: ಹೈಕಮಾಂಡ್ ಕೊಟ್ಟ ರಾಜ್ಯಸಭಾ ಆಯ್ಕೆ ವಿನಮ್ರವಾಗಿ ನಿರಾಕರಿಸಿದ್ದೇನೆ: ಸಿದ್ದು

Siddaramaiah: ಮುಖ್ಯಮಂತ್ರಿ ಸ್ಥಾನಕ್ಕೆ ಮೇ 28ರಂದು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪ್ರಕ್ರಿಯೆಯು ಅತ್ಯಂತ ಸರಳವಾಗಿ ಮುಕ್ತಾಯವಾಗಿದೆ. ಇನ್ನು ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯ ಅವರು, ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ. ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಮುಂದುವರಿದು ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿದ್ದ ರಾಜ್ಯಸಭಾ ಆಫರ್‌ಅನ್ನು ನಾನು ವಿನಮ್ರವಾಗಿ ನಿರಾಕರಿಸಿದ್ದೇನೆ. ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ. ಜನರು ನನ್ನನ್ನು ಐದು ವರ್ಷದ ಅವಧಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಎರಡು ವರ್ಷ ಅಧಿಕಾರ ಅವಧಿ ಇದೆ. ಕೋಮು ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ನಿರ್ಗಮನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Siddaramaiah

Siddaramaiah: ಸಿಎಂ ಹುದ್ದೆಗೆ ಸಿದ್ದು ವಿದಾಯ: ಕನ್ನಡಿಗರು ಹೇಳಿದ್ದೇನು

ಕರ್ನಾಟಕ ಕಂಡಂತ ಶ್ರೇಷ್ಠ ನಾಯಕರು ನೀವು ನಿಮ್ಮ ಆಡಳಿತದಲ್ಲಿ ಜನ ಮೆಚ್ಚುಗೆಯ ಕಾರ್ಯವನ್ನು ತುಂಬಾ ಯಶಸ್ವಿಯಾಗಿ ಮತ್ತು ನಿಷ್ಠೆಯಿಂದ ಆಡಳಿತವನ್ನು ನಡೆಸಿದ್ದೀರಿ, ಆ ಭಗವಂತ ನಿಮಗೇ ಆಯುಷ್ಯ , ಆರೋಗ್ಯ ಮತ್ತು ಸಮೃದ್ಧಿಯ ಬದುಕನ್ನು ಕಲ್ಪಿಸಲಿ ಎಂದು ನಾವು ಆಶಿಸುತ್ತೇವೆ ಎಂದು ಸಿದ್ದಗಿರಿ ಎನ್ನುವವರು ಹೇಳಿದ್ದಾರೆ. ಕನ್ನಡ ನಾಡಿನ ಜನತೆಗೆ ಕಲ್ಪವೃಕ್ಷದಂತಿದ್ದು, ನಿಮ್ಮ ಆಡಳಿತಾವಧಿಯಲ್ಲಿ ಸಮೃದ್ಧಿ ಸುಭೀಕ್ಷೆಯಲ್ಲಿ ಕರ್ನಾಟಕ ರಾಜ್ಯವನ್ನು, ಮುಖ್ಯ ಮಂತ್ರಿಯಾಗಿ ಮುನ್ನಡೆಸಿದ್ದೀರಿ. ನಿಮ್ಮ ಅನನ್ಯ ಸೇವೆಗೆ ಧನ್ಯವಾದಗಳು, ಈ ನಾಡಿನ ಪ್ರತಿಯೊಬ್ಬ ಮಧ್ಯಮವರ್ಗದರೂ ಕೂಡಾ ನಿಮ್ಮನ್ನು ಸದಾ "ಅನ್ನ ರಾಮಯ್ಯ" ಎಂಬ ಅನ್ವರ್ಥನಾಮದಿಂದ ನೆನಪಿಸಿಕೊಳ್ಳುತ್ತಾರೆ. ದೇವರಾಶೀರರ್ವಾದ ಸದಾ ಜೊತೆಗಿದ್ದು ಮುನ್ನಡೆಸಲಿ ಎಂದು ನೆಟ್ಟಿಗರು ಶುಭಕೋರಿದ್ದಾರೆ.

ಗೀತಾ ರಾಘವೇಂದ್ರ ಎನ್ನುವವರು ಪಕ್ಷ ಯಾವುದೇ ಇರಲಿ. ನೀವೊಬ್ಬ ಬಡವರ ಬಂಧು ಅನ್ನುವುದು ಸತ್ಯ. ರಾಜಕೀಯದಲ್ಲಿ ಇವೆಲ್ಲವೂ ಸಾಮಾನ್ಯ. ನಿಮ್ಮ ಮೊದಲ 5 ವರ್ಷ ತುಂಬಾ ಉತ್ತಮ ಆಡಳಿತ ಕೊಟ್ಟಿದ್ದೀರಿ. ಈ ಸಲ ಯಾಕೋ 3 ವರ್ಷ ಸಮಾಧಾನ ತರಲಿಲ್ಲ. ಆದರೂ 8 ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಸಾಧನೆಯೇ ಸರಿ. ಮುಂದಿನ ದಿನಗಳು ಸಂತೋಷದಿಂದಲೇ ಇರಲಿ ಎಂದು ಹೇಳಿದ್ದಾರೆ.

ರಾಮಚಂದ್ರ ಕಲ್ಲರ್ ಎನ್ನುವವರು ಕಾಂಗ್ರೆಸ್ ಪಕ್ಷದ ನಾಯಕರಾಗಿ ಭಾರತದ ರಾಜಕೀಯ ಇತಿಹಾಸದಲ್ಲಿ ತಾವು ಅಚ್ಚಳಿಯದೆ ಇರುವಂತೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೀರಿ, ನುಡಿದಂತೆ ನಡೆದಿದ್ದಿರಿ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೀರಿ. ಹತ್ತು ಹಲವಾರು ಬಡವರ ಪರ, ಹಿಂದುಳಿದ ವರ್ಗದ ಪರ ಹಾಗೂ ರೈತರ ಪರ ಯೋಜನೆಗಳನ್ನು ರೂಪಿಸಿ ಅವರಿಗೆ ಜನಪರ ಆಡಳಿತ ನೀಡಿದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಾವೊಬ್ಬ ನಾಡು ಕಂಡ ಅಪೂರ್ವ ರಾಜಕಾರಣಿ ನಿಮ್ಮನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+