ಕಾಫಿ ಡೇ ಸಂಸ್ಥೆಗೆ ಮಾಳವಿಕಾ ಸಿದ್ಧಾರ್ಥ್ ನೂತನ ಸಿಇಒ

ನವದೆಹಲಿ, ಡಿಸೆಂಬರ್ 7: ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ವಿ.ಜಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಿದೆ.

ವಿಜಿ ಸಿದ್ಧಾರ್ಥ ಅವರು ಸ್ಥಾಪಿಸಿದ್ಧ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮತ್ತು ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕೋ ಲಿಮಿಟೆಡ್‌ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಮಾಳವಿಕಾ ಹೆಗ್ಡೆ ಅವರಿಗೆ ಮಂಡಳಿಯು ಸಂಸ್ಥೆಯನ್ನು ನೋಡಿಕೊಳ್ಳುವ ಮಹತ್ವದ ಹುದ್ದೆಗೆ ನೇಮಿಸಿದೆ.

ಇದರ ಜತೆಗೆ ಮಂಡಳಿಯು ನಾನ್ ಎಕ್ಸಿಕ್ಯೂಟಿವ್ ಸ್ವತಂತ್ರ ನಿರ್ದೇಶಕರ ಸಾಮರ್ಥ್ಯದ ಮೂವರು ಹೆಚ್ಚುವರಿ ನಿರ್ದೇಶಕರನ್ನು ಕೂಡ ನೇಮಕ ಮಾಡಿದೆ ಎಂದು ಸಿಸಿಡಿ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾಹಿತಿ ನೀಡಿದೆ.

 Coffee Day Enterprises Board Appoints Malavika Hegde As New CEO

ಸಿಎಚ್ ವಸುಂಧರಾ ದೇವಿ, ಗಿರಿ ದೇವನೂರು ಮತ್ತು ಮೋಹನ್ ರಾಘವೇಂದ್ರ ಕೊಂಡಿ ಅವರನ್ನು 2020ರ ಡಿಸೆಂಬರ್ 31ರಿಂದ 2025ರ ಡಿಸೆಂಬರ್ 30ರವರೆಗೆ ಷೇರುದಾರರ ಅನುಮೋದನೆಗೆ ಅನುಗುಣವಾಗಿ ನಾನ್ ಎಕ್ಸಿಕ್ಯೂಟಿವ್ ಸ್ವತಂತ್ರ ನಿರ್ದೇಶಕರ ಸಾಮರ್ಥ್ಯದೊಂದಿಗೆ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಸೆಬಿ (ಎಲ್‌ಒಡಿಆರ್) ತಿದ್ದುಪಡಿ ನಿಯಮಗಳು, 2018ಕ್ಕೆ ಅನುಸಾರವಾಗಿ ಸ್ವತಂತ್ರ ಮಹಿಳಾ ನಿರ್ದೇಶಕರನ್ನು ನೇಮಿಸುವ ಅಗತ್ಯವನ್ನು ಕೂಡ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ. 2019ರ ಜುಲೈನಲ್ಲಿ ವಿಜಿ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕಂಪೆನಿಯು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಕಂಪೆನಿಗೆ ಮರುಜೀವ ನೀಡುವ ಪ್ರಯತ್ನ ನಡೆಯುತ್ತಿದ್ದು, ಕಳೆದುಕೊಂಡಿರುವ ಮೌಲ್ಯವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಮುಖ ನೇಮಕಗಳನ್ನು ಮಾಡಲಾಗಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆಯ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಎಬಿಸಿ ಸಂಸ್ಥೆಗೆ ಕಾಫಿ ಬೆಳೆ ನೀಡಿದ್ದ ಸುಮಾರು 300 ಬೆಳೆಗಾರರಿಗೆ ಹಣ ಪಾವತಿಸಿರಲಿಲ್ಲ. 100 ಕೋಟಿ ರೂ ಅಧಿಕ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು ಎಂದು ದೂರು ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+