ಸಿದ್ಧಾರ್ಥ ಮೇಲಿದ್ದ 9409 ಕೋಟಿ ಸಾಲದ ಪೂರ್ಣ ಅಂಕಿ-ಅಂಶ
ಬೆಂಗಳೂರು, ಜುಲೈ 31: ಸಿದ್ಧಾರ್ಥ ಅವರಿಗೆ 8053 ಕೋಟಿ ಸಾಲವಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಲದ ಪಟ್ಟಿಯೊಂದು ನಿನ್ನೆ ಹರಿದಾಡುತ್ತಿದ್ದು, ಆದರೆ ಸಿದ್ಧಾರ್ಥ ಅವರಿಗಿದ್ದ ಒಟ್ಟು ಸಾಲದ ಬಗ್ಗೆ ಮಾಹಿತಿ ಇದೀಗ ಬಹಿರಂಗವಾಗಿದೆ.
ಸಿದ್ಧಾರ್ಥ ಅವರಿಗೆ ಇದ್ದ ಒಟ್ಟು ಸಾಲದ ಮೊತ್ತ 9409 ಕೋಟಿ ರೂಪಾಯಿಗಳು. ಇದು ಅವರ ಒಟ್ಟು ಆಸ್ತಿಯ ಅರ್ಧದಷ್ಟೂ ಸಹ ಅಲ್ಲ, ಸಿದ್ಧಾರ್ಥ ಅವರು ಕಟ್ಟಿ ಬೆಳಿಸಿದ ಕೆಫೆ ಕಾಫಿ ಡೇ ಯ ಬ್ರ್ಯಾಂಡ್ ವ್ಯಾಲ್ಯೂ ಒಂದೇ 20,000 ಕೋಟಿಗೂ ಅಧಿಕ ಇದೆ.
ಸಾಲಕ್ಕಿಂತ ಎರಡು ಪಟ್ಟು ಹೆಚ್ಚಿನ ಆಸ್ತಿ, ಉದ್ಯಮದಲ್ಲಿ ಅತ್ಯುತ್ತಮ ಹೆಸರು, ರಾಜಕಾರಣದಲ್ಲಿ ಗಾಡ್‌ಫಾದರ್‌ಗಳು, ಆತ್ಮೀಯ ಗೆಳೆಯರು, ಕರೆದ ಕೂಡಲೇ ಬೆನ್ನಿಗೆ ನಿಲ್ಲುವ ಲಕ್ಷಾಂತರ ಮಂದಿ ಜನರಿದ್ದರೂ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯಕ್ಕೆ ಬಂದದ್ದಾದರೂ ಏಕೆ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ.

ಕೆಫೆ ಕಾಫಿ ಡೇ ಯಂತವ ದೊಡ್ಡ ಸಂಸ್ಥೆ ನಡೆಸುತ್ತಿದ್ದರು ಇಷ್ಟು ದೊಡ್ಡದಾಗಿ ಸಾಲ ಬೆಳೆದಿದ್ದು ಹೇಗೆ? ಎಂಬ ಅನುಮಾನವೂ ಕಾಡುತ್ತದೆ. ಸಿದ್ಧಾರ್ಥ ಅವರ ಒಟ್ಟು ಸಾಲದ ಮಾಹಿತಿ, ಸಾಲ ಬೆಳೆದ ಬಗೆ, ಇಕ್ಕಟ್ಟಿಗೆ ಸಿಲುಕಿದ್ದು ಹೇಗೆ ಎಲ್ಲದರ ಮಾಹಿತಿ ಇಲ್ಲಿದೆ.
ಸಿದ್ಧಾರ್ಥ ಅವರ ಸಂಸ್ಥೆಗಳ ಮೇಲೆ 2017 ರಲ್ಲಿ ಐಟಿ ರೇಡ್ ಆದ ನಂತರ ಅವರ ಸಾಲದ ಪ್ರಮಾಣ ಏರಿಕೆ ಆಗಿದ್ದು, ಇಲ್ಲಿ ಗಮನಿಸಬೇಕಾದ ಅಂಶ. ಸಿದ್ಧಾರ್ಥ ಅವರು ಪಡೆದಿದ್ದ ಸಾಲದ ಅಂಕಿ-ಅಂಶಗಳು ಇಲ್ಲಿವೆ.
ಸಿದ್ಧಾರ್ಥ ಅವರ ಒಡೆತನದ ಕೆಫೆ ಕಾಫಿ ಡೇ ಸಮೂಹದ ಮೇಲೆ 8083 ಕೋಟಿ ಸಾಲ ಇದೆ. ಕಾಫಿ ಡೇ ಗ್ಲೋಬಲ್ ಮೇಲೆ 1252 ಕೋಟಿ ಸಾಲ ಇದೆ. ಸಿವನ್ ಸೆಕ್ಯೂರಿಟೀಸ್ ಸಂಸ್ಥೆಯ ಮೇಲೆ 42 ಕೋಟಿ ಸಾಲ ಇದೆ. ಇಟ್ಟಾಯಿಮ್ ಸಿಸ್ಟಮ್ ಮೇಲೆ 32 ಕೋಟಿ ಸಾಲ ಇದೆ. ಒಟ್ಟು 9409 ಕೋಟಿ ಸಾಲ ಇದೆ.
ಐಟಿ ದಾಳಿ ಆದ ನಂತರ 46% ಸಾಲ ಹೆಚ್ಚಾಗಿದೆ. ಜೂನ್ 2018 ರಿಂದ ಈಚೆಗೆ ಸಿದ್ಧಾರ್ಥ ಅವರು ಕೆಫೆ ಕಾಫಿ ಡೇ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಡಮಾನ ಇಟ್ಟಿದ್ದಾರೆ.
ಜೂನ್ 2018 ರಲ್ಲಿ 39% ಷೇರುಗಳನ್ನು ಸಾಲಕ್ಕಾಗಿ ಅಡಮಾನ ಇಟ್ಟಿದ್ದಾರೆ, ಸೆಪ್ಟೆಂಬರ್ ತಿಂಗಳಲ್ಲಿ 38% ಅಡಮಾನ ಇಟ್ಟಿದ್ದಾರೆ. ಡಿಸೆಂಬರ್‌ನಲ್ಲಿ 70% ಷೇರು ಅಡಮಾನ ಇಟ್ಟಿದ್ದಾರೆ. ಮಾರ್ಚ್ 2019 ರಲ್ಲಿ 70% ಷೇರು ಅಡಮಾನ ಇಟ್ಟಿದ್ದಾರೆ. ಜೂನ್ 71% ಷೇರು ಅಡಮಾನ ಇಟ್ಟಿದ್ದಾರೆ.
ಈ ನಡುವೆ ಸಿದ್ಧಾರ್ಥ ಅವರ ಒಡೆತನದ ಮೈಂಡ್ ಟ್ರೀ ಸಂಸ್ಥೆಯನ್ನು ಎಲ್ ಆಂಡ್ ಟಿ ಗೆ ಮಾರಾಟ ಮಾಡಿದರು. ಸಂಸ್ಥೆಯಲ್ಲಿದ್ದು ತಮ್ಮ 20.32% ಷೇರುಗಳನ್ನು ಮಾರಾಟ ಮಾಡಿದ್ದರು. ಆ ಮಾರಾಟದಲ್ಲಿಯೂ ಕೆಲವು ತೊಡಕುಗಳು ಕಾಣಿಸಿಕೊಂಡಿತು. ಹೀಗಾಗಿ ಸಿದ್ಧಾರ್ಥ ಪೂರ್ಣವಾಗಿ ಅಧೀರರಾಗಿದ್ದಾರು.
ಸಿದ್ಧಾರ್ಥ ಅವರಿಗೆ ಹೊಸ ಸಾಲಗಳು ಹುಟ್ಟುವುದು ಅತ್ಯಂತ ಕಠಿಣವಾಗಿಬಿಟ್ಟಿತ್ತು, ಇದು ಅವರಿಗೆ ಬಹಳವೇ ಇಕ್ಕಟ್ಟಿಗೆ ಸಿಲುಕಿಸಿತ್ತು ಎಂದು ಹೇಳಲಾಗುತ್ತಿದೆ. ಇದೇ ಸಿದ್ಧಾರ್ಥ ಅವರ ಅಂತ್ಯಕ್ಕೆ ಕಾರಣವಾಯಿತೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications