ಜಯಾ-ಸಿದ್ದರಾಮಯ್ಯ ಕುಂತು ಮಾತಾಡಿದ್ರೆ ಸಮಸ್ಯೆ ಇರಲ್ಲ: ಶೆಟ್ಟರ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆ. 23: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸದಿರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗಾಗಿ ಇಂಥ ನಿರ್ಣಯ ಕೈಗೊಳ್ಳುವುದರಲ್ಲಿ ತಪ್ಪೇನಿಲ್ಲ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಎಚ್ ಡಿ ಕುಮಾರಸ್ವಾಮಿ ಒಕ್ಕೊರಲಿನಿಂದ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬೀಡಬೇಕೆ? ಬೇಡವೇ? ಕುಡಿಯುವ ನೀರಿಗಾಗಿ ಏನು ಮಾಡಬೇಕು? ಕಾನೂನು ಹೋರಾಟ ಹೇಗೆ ಸಾಗಿದೆ ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ವಿಶೇಷ ಅಧಿವೇಶನ ಶುಕ್ರವಾರ ನಡೆಸಲಾಗಿದೆ.

ಕುಡಿಯುವ ನೀರು ಮುಖ್ಯ: ಕುಡಿಯುವ ನೀರು ಮುಖ್ಯ, ಸದ್ಯದ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಅನಿವಾರ್ಯ ಎಂದು ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷಾತೀತವಾಗಿ ಬೆಂಬಲ ಸಿಕ್ಕಿದೆ. [LIVE:ಕನಿಷ್ಠ 40 ಸಾವಿರ ಕೋಟಿ ರಾಜ್ಯಕ್ಕೆ ನಷ್ಟ: ಈಶ್ವರಪ್ಪ]

Cauvery water will be used for drinking purpose: Karnataka council resolves

ನೀರಿನ ಮಟ್ಟ ಕುಸಿತ: ಕೆಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ನಾಲ್ಕು ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣ 27.6 ಟಿಎಂಸಿ ಟಿಎಂಸಿ ಅಡಿ ದಾಟುವುದಿಲ್ಲ. ಬೆಂಗಳೂರು, ಮೈಸೂರು, ಮಂಡ್ಯ ಭಾಗಗಳ ಕುಡಿಯುವ ನೀರಿಗಾಗಿ 32ಕ್ಕೂ ಅಧಿಕ ಟಿಎಂಸಿ ಅಡಿ ನೀರು ಅಗತ್ಯವಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಇಂಥ ನಿರ್ಣಯ ತಪ್ಪಲ್ಲ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.[ತಮಿಳರ 'ಅಮ್ಮ' ಜಯಲಲಿತಾರಿಗೆ ಏನು ಕಾಯಿಲೆ?]

ಸಾಂಬಾ ಬೆಳೆಗೆ ನೀರು ಬಿಡಲು ಕೇಳುತ್ತಿದ್ದರೆ, ಇಲ್ಲಿ ಕುಡಿಯಲು ನೀರಿಲ್ಲ. ಜನರು ಇಲ್ಲಿ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಕಾತುರರಾಗಿ ಕಾಯುತ್ತಿದ್ದಾರೆ. ಕಾವೇರಿ ಕೊಳ್ಳದ ಜನತೆ ಬರ ಪರಿಸ್ಥಿತಿಯಿಂದ ಬಳಲಿದ್ದಾರೆ. ಸಹಜ ಸ್ಥಿತಿ ಬರಲು 2017ರ ಮಾರ್ಚ್ ತನಕ ಕಾಯಬೇಕು.

ತಮಿಳುನಾಡು ಸಿಎಂ ಜತೆ ಮಾತನಾಡಿ: ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಇಲ್ಲಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿಲುವಿಗೆ ಬಿಜೆಪಿ ಬೆಂಬಲಿಸಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Legislative Council on Friday adopted a one line resolution that Cauvery water in the state dams will be utilised only for drinking water purpose. Both houses of the Karnataka assembly are currently in session to discuss the Cauvery Waters issue following a Supreme Court directive to release water to Tamil Nadu.
Please Wait while comments are loading...