ಗಂಗಾವತಿ: ಮಾಜಿ ಶಾಸಕರ ‌ಕಾರು ಡಿಕ್ಕಿ ಬಾಲಕ ಸಾವು

Posted By:
Subscribe to Oneindia Kannada

ಗಂಗಾವತಿ, ಡಿಸೆಂಬರ್ 22: ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಪ್ರಯಾಣಿಸುತ್ತಿದ್ದ ಕಾರು ಹರಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

ಮುಕ್ಕುಂಪಿ ಬಳಿ ಮಾಜಿ ಶಾಸಕರ ಕಾರಿನಿಂದ ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡ ಬಾಲಕ ಬಸವರಾಜ ಯಲ್ಲಪ್ಪ ಗೊಲ್ಲರ್ (10) ನನ್ನು ಚಿಕಿತ್ಸೆಗೆ ದಾಖಲಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

Boy died after hitting by ex MLA's car

ಮಾಜಿ ಶಾಸಕ ಮುನವಳ್ಳಿ ತಮ್ಮ ಬೆಂಬಲಿಗರೊಬ್ಬರು ಇಂದರಗಿ ತಾಂಡದಲ್ಲಿ ಸಾವನ್ನಪ್ಪಿದ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲುವತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಬಾಲಕ ತನ್ನ ತಾತ ಮಲ್ಲಪ್ಪನೊಂದಿಗೆ ಊರಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯ್ದು ಕುಳಿತಿದ್ದಾಗ ಆಕಸ್ಮಿಕ ಬಾಲಕ ಮಾಜಿ ಶಾಸಕ ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡ ಬಂದ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gangavathi ex MLA Paranna Munavalli car hits to a 10 year old Boy Basavraj in Mukumpi. boy died on the way to hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ