ಕಟ್ಟಕಡೆಯ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಜಯಭೇರಿ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 08 : ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ, ಇಬ್ಬರು ಪ್ರಮುಖ ಹುದ್ದರಿಗಳ ನಡುವೆ ಕಂಡರಿಯದಂಥ ವಾಚಾಮಗೋಚರ, ಅಸಹ್ಯಕರ ವಾಕ್ ಪ್ರಹಾರಕ್ಕೆ ಮಂಗಳ ಹಾಡಲಾಗಿದ್ದು, ಮತಸಮರಕ್ಕೆ ದೊಡ್ಡಣ್ಣ ಸಜ್ಜಾಗಿದ್ದಾನೆ.

ಅಂತಿಮ ಹಂತದಲ್ಲಿ ನಡೆಸಲಾಗಿರುವ ಚುನಾವಣಾ ಸಮೀಕ್ಷೆಯಲ್ಲಿ ಡೆಮೊಕ್ರೆಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರು ರಿಪಬ್ಲಿಕನ್ ಪಕ್ಷದ 'ಡಾನ್' ಡೊನಾಲ್ಡ್ ಟ್ರಂಪ್ ಅವರನ್ನು ಬಗ್ಗುಬಡಿದು, ಅಮೆರಿಕದ 45ನೇ ಅಧ್ಯಕ್ಷರಾಗಿ ಅಮೆರಿಕವನ್ನು ಆಳಲಿದ್ದಾರೆ.

ಮೊನ್‌ಮೌತ್ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ 6 ಅಂಕಗಳಿಂದ ಮುಂದಿರಲಿದ್ದಾರೆ. ವಾಷಿಂಗ್ಟನ್ ಪೋಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಕ್ಲಿಂಟನ್ 8 ಅಂಕಗಳಿಂದ ಜಯಸಾಧಿಸಲಿದ್ದಾರೆ. ಮತ್ತು ಫಾಕ್ಸ್ ನ್ಯೂಸ್ ನಡೆಸಿದ ಮತ ಸಮೀಕ್ಷೆಯಲ್ಲಿಯೂ ಹಿಲರಿ ಅವರು 4 ಅಂಕಗಳಿಂದ ಮುಂದೆ ಸಾಗಿ ಜಯಭೇರಿ ಬಾರಿಸಲಿದ್ದಾರೆ. [ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಸಂಕ್ಷಿಪ್ತವಾಗಿ]

US election 2016 : Last poll survey predicts Hillary Clinton will win

ಇನ್ನೊಂದು ಸಮೀಕ್ಷೆಯಲ್ಲಿ, ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು 1984ರಲ್ಲಿ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅವರಿಗಿಂತ ಜನಪ್ರಿಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಆದರೆ, ಅಚ್ಚರಿಯ ಸಂಗತಿಯೆಂದರೆ, ಬರಾಕ್ ಒಬಾಮಾ ಅವರಿಗಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್! ಸದ್ಯಕ್ಕೆ ಅವರ ಪತ್ನಿ ಹಿಲರಿ ಕ್ಲಿಂಟನ್ ಅವರೇ ಸಮರಕ್ಕಿಳಿದಿದ್ದಾರೆ. [ಅಮೆರಿಕಾ ಅಧ್ಯಕ್ಷರ ಆಯ್ಕೆ ತೀರ್ಮಾನ, ಇಂದು ಮತದಾನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The final poll survey conducted by many organizations have predicted that Democratic presidential candidate Hillary Clinton will get more votes than Republican candidate Donald Trump in US Presidential Election 2016. Barack Obama has too emerged as popular president than Ronald Reagan.
Please Wait while comments are loading...