ವಿಶ್ವ ಏಡ್ಸ್ ದಿನ: ಜಾಗೃತಿಯೊಂದೇ ರೋಗ ನಿಯಂತ್ರಣಕ್ಕಿರುವ ದಾರಿ

Posted By:
Subscribe to Oneindia Kannada

ಹೇಳಿಕೊಳ್ಳಲೂ ಆಗದ, ಅನುಭವಿಸಲೂ ಆಗದ ಮಾರಣಾಂತಿಕ ಕಾಯಿಲೆ ಎಚ್ ಐವಿ ಏಡ್ಸ್. ಎಚ್ಐವಿ(Human immunodeficiency virus) ಸೋಂಕಿನಿಂದ ಬರುವ ಈ ರೋಗ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕುಂಠಿತಗೊಳಿಸಿ ಆತನನ್ನು ಸಾವಿಗೆ ಆಹ್ವಾನಿಸುತ್ತದೆ.

ಅಸುರಕ್ಷಿತ ಲೈಂಗಿಕ ಸಂಪರ್ಕ, ಸುರಕ್ಷಿತವಲ್ಲದ ಚುಚ್ಚುಮದ್ದು, ಸೋಂಕು ರಕ್ತ, ಗರ್ಭಾವಸ್ಥೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ಈ ರೋಗಕ್ಕೆ ಆಧುನಿಕ ವೈದ್ಯಕೀಯ ಜಗತ್ತು ಹಲವು ಔಷಧಗಳನ್ನು ಪತ್ತೆ ಮಾಡಿರುವುದು ನಿಜ. ಆದರೆ ಈ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡುವ ಸಮರ್ಪಕ ಔಷಧ ಇಂದಿಗೂ ಸಿಕ್ಕಿಲ್ಲ ಎಂಬುದು ಅಷ್ಟೇ ಸತ್ಯ.

2030ಕ್ಕೆ ರ ಹೊತ್ತಿಗೆ ಏಡ್ಸ್ ಮುಕ್ತ ಪೀಳಿಗೆ

ಡಿಸೆಂಬರ್ 1 ನ್ನು ಪ್ರತಿವರ್ಷ ವಿಶ್ವ ಏಡ್ಸ್(AIDS- Acquired immunodeficiency syndrome) ದಿನವನ್ನಾಗಿ ಆಚರಿಸಿ, ಈ ರೋಗದ ಕುರಿತು ಜಾಗೃತಿ ಕಾರ್ಯಗಳನ್ನು ಆಯೋಜಿಸಲು, 1988 ರಿಂದ ವಿಶ್ವ ಆರೋಗ್ಯ ಸಂಸ್ಥೆ ಆರಂಭಿಸಿತು.

ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಈ ದಿನ ಆಚರಿಸಲಾಗುತ್ತದೆ. My Health, My Right(ನನ್ನ ಆರೋಗ್ಯ, ನನ್ನ ಹಕ್ಕು) ಎಂಬುದು ಈ ಬಾರಿಯ ಧ್ಯೇಯ ವಾಕ್ಯ.

ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ

ವರದಿಯೊಂದರ ಪ್ರಕಾರ ಕೇವಲ 2017 ರಲ್ಲಿ 40 ದಶಲಕ್ಷಕ್ಕೂ ಹೆಚ್ಚು ಜನ ಎಚ್ ಐವಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ 36 ದಶಲಕ್ಷಕ್ಕೂ ಹೆಚ್ಚು ಜನ ಎಚ್ ಐವಿ ರೋಗದಿಂದ ಬಳಲುತ್ತಿದ್ದಾರೆ!

ಏಡ್ಸ್ ಕುರಿತು ನೀವು ತಿಳಿದಿರಲೇಬೇಕಾದ 8 ಸಂಗತಿಗಳು

ವಿಶ್ವ ಏಡ್ಸ್ ದಿನದ ನಿಮಿತ್ತ ಟ್ವಿಟ್ಟರ್ ನಲ್ಲಿ #WorldAIDSDay ಎಂಬ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಆಗಿದ್ದು, ಹಲವು ಗಣ್ಯರು ಏಡ್ಸ್ ಕುರಿತು ಇನ್ನಾದರೂ ಜಾಗೃತಿ ಮೂಡಲಿ, ಈ ರೋಗ ಯಾರನ್ನೂ ಬಾಧಿಸದಿರಲಿ ಎಂದು ಹಾರೈಸಿದ್ದಾರೆ.

ಪ್ರತಿಯೊಬ್ಬರಿಗೂ ಚಿಕಿತ್ಸೆ ಸಿಗಬೇಕು!

ಇಂದು ವಿಶ್ವ ಏಡ್ಸ್ ದಿನ. ಪ್ರತಿಯೊಬ್ಬರೂ ಎಚ್ ಐವಿ ಕುರಿತು ಎಚ್ಚರಿಕೆ ವಹಿಸಬೇಕು, ಮತ್ತು ಎಲ್ಲರಿಗೂ ಚಿಕಿತ್ಸೆ ಸಿಗಬೇಕು ಎಂಬುದು ಸಾರ್ವತ್ರಿಕ ಆರೋಗ್ಯದ ಮೊದಲ ಗುರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ...

ಎಚ್ ಐವಿ ರೋಗ ಪತ್ತೆಯಾಗಿ 34 ವರ್ಷಗಳಾದವು. ಆದರೆ ಇಂದಿಗೂ ಅದಕ್ಕೆ ಸರಿಯಾದ ಔಷಧ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣವೇನು? ನಾವು ಕೆಲವು ಪ್ರಶ್ನೆಗಳನ್ನು ಕೇಳಲೇ ಬೇಕು, ಇದಕ್ಕೆ ಔಷಧ ಪತ್ತೆಮಾಡಿಬಿಟ್ಟರೆ ಔಷಧ ಕಂಪೆನಿಗಳು ಬೀಗಜಡಿಯಬೇಕಾಗುತ್ತದೆ ಎಂಬ ಭಯದಿಂದ ಔಷದಿ ಪತ್ತೆಯಾಗಿಲ್ಲವೇ? ಅಥವಾ ಇದಕ್ಕೆ ಔಷಧ ಕಂಡುಹಿಡಿಯಲು ಸಾಧ್ಯವಾಗದಷ್ಟು, ನಮ್ಮ ವೈದ್ಯರು ಬುದ್ಧಿವಂತರಲ್ಲವೇ? ಅಥವಾ ಆ ವೈರಸ್ ನಮಗಿಂತ ಬುದ್ಧಿವಂತವಾಗಿದೆಯೇ..? ಎಂದು ಕ್ರಿಸ್ಟೊ ಎನ್ನುವವರು ಪ್ರಶ್ನಿಸಿದ್ದಾರೆ.

ನನ್ನದು ಮೂರು ಹರಕೆಗಳಿವೆ!

ಇಂದು ವಿಶ್ವ ಏಡ್ಸ್ ದಿನ. ಹರಕೆಗಳು ಈಡೇರುವುದಾದರೆ ನನ್ನದು ಮೂರು ಹರಕೆಗಳಿವೆ. ದಯವಿಟ್ಟು ಈ ರೋಗದಿಂದ ಬಳಲುವ ರೋಗಿಗಳು ಗುಣ ಹೊಂದುವಂತಾಗಲಿ, ಇಂಥ ಇನ್ಯಾವುದೇ ಪ್ರಕರಣ ದಾಖಲಾಗದಿರಲಿ, ಈ ರೋಗಿಗಳನ್ನು ಕಳಂಕ ಎಂಬಂತೆ ನೋಡುವ ಸಮಾಜದ ದೃಷ್ಟಿಕೋನ ಬದಲಾಗಲಿ ಎಂದು ಡಾ.ಜಿಯಾ ಸಿಸಾನ್ ಎಂಬುವವರು ಅರ್ಥವತ್ತಾಗಿ ಟ್ವೀಟ್ ಮಾಡಿದ್ದಾರೆ.

ಎಲ್ಲರೂ ಒಗ್ಗಟ್ಟಿಂದ ಹೋರಾಡಬೇಕಿದೆ

ವಿಶ್ವ ಏಡ್ಸ್ ದಿನ ನಮಗೆ ಒಗ್ಗಟ್ಟಿನಿಂದ ಹೋರಾಡುವ ಅವಕಾಶ ನೀಡಿದೆ. ಈ ರೋಗ ತಡೆಯುವ ಏಕೈಕ ಮಾರ್ಗವೆಂದರೆ ಜಾಗೃತಿ ಮಾತ್ರ. ಇದರ ಕುರಿತು ಎಲ್ಲೆಲ್ಲೂ ಜಾಗೃತಿ ಮೂಡುವ ಅಗತ್ಯವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World AIDS Day, designated on 1 December every year since 1988, is dedicated to raising awareness of the AIDS pandemic caused by the spread of HIV infection, and mourning those who have died of the disease. Here are some twitter comments on World AIDS Day 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ