ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಉಗ್ರರ ದಾಳಿಗೆ ಪೊಲೀಸ್ ಅಧಿಕಾರಿ, ಮಹಿಳೆ ಸೇರಿ 4 ಬಲಿ

ಸಂಸತ್ ಆವರಣ ಹಾಗೂ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಮೇಲೆ ಇಬ್ಬರು ಉಗ್ರರಿಂದ ಪ್ರತ್ಯೇಕ ಗುಂಡಿನ ದಾಳಿ

|
Google Oneindia Kannada News

ಲಂಡನ್, ಮಾರ್ಚ್ 22: ಇಲ್ಲಿನ ಬ್ರಿಟನ್ ಸಂಸತ್ ಆವರಣ ಹಾಗೂ ಅಲ್ಲಿಗೆ ಹತ್ತಿರವಿರುವ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ನಡೆದ ಪ್ರತ್ಯೇಕ ಶೂಟೌಟ್ ನಲ್ಲಿ ಒಬ್ಬ ಪೊಲೀಸ್, ಮಹಿಳೆ ಸೇರಿ ನಾಲ್ವರು ಬಲಿಯಾಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.

ಏತನ್ಮಧ್ಯೆ, ಭದ್ರತಾ ಸಿಬ್ಬಂದಿ ನಡೆಸಿರುವ ಪ್ರತಿದಾಳಿಗೆ ಒಬ್ಬ ಉಗ್ರ ಹತನಾಗಿದ್ದು ಮತ್ತೊಬ್ಬ ಉಗ್ರನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಲಂಡನ್ ಪ್ರಾಂತ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Shootout near Britain Parliament

ಮೂಲಗಳ ಪ್ರಕಾರ, ಅಜ್ಞಾತ ವ್ಯಕ್ತಿಯೊಬ್ಬ ಸಂಸತ್ ಆವರಣವನ್ನು ಪ್ರವೇಶಿಸಿದ್ದ. ಒಳಗೆ ಅಧಿವೇಶನ ನಡೆಯುತ್ತಿತ್ತು. ಆ ವೇಳೆಯೇ ಆತ ಆವರಣದಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಇವರಲ್ಲೊಬ್ಬರು ಮಹಿಳೆ ಎಂದು ತಿಳಿದುಬಂದಿದೆ. ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿನಿಸ್ಟರ್ ಬಿಡ್ಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಸಂಸತ್ತಿನಲ್ಲಿ ಆದ ದಾಳಿಯ ವೇಳೆ, ಅಜ್ಞಾತ ವ್ಯಕ್ತಿಯು ಸಂಸತ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಪೊಲೀಸ್ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ತಕ್ಷಣವೇ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಕೆಲವು ಗಂಟೆಗಳ ಚಿಕಿತ್ಸೆ ಬಳಿಕ ಆ ಅಧಿಕಾರಿ ಸಾವನ್ನಪ್ಪಿದ್ದಾರೆ.

ಸುಮಾರು 10ರಿಂದ 12 ವ್ಯಕ್ತಿಗಳಿದ್ದ ಕಾರೊಂದು ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಬಳಿ ಜನರ ಮೇಲೆ ರಭಸವಾಗಿ ನುಗ್ಗಿತು. ಆಗ ಒಬ್ಬರು ಅಸುನೀಗಿ, ಹಲವಾರು ಮಂದಿ ಗಾಯಗೊಂಡರು. ನೋಡ ನೋಡುತ್ತಿದ್ದಂತೆ ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ಶೂಟೌಟ್ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿ ಗುಂಡಿನ ದಾಳಿಗೆ ಒಬ್ಬ ದಾಳಿಕೋರ ಬಲಿಯಾಗಿದ್ದಾನೆ. ಶೂಟರ್ ಗಳು ಯಾರೆಂಬ ಮಾಹಿತಿ ಇನ್ನೂ ಪೊಲೀಸರಿಗೆ ಲಭ್ಯವಾಗಿಲ್ಲ. ಸದ್ಯಕ್ಕೆ ಸಂಸತ್ ಕಲಾಪ ಸ್ಥಗಿತಗೊಂಡಿದ್ದು, ಶೂಟರ್ ಗಳ ಜಾಲ ಬೇಧಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.

Shootout near Britain Parliament

ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದು, ತನಿಖೆ ಮುಂದುವರಿದಿದೆ. ವೆಸ್ಟ್ ಮಿನಿಸ್ಟರ್ ಪ್ರಾಂತ್ಯದ ಪೊಲೀಸರು ಈ ದಾಳಿಗಳನ್ನು ಭಯೋತ್ಪಾದಕ ದಾಳಿಯೆಂದು ಪರಿಗಣಿಸುವುದಾಗಿ ಹೇಳಿದ್ದಾರೆ.

English summary
There are reports of shots being fired outside the Houses of Parliament and the Palace of Westminster in London on March 22, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X