ಹುಲಿ, ಮೇಕೆಯ ಹಾಡು..."ಯೇ ದೋಸತಿ ಹಮ್ ನಹಿ ಛೋಡೆಂಗೆ"

Subscribe to Oneindia Kannada

ರಷ್ಯಾ, ಜನವರಿ , 06: "ಯೇ ದೊಸತಿ ಹಮ್ ನಹಿ ಛೊಡೆಂಗೆ" ಈ ಹಾಡಿನ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಶೋಲೆ ಚಿತ್ರದ ಗೀತೆ ಮಾಡಿದ್ದ ಮ್ಯಾಜಿಕ್ ಇಂದಿಗೂ ಮುಂದುವರಿದೇ ಇದೆ.

ಇದೇ ಹಾಡನ್ನು ಇದೀಗ ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್ ನಲ್ಲಿ ಹುಲಿ ಮತ್ತು ಮೇಕೆ ಹಾಡಿಕೊಂಡು ಓಡಾಡುತ್ತಿವೆ. ಆಹಾರವಾಗಿ ನೀಡಿದ್ದ ಮೇಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಹುಲಿರಾಯ ತನ್ನ ಗೆಳೆಯನ ಕಾವಲಿಗೆ ನಿಂತಿದ್ದಾನೆ.[ಪುಣ್ಯಕೋಟಿಯ ಹಾಡು ಮೆಲಕು ಹಾಕಿ]

tiger

ಹುಲಿ ಮತ್ತು ಮೇಕೆ ಪಕ್ಕಾ ಮಕ್ಕಳಂತೆ ಆಟವಾಡುವುದನ್ನು ನೋಡುವುದೇ ಸೊಬಗು. ಹುಲಿಯ ಜಾಗದಲ್ಲಿ ಮೇಕೆ ಆಕ್ರಮಿಸಿದೆ. ಇಲ್ಲಿ ಇಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ.

ಹುಲಿ ಹೆಸರು ಆಮುರ್(ಹುಲಿ) ಈಗ ಉದ್ಯಾನವನದ ಸಿಬ್ಬಂದಿ ಮೇಕೆಗೆ ತೀಮೂರ್ ಎಂದು ಹೆಸರಿಟ್ಟಿದ್ದಾರೆ. ಹುಲಿ ಮತ್ತು ಮೇಕೆ ಸ್ನೇಹದ ಪರ್ವ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ.[ಶೋಲೆ ಚಿತ್ರದ ದೋಸತಿ ಹಾಡನ್ನು ನೋಡಿಕೊಂಡು ಬನ್ನಿ]

ಒಬ್ಬರ ಮೈ ಮೇಲೆ ಒಬ್ಬರು ಕುಳಿತುಕೊಳ್ಳುತ್ತಾರೆ. ಒಬ್ಬರನ್ನು ಒಬ್ಬರು ಬೆದರಿಸಿಕೊಂಡು ಓಡುತ್ತಾರೆ, ಹಿಂಬಾಲಿಸುತ್ತಾರೆ, ಜಿಗಿಯುತ್ತಾರೆ... ಒಟ್ಟಿನಲ್ಲಿ ಎಲ್ಲ ಬಗೆಯ ಆಟಗಳನ್ನುಆಡುತ್ತಿರುತ್ತವೆ. ಹಿಂಸೆಯ ಪ್ರತೀಕ ಎಂಬಂತೆ ತೋರುತ್ತಿರುವ ಮಾನವನಿಗೆ ಈ ಕ್ರೂರ ಮೃಗ ಮಾದರಿ ಎಂದರೂ. ತಪ್ಪಲ್ಲ. ಮೇಕೆ ಸ್ನೇಹಕ್ಕೆ ಸಿಕ್ಕ ಘೋರ ವ್ಯಾಘ್ರನಿಗೂ ಮೇಕೆಯ ಸಾಧು ಗುಣವೇ ಬಂದಿದೆಯೇ ಗೊತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Russia: 2015 November when Timur the goat entered Amur the tiger's den as nothing more than a piece of live meat. Today, their friendship is still blossoming. Here is a look of new friends.
Please Wait while comments are loading...