ಕುಚಿಕು.. ಕುಚಿಕು.. ಕುಚಿಕು..: ಹಸುವಿನೊಂದಿಗೆ ಹಾವಿನ ದೋಸ್ತಿ- ವೈರಲ್ ಆಯ್ತು ವಿಡಿಯೋ..!

ಜಗತ್ತಿನಲ್ಲಿ ಅನೇಕ ಜೀವಿಗಳಿವೆ. ಕೆಲವು ವಿಷಕಾರಿ ಜೀವಿಗಳಾಗಿದ್ದರೆ ಇನ್ನೂ ಕೆಲವು ಸೌಮ್ಯ ಸ್ವಭಾವದ ಪ್ರಾಣಿಗಳು. ಈ ಜೀವಿಗಳ ಸ್ವಭಾವವೇ ಹಾಗೆ. ಗೋವಿನ ಬಗ್ಗೆ ಮಾತನಾಡುವುದಾದರೆ ಹಸುವನ್ನು ಅತ್ಯಂತ ಶಾಂತಿಯುತ ಜೀವಿ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಹಾವು ತುಂಬಾ ಕೋಪಗೊಳ್ಳುವ ಜೀವಿ.

ಆದರೆ ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಎರಡೂ ಜೀವಿಗಳ ನಡೆ ಆಚ್ಚರಿ ಮೂಡಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಾವು ಮತ್ತು ಹಸು ಪರಸ್ಪರ ಪ್ರೀತಿಸುತ್ತಿರುವುದು ಕಂಡು ಬಂದಿದೆ.

friendship-of-snake-with-cow

ಹಸು ಹಾವನ್ನು ನೆಕ್ಕುತ್ತದೆ

ವಿಡಿಯೋದಲ್ಲಿ ಹಸು ಹಾವನ್ನು ನೆಕ್ಕುತ್ತಿದೆ. ಆಶ್ಚರ್ಯವೆಂದರೆ ಹಾವು ಹಸುವಿನ ಮೇಲೆ ದಾಳಿ ಮಾಡುತ್ತಿಲ್ಲ. ಓಡಿ ಕೂಡ ಹೋಗುತ್ತಿಲ್ಲ. ಇಬ್ಬರ ನಡುವಿನ ಪ್ರೀತಿಯ ಈ ಅದ್ಭುತ ವಿಡಿಯೋ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಾವು ಮತ್ತು ಹಸುವಿನ ಪ್ರೀತಿ

ಹಾವು ಮತ್ತು ಹಸು ಪರಸ್ಪರ ಪ್ರೀತಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇಂತಹ ವೀಡಿಯೋವನ್ನು ನೀವು ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಹಾವು ಹಸುಗೂ ಪ್ರೀತಿಸಲು ಪ್ರೀತಿಯಿಂದ ಅವಕಾಶ ನೀಡುತ್ತಿದೆ. ಅದು ಹಸು ಮೇಲೆ ಮೇಲೆ ದಾಳಿ ಮಾಡುವುದಿಲ್ಲ ಅಥವಾ ಹಸುವನ್ನು ಹೆದರಿಸುವ ಯಾವುದೇ ಪ್ರತಿಕ್ರಿಯೆ ಕೂಡ ನೀಡುವುದಿಲ್ಲ. ವಿಡಿಯೋವನ್ನು ಹಂಚಿಕೊಂಡಿರುವ ಸುಶಾಂತ್ ನಂದಾ ಈ ದೃಶ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದು ಶುದ್ಧ ಪ್ರೀತಿಯಿಂದ ಗೆಲಲ್ಲು ಮಾತ್ರ ಸಾಧ್ಯ ಎಂದು ಅವರು ಬರೆದಿದ್ದಾರೆ.

ಆಶ್ಚರ್ಯಗೊಂಡ ವಿಡಿಯೋ ನೋಡಿದ ಜನ

ಹಸು ಮತ್ತು ಹಾವು ಒಂದಕ್ಕೊಂದು ತುಂಬಾ ಹತ್ತಿರವಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾವು ತಲೆ ಎತ್ತಿ ಕುಳಿತಿರುವ ರೀತಿ ನೋಡಿದರೆ ಅದು ಯಾವಾಗ ಬೇಕಾದರೂ ದಾಳಿ ಮಾಡಬಹುದೆಂದು ತೋರುತ್ತದೆ. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ನಾಗರ ಹಾವು ಹಸುವಿನ ಪಕ್ಕದಲ್ಲಿ ಶಾಂತವಾಗಿ ಕುಳಿತಿದೆ. ಹಾವು ಕೋಪಗೊಂಡಂತೆ ಕಾಣುತ್ತಿಲ್ಲ. ಹಸು ಕೂಡ ವಿಷಪೂರಿತ ನಾಗರ ಹಾವನ್ನು ಪ್ರೀತಿಯಿಂದ ನೆಕ್ಕುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡ ನಂತರ ಸಾಕಷ್ಟು ವೈರಲ್ ಆಗಿದೆ. ಹಲವಾರು ಜನ ಇದನ್ನು ರೀಟ್ವಿಟ್ ಮಾಡಿದ್ದಾರೆ. ಹಲವರು ಇದನ್ನು ಕಂಡು ಮೆಚ್ಚಿಕೊಂಡಿದ್ದಾರೆ.

ಹಾವನ್ನು ತಿಂದ ಜಿಂಕೆ

ಸಸ್ಯಾಹಾರಿ ಪ್ರಾಣಿ ಮತ್ತೊಂದು ಜೀವಿಯನ್ನು ತಿನ್ನುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದಕ್ಕೆ ಬಹುತೇಕರು ಇಲ್ಲ ಎಂದು ಉತ್ತರ ನೀಡಿರಬಹುದು. ಇಂತಹ ಪ್ರಶ್ನೆ ಉದ್ಬವಿಸಲು ಕಾರಣ ಕಾಡಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ಈ ಅಪರೂಪದ ಘಟನೆ ಕಾಡಿನಲ್ಲಿ ಸಂಭವಿಸಿದೆ. ಜೊತೆಗೆ ಈ ವಿಡಿಯೋ ಇಂಟರ್ನೆಟ್ನಲ್ಲಿ ಭಾರೀ ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಇತ್ತೀಚೆಗೆ ಜಿಂಕೆ ಸಣ್ಣ ಹಾವನ್ನು ಜಗಿಯುತ್ತಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ವೀಡಿಯೋದಲ್ಲಿ ಜಿಂಕೆಯೊಂದು ರಸ್ತೆಬದಿಯಲ್ಲಿ ನಿಂತು ಏನೋ ಅಗಿಯುತ್ತಿರುವುದು ಕಾಣಿಸುತ್ತದೆ. ವಾಹನದೊಳಗಿದ್ದವರು ಝೂಮ್ ಮಾಡಿ ನೋಡಿದಾಗ ಜಿಂಕೆ ಸಣ್ಣ ಹಾವಿನ ದೇಹವನ್ನು ಜಗಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+