• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ನೇಹ ಎಂದೆಂದಿಗೂ ಮಧುರ, ಸ್ನೇಹ ಚಿರಕಾಲ ಇರಲಿ

By ದಿವ್ಯಶ್ರೀ, ಬೆಂಗಳೂರು
|

ಸ್ನೇಹ ಎನ್ನುವುದು ಎಲ್ಲರ ಎರಡನೇ ಕುಟುಂಬ, ಪವಿತ್ರವಾದ ಸ್ನೇಹದಲ್ಲಿ ಎಂದೆಂದಿಗೂ ನಿಷ್ಕಲ್ಮಶವಾದ, ಸ್ವಾರ್ಥವಿಲ್ಲದ ಪ್ರೀತಿ ಇರುತ್ತದೆ, ನಿಜವಾದ ಸ್ನೇಹಕ್ಕೆ ಯಾವುದೇ ರೀತಿ ಜಾತಿ-ಧರ್ಮ ಇರುವುದಿಲ್ಲ ಅದು ಕೇವಲ ನಂಬಿಕೆಯನ್ನು ಅವಲಂಬಿಸುತ್ತದೆ, ಇಂದು ವಿಶ್ವ ಸ್ನೇಹಿತರ ದಿನಾಚರಣೆ, 1930 ರಂದು ಸ್ನೇಹಿತರ ದಿನ ಆಚರಣೆಗೆ ಬಂದಿದೆ, ಈ ದಿನವನ್ನು ಕೆಲವು ದೇಶಗಳು ಆಚರಿಸುತ್ತದೆ,

ಒಂದೊಂದು ರಾಷ್ಟ್ರವು ಒಂದೊಂದು ದಿನ ಸ್ನೇಹಿತರ ದಿನವನ್ನು ಆಚರಿಸುತ್ತಿದೆ.

ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಆಗಸ್ಟ್ ನಲ್ಲಿ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸುತ್ತೇವೆ, ಇದನ್ನು ರಾಷ್ಟ್ರಮಟ್ಟದಲ್ಲಿ ಎಲ್ಲಾ ಸ್ನೇಹಿತರು ಆಚರಿಸುವ ದಿನವಾಗಿದೆ, ಇನ್ನು ಈ ಸ್ನೇಹಿತರ ದಿನಾಚರಣೆಯಲ್ಲಿ ಕೆಲವರು ತಮ್ಮ ಆಪ್ತಮಿತ್ರರಿಗೆ ಪರಸ್ಪರ ಉಡುಗೊರೆ ಗಳನ್ನು ಹಂಚಿಕೊಳ್ಳುವುದು, ಒಟ್ಟಿಗೆ ಇಡೀ ದಿನ ಕಳೆಯುವುದು ಹಾಗೂ ಶುಭಾಶಯ ಹೇಳಿ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತಾರೆ, ಸ್ನೇಹಿತ ಅಂದರೆ ಕೇವಲ ಜೊತೆಗೆ ಸುತ್ತಾಡುತ್ತಾ ಸಮಯ ವ್ಯರ್ಥ ಮಾಡುವುದಕ್ಕೆ ಅಲ್ಲ, ಸ್ನೇಹ ಎಂದರೆ ಸ್ನೇಹಿತರ ನಡುವಿನ ಒಂದು ಅಮೂಲ್ಯವಾದ ಬಾಂಧವ್ಯ, ಸ್ನೇಹಿತರಲ್ಲಿ ಪರಸ್ಪರ ನಂಬಿಕೆ, ಗೌರವ, ಕಾಳಜಿ, ಪ್ರೀತಿ ಎಲ್ಲವೂ ಶಾಶ್ವತವಾಗಿ ಇರಬೇಕು.

ಪ್ರೀತಿ ಇದ್ದಲ್ಲಿ ಸ್ನೇಹವೇಕಿರುತ್ತೆ? ಸ್ನೇಹದ ಚೆಂದದ ಉತ್ತರ ಕೇಳಿ...

ಒಬ್ಬ ಒಳ್ಳೆಯ ಸ್ನೇಹಿತನ ಆಗಮನದಲ್ಲಿ ನಮ್ಮ ಜೀವನ ವಿಶೇಷವಾಗಿ ಮುನ್ನಡೆಯಲು ಬೃಹತ್ ತಿರುವನ್ನು ಪಡೆಯುತ್ತದೆ, ಸ್ನೇಹಕ್ಕೆ ಎಂದೆಂದು ವಯಸ್ಸಿನ ಭೇದವಿಲ್ಲ, ನಮ್ಮ ತಪ್ಪನ್ನು ಸರಿಮಾಡಿ ಅದನ್ನು ತಿದ್ದಿ ನಮಗೆ ಬೆಂಬಲವಾಗಿದ್ದು, ನಮ್ಮನ್ನು ಕೈಯೆತ್ತಿ ಮುನ್ನಡೆಸುವವನು ನಿಜವಾದ ಸ್ನೇಹಿತ, ವರ್ಷಕ್ಕೆ ಒಂದು ದಿನ ಮಾತ್ರ ಸ್ನೇಹವನ್ನು ನೆನಪಿಸಿಕೊಂಡು ತನ್ನ ಸ್ನೇಹಿತರಿಗೆ ಶುಭಾಶಯ ಹೇಳುವುದು ಸ್ನೇಹವಲ್ಲ, ಪ್ರತಿದಿನ ತಮ್ಮ ಸ್ನೇಹಿತರಿಗೆ ಪರಸ್ಪರ ಬೆನ್ನೆಲುಬಾಗಿ ಇಷ್ಟ-ಕಷ್ಟಗಳ ಸಮಯದಲ್ಲಿ ಜೊತೆಯಾಗಿದ್ದು ನೋವು ನಲಿವಿನಲ್ಲಿ ಭಾಗಿಯಾಗಿ ತಮ್ಮ ಸ್ನೇಹಿತರನ್ನು ಕೈಬಿಡದೆ ಇರುವವರು ಮಾತ್ರ ನಿಜವಾದ ಸ್ನೇಹಿತರು.

ಇನ್ನು ಕೆಲವರು ಎಷ್ಟೇ ದೂರವಿದ್ದರೂ ಹೊರದೇಶದಲ್ಲಿದ್ದರು ತಮ್ಮ ಸ್ನೇಹಿತರನ್ನು ಮರೆಯದೆ ಸಂಪರ್ಕದಲ್ಲಿದ್ದು ಪ್ರತಿದಿನ ಕೆಲವು ಸಮಯ ಫೋನ್ ನಲ್ಲಾದರೂ ತಮ್ಮ ಸ್ನೇಹಿತರಿಗೆ ಮೀಸಲಿಟ್ಟು ಮಾತನಾಡುವವರು ನಿಜವಾದ ಸ್ನೇಹಿತರು, ಶಾಲಾ-ಕಾಲೇಜುಗಳಲ್ಲಿ ಜೊತೆಗೆ ಓದಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು ತಮ್ಮ ಸ್ನೇಹವನ್ನು ಬಿಡದೆ ತಮ್ಮ ಸ್ನೇಹಿತರಿಗೆ ಸಮಯ ಕೊಡುವವರು, ಅಂತ ಸ್ನೇಹಿತರಿಗೆ ವಿಶ್ವ ಸ್ನೇಹಿತರ ದಿನ ಅರ್ಪಣೆ ಎಂದರೆ ತಪ್ಪಲ್ಲ, ಸ್ನೇಹವೆಂಬುದು ಚಿಕ್ಕ ಸಸಿ ಅದನ್ನು ಪ್ರೀತಿ, ನಂಬಿಕೆ, ವಿಶ್ವಾಸ ಎಂಬ ನೀರು, ಗೊಬ್ಬರವನ್ನು ಹಾಕಿದರೆ ಗಿಡದ ಬೇರು ಗಟ್ಟಿಯಾಗಿ ದೊಡ್ಡ ಹೆಮ್ಮರವಾಗಿ ಶಾಶ್ವತವಾಗಿ ನೆಲೆಸುತ್ತದೆ.

ಸ್ನೇಹಿತ, ಕುಚೇಲನ ಹಿಡಿ ಅವಲಕ್ಕಿಯಲ್ಲೇ ಸಂತೃಪ್ತಿ ಪಡುವ ಕೃಷ್ಣನಂಥವನು!

ಜೀವದ ಗೆಳೆಯರನ್ನು ಪಡೆಯುವುದಕ್ಕು ಪುಣ್ಯ ಮಾಡಿರ ಬೇಕು, ಅಂತಹ ಗೆಳೆಯರನ್ನು ಪಡೆದಿರುವರು ಪುಣ್ಯವಂತರು, ಒಬ್ಬ ಒಳ್ಳೆಯ ಗೆಳೆಯ ನಮ್ಮ ಜೊತೆಗಿದ್ದರೆ ನಮ್ಮ ಜೀವನದಲ್ಲಿ ನಾವೆಂದಿಗೂ ತಪ್ಪು ದಾರಿಗೆ ಹೋಗುವುದಕ್ಕೆ ಸಾಧ್ಯವೇ ಇಲ್ಲ, ಸ್ನೇಹವಿಲ್ಲದ ಜಗತ್ತನ್ನು ಊಹಿಸಿಕೊಳ್ಳಲ್ಲು ಸಾಧ್ಯವಿಲ್ಲ, ಎಲ್ಲ ವಯಸ್ಕರಿಗೂ ಅವರದೆ ಸ್ನೇಹಿತರ ಗುಂಪು ಇರುತ್ತದೆ, ಎಲ್ಲರೂ ಅವರವರದೇ ರೀತಿಯಲ್ಲಿ ಹೊಟ್ಟಿಗೆ ಹರಟೆಯನ್ನು ಮಾಡುತ್ತಾ ಖುಷಿಯಿಂದ ಇರುತ್ತಾರೆ, ಯಾವ ನಿರೀಕ್ಷೆಯೂ ಇಲ್ಲದ ಹೃದಯದಲ್ಲಿ ಸದಾ ಶಾಶ್ವತವಾಗಿ ನೆಲೆಸಿರುವ ಈ ಸ್ನೇಹವೇ ಬಿಡದ ನಂಟು, ಈ ಸ್ನೇಹಕ್ಕೆ ಎಂಬುದು ಇಲ್ಲ, ಲಿಂಗಭೇದವಿಲ್ಲ, ಯಾವುದೇ ಸಂಬಂಧ ವಾಗಿಲಿ ಸ್ನೇಹವಿಲ್ಲದೇ ಇರಲು ಸಾಧ್ಯವಿಲ್ಲ, ಎಲ್ಲಾ ಸಂಬಂಧಗಳಲ್ಲೂ ಸ್ನೇಹ ಇದ್ದೇ ಇದೆ, ಸ್ನೇಹ ಎಂಬುದು ಕನ್ನಡಿಯಾಗೆ ಅದನ್ನು ಎಷ್ಟು ಜೋಪಾನ ಮಾಡಿತ್ತೇವೆಯೋ ಅಲ್ಲಿಯವರೆಗೂ ನಮ್ಮ ಜೊತೆ ಇದ್ದೇ ಇರುತ್ತದೆ, ನಾವು ಅಳುತ್ತಿದ್ದರೆ ಅದೆಂದಿಗೂ ಅಳುವುದಿಲ್ಲ

ಕೆಲವೊಮ್ಮೆ ನಮ್ಮ ಕುಟುಂಬದವರ ಜೊತೆ ಹಂಚಿಕೊಳ್ಳಲಾಗದ ಮಾತನ್ನು ನಾವು ನಮ್ಮ ಸ್ನೇಹಿತರ ಜೊತೆ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ, ಸ್ನೇಹಿತರ ಬಳಿ ನಮಗೆ ಯಾವುದೇ ರೀತಿ ಗುಟ್ಟು ಇರುವುದಿಲ್ಲ, ಅದಕ್ಕೆ ಹೇಳೋದು ನಮ್ಮ ಸ್ನೇಹಿತರು ನಮ್ಮ ಜಗತ್ತು ಎಂದು, ಸರಿನೋ ತಪ್ಪೋ ಆದರೆ ನಾವು ಎಂದೆಂದಿಗೂ ನಮ್ಮ ಗೆಳೆಯರ ಪರವಾಗಿ ಇದ್ದು ಅವರನ್ನು ಕೈ ಬಿಡದೆ ಸರಿಯಾದ ದಾರಿಗೆ ಕರೆತರುತ್ತೇವೆ, ಯಾರೇ ಕೈ ಬಿಟ್ಟರು ನಮ್ಮ ಸ್ನೇಹಿತರು ಕೈ ಬಿಡಲ್ಲ ಎನ್ನುವುದು ನಮ್ಮ ನಂಬಿಕೆಯು ಹೌದು , ಇಂದಿನ ಆನ್ಲೈನ್ ಜಗತ್ತಿನಲ್ಲಿ ನಿರೀಕ್ಷೆಯಿಂದ ಇರುವ ಗೆಳೆತನಗಳೆ ಹೆಚ್ಚು, ನಿರೀಕ್ಷೆ ವಿಲ್ಲದ ಗೆಳೆತನಗಳು ಕಮ್ಮಿಯಾಗುತ್ತಿದೆ, ಬಾಲ್ಯದ ಗೆಳೆತನವು ಎಂದೆಂದಿಗೂ ಶ್ರೇಷ್ಠ ಅದರಲ್ಲಿ ಯಾವುದೇ ನಿಷ್ಕಲ್ಮಶ ಇರುವುದಿಲ್ಲ, ದೊಡ್ಡವರಾದಮೇಲೆ ಗೆಳೆತನ ಮಾಡುವುದಕ್ಕೆ ಮುನ್ನ ಸ್ವಲ್ಪ ಯೋಚಿಸಬೇಕಾಗುತ್ತದೆ

ಸ್ನೇಹದ ಅನುಬಂಧಕ್ಕೆ ಈ ಫ್ರೆಂಡ್ ಶಿಪ್ ರಾಖಿ

ಯಾಕೆಂದರೆ ಯಾವ ವ್ಯಕ್ತಿಯು ಯಾವ ಉದ್ದೇಶ ಪೂರ್ವಕವಾಗಿ ನಮ್ಮ ಗೆಳೆತನ ಮಾಡುತ್ತಾರೆ ಎಂಬುದು ನಮಗೆ ಗೊತ್ತಿರುವುದಿಲ್ಲ ಆದರಿಂದ ಎಚ್ಚರಿಕೆ ಇಂದ ಯೋಚಿಸಿ ಸ್ನೇಹ ಮಾಡುವುದು ಒಳ್ಳೆಯದು, ನಮ್ಮ ಮಾತು ಎಲ್ಲರಿಗೂ ಕೇಳುತ್ತದೆ ಆದರೆ ನಮ್ಮ ಮೌನ ಒಬ್ಬ ನಿಜ ಸ್ನೇಹಿತನಿಗೆ ಮಾತ್ರ ಅರ್ಥವಾಗುತ್ತದೆ, ಒಂದು ಒಳ್ಳೆಯ ಸ್ನೇಹಿತ ಅತೀ ದೊಡ್ಡ ಮತ್ತು ದುಬಾರಿಯ ಆಸ್ತಿ.

ಕುಟುಂಬಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾ

ದಾರಿ ತಪ್ಪಿದಾಗ ಸರಿಯಾದ ಮಾರ್ಗ ತೋರಿಸುತ್ತಾ

ಕಷ್ಟಗಳಲ್ಲಿ ಹೆಗಲು ಕೊಡುತ್ತಾ

ಸುಖದಲ್ಲಿ ಜೊತೆಗೆ ನಲಿಯುತ್ತಾ

ಜೊತೆಗಿರುವವರು ಈ ನಮ್ಮ ಸ್ನೇಹಿತರು !!

ಕೇಳಿದರು ಬೆಂಬಲಿಸದ ಹೊರಗಿನವರು

ಕೇಳದಿದ್ದರೂ ನಮ್ಮವರು ಬಂದು ಬೆಂಬಲ ಕೊಡುವವರು

ನರಕವೇ ಆವರಿಸಿದರು

ಬಿಡದಿ ಕೈ ಹಿಡಿಯುವವರು

ಈ ನಮ್ಮ ಸ್ನೇಹಿತರು !!

ಇಂಥ ಅಮೂಲ್ಯ ಬಾಂಧವ್ಯಕ್ಕೆ ಯಾರು ಕಲ್ಲಾಕದಿರಲಿ

ನಮ್ಮೆಲ್ಲರ ಸ್ನೇಹ ಹೀಗೆ ಚಿರವಾಗಿರಲಿ !!

ಎಂದೆಂದಿಗೂ ಎಲ್ಲರ ಸ್ನೇಹ ಚಿರಕಾಲ ಇರಲಿ ಎಂದು ಬಯಸುತ್ತ ಎಲ್ಲರಿಗೂ ವಿಶ್ವ ಸ್ನೇಹಿತರ ದಿನಾಚರಣೆಯ ಶುಭಾಶಯಗಳು....!!!

English summary
Friendship day is a day for celebrating friendship. The day is a popular celebration in several South American countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more